ಜಮ್ಮು ಕಾಶ್ಮೀರ ಉಚ್ಚ ನ್ಯಾಯಾಲಯದಿಂದ ಸರಕಾರಕ್ಕೆ ಆದೇಶ !
ಶ್ರೀನಗರ – ಕಾಶ್ಮೀರಿ ಹಿಂದೂಗಳ ನಿರ್ಲಕ್ಷಿಸಿರುವ ದೇವಸ್ಥಾನಗಳು ಮತ್ತು ಧಾರ್ಮಿಕ ಸ್ಥಳಗಳು ಇವುಗಳನ್ನು ರಾಜ್ಯ ಸರಕಾರ ಸಂರಕ್ಷಣೆ ಮಾಡಬೇಕೆಂದು, ಜಮ್ಮು ಕಾಶ್ಮೀರ ಉಚ್ಚ ನ್ಯಾಯಾಲಯವು ಸರಕಾರಕ್ಕೆ ಆದೇಶ ನೀಡಿದೆ. ಈ ಬಗ್ಗೆ ಐತಿಹಾಸಿಕ ತೀರ್ಪು ನೀಡುವಾಗ ನ್ಯಾಯಮೂರ್ತಿ ಸಂಜೀವ ಕುಮಾರ್ ಇವರು ಕಾಶ್ಮೀರಿ ಹಿಂದೂ ಸಮುದಾಯದ ಸದಸ್ಯರ ಅರ್ಜಿ ದಾಖಲಿಸಿಕೊಂಡಿದ್ದರು ಮತ್ತು ಉತ್ತರ ಕಾಶ್ಮೀರದಲ್ಲಿನ ಗಾಂದರಬಲ ಜಿಲ್ಲೆಯ ಜಿಲ್ಲಾ ದಂಡಾಧಿಕಾರಿಗಳಿಗೆ ಹಿಂದುಗಳ ೨ ದೇವಸ್ಥಾನಗಳ ಜೋಪಾನ, ಸಂರಕ್ಷಣೆ ಮತ್ತು ನಿರ್ವಹಣೆ ಮಾಡುವಂತೆ ಆದೇಶ ನೀಡಿದೆ. ಇದರಲ್ಲಿ ಗಾಂದರಬಲ ಜಿಲ್ಲೆಯಲ್ಲಿನ ನುನೇರ ಗ್ರಾಮದಲ್ಲಿ ಇರುವ ‘ಅಷ್ಟಪನ ದೇವರಾಜ ಭಾರವ’ ಮತ್ತು ‘ವಿಧೂಷೆ’ ಈ ದೇವಸ್ಥಾನಗಳು ಸಮಾವೇಶವಿದೆ. ಉಚ್ಚ ನ್ಯಾಯಾಲಯವು ‘ಜಮ್ಮು ಕಾಶ್ಮೀರ ನಿರಾಶ್ರಿತರ ಸ್ಥಳದಲ್ಲಿನ ಆಸ್ತಿ (ಜೋಪಾನ, ಸಂರಕ್ಷಣೆ ಮತ್ತು ಆಪತ್ಕಾಲಿನ ಮಾರಾಟ ನಿಷೇಧ) ಕಾನೂನು, ೧೯೯೭’ರ ಅಡಿಯಲ್ಲಿ ಆವಶ್ಯಕ ನಿರ್ಧಾರ ಕೈಗೊಳ್ಳುಲು ಸರಕಾರಕ್ಕೆ ಆದೇಶ ನೀಡಿದೆ.
ಮುಸಲ್ಮಾನರು ಬಾಡಿಗೆಯ ಆಧಾರದಲ್ಲಿ ಪಡೆದಿರುವ ದೇವಸ್ಥಾನ ಹಾಳು ಮಾಡಿದರು !
ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಸ್ಥಳೀಯ ಹಿಂದೂ ಸಮುದಾಯಕ್ಕಾಗಿ ಗಾಂದರಬಲ ಜಿಲ್ಲೆಯಲ್ಲಿನ ಏಕೈಕ ರುದ್ರ ಭೂಮಿಯ ಮೇಲೆ ಮುಸಲ್ಮಾನ ಭೂಮಾಫಿಯಾದಿಂದ ಅತಿಕ್ರಮಣ ಮಾಡಿರುವ ಅಂಶಗಳು ಎತ್ತಿದ್ದಾರೆ. ಅರ್ಜಿದಾರರು, ೧೯೯೦ ರಲ್ಲಿ ಗಾಂಧರಬಲ ಜಿಲ್ಲೆಯ ಸಹಿತ ಸಂಪೂರ್ಣ ಕಾಶ್ಮೀರ ಕಣಿವೆಯಿಂದ ಕಾಶ್ಮೀರಿ ಹಿಂದುಗಳ ಸ್ಥಳಾಂತರವಾಯಿತು. ‘ಆ ಸಮಯದಲ್ಲಿ ಹಿಂದುಗಳು ಇಲ್ಲಿಯ ದೇವಸ್ಥಾನಗಳು ಮುಸಲ್ಮಾನರಿಗೆ ಬಾಡಿಗೆ ಆಧಾರದಲ್ಲಿ ನೀಡಿದ್ದರು; ಆದರೆ ಮುಸಲ್ಮಾನರು ದೇವಸ್ಥಾನದ ಸಂಪತ್ತಿಯನ್ನು ಹಾಳು ಮಾಡಿದ್ದಾರೆ ಮತ್ತು ದೇವಸ್ಥಾನದ ಭೂಮಿಯ ಮೇಲೆ ಅತಿಕ್ರಮಣ ಮಾಡಿದ್ದಾರೆ’, ಎಂದು ಅರ್ಜಿದಾರರು ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. (ಇದರಿಂದ ಮುಸಲ್ಮಾನರ ಮಾನಸಿಕತೆ ಸ್ಪಷ್ಟವಾಗುತ್ತದೆ ! – ಸಂಪಾದಕರು)
೮ ವಾರಗಳಲ್ಲಿ ಅತಿಕ್ರಮಣ ತೆರವುಗೊಳಿಸಲು ನ್ಯಾಯಾಲಯದ ಆದೇಶ !
ಉಚ್ಚ ನ್ಯಾಯಾಲಯವು ತೀರ್ಪಿನಲ್ಲಿ, ಈ ಆದೇಶದ ಪತ್ರ ದೊರೆತ ದಿನದಿಂದ ೮ ವಾರದೊಳಗೆ ರುದ್ರ ಭೂಮಿ ಸಹಿತ ದೇವಸ್ಥಾನದ ಸಂಪತ್ತಿ ಮೇಲೆ ನಡೆಸಿರುವ ಅತಿಕ್ರಮಣ ತೆರವು ಗೊಳಿಸುವುದಕ್ಕಾಗಿ ಜಿಲ್ಲಾ ನ್ಯಾಯ ದಂಡಾಧಿಕಾರಿಗಳು ಯೋಗ್ಯ ನಿರ್ಣಯ ತೆಗೆದುಕೊಳ್ಳಬೇಕು. (ಇದರ ಜೊತೆಗೆ ಈ ಅತಿಕ್ರಮಣ ನಡೆಸಿರುವವರ ಹೆಸರುಗಳನ್ನು ಘೋಷಿಸಿ ಅವರಿಗೆ ಕಠೋರ ಶಿಕ್ಷೆ ವಿಧಿಸಬೇಕೆಂದು ಹಿಂದೂಗಳ ಅಪೇಕ್ಷೆ ಆಗಿದೆ ! – ಸಂಪಾದಕರು) ಈ ತೀರ್ಪಿನಿಂದ ಕಾಶ್ಮೀರದಲ್ಲಿನ ಭೂಮಾಫಿಯಾ ಅತಿಕ್ರಮಣ ಮಾಡಿರುವ ಇಂತಹ ಅಸಂಖ್ಯೆ ಇಂದು ಧಾರ್ಮಿಕ ಸ್ಥಳಗಳ ಸಂಪತ್ತಿ ಸಂರಕ್ಷಣೆ ಆಗುವ ಆಸೆ ಚಿಗುರುತ್ತಿದೆ.
ಸಂಪಾದಕೀಯ ನಿಲುವುಹೀಗೆ ನ್ಯಾಯಾಲಯಕ್ಕೆ ಏಕೆ ಹೇಳಬೇಕಾಗುತ್ತದೆ ? ಸರಕಾರಿ ವ್ಯವಸ್ಥೆಗೆ ಇದು ಹೇಗೆ ಗಮನಕ್ಕೆ ಬರುವುದಿಲ್ಲ ! ಕಾಶ್ಮೀರದಲ್ಲಿನ ಜಿಹಾದಿ ಭಯೋತ್ಪಾದಕರು ಹಿಂದೂಗಳ ಸಹಿತ ಹಿಂದೂಗಳ ಸಾವಿರ ದೇವಸ್ಥಾನಗಳ ಮೇಲೆ ದಾಳಿ ಮಾಡಿರುವುದರಿಂದ ಮತ್ತು ಅದರಿಂದ ಹಿಂದೂಗಳಿಗೆ ಸ್ವಂತದ ಭೂಮಿಯನ್ನು ತ್ಯಜಿಸಬೇಕಾಗಿರುವುದರಿಂದ ಈ ದೇವಸ್ಥಾನಗಳನ್ನು ನಿರ್ಲಕ್ಷ ಮಾಡಲಾಗಿದೆ’, ಈ ಸತ್ಯ ಕೂಡ ಸಮಾಜದ ಎದುರು ಮಂಡಿಸುವುದು ಆವಶ್ಯಕವಾಗಿದೆ ! |