ನವದೆಹಲಿ – ದೆಹಲಿಯ ಸರಾಯಿ ನೀತಿಯ ಹಗರಣದ ಪ್ರಕರಣದಲ್ಲಿ ರಾಜ್ಯದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲರಿಗೆ ಸರ್ವೋಚ್ಚ ನ್ಯಾಯಾಲಯವು ಮಧ್ಯಂತರ ಜಾಮೀನು ನೀಡಿದೆ. ಈ ಮಧ್ಯಂತರ ಜಾಮೀನನನ್ನು ಜಾರಿ ನಿರ್ದೇಶನಾಲಯ(ಇಡಿ) ಬಂಧಿಸಿರುವ ಪ್ರಕರಣದಲ್ಲಿ ನೀಡಿದೆ.
ಕೆಲವು ದಿನಗಳ ಹಿಂದೆ ಕೇಜ್ರಿವಾಲರಿಗೆ ಈ ಪ್ರಕರಣದಲ್ಲಿ ಸಿಬಿಐನಿಂದ ಬಂಧಿಸಲಾಗಿದೆ. ಆದ್ದರಿಂದ ಕೇಜರಿವಾಲ ಅವರಿಗೆ ಸದ್ಯಕ್ಕೆ ಜೈಲೇ ಗತಿ. ಕೇಜರಿವಾಲ ಅವರಿಗೆ `ಇಡಿ’ಯಿಂದ ಬಂಧಿಸಲಾಗಿರುವ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಹಿರಿಯ ವಿಭಾಗೀಯಪೀಠಕ್ಕೆ ವಹಿಸಲಾಗಿದೆ. ಅಲ್ಲಿ ವಿಚಾರಣೆಯಾಗುವವರೆಗೆ ಅರವಿಂದ ಕೇಜರಿವಾಲ ಅವರಿಗೆ ಮಧ್ಯಂತರ ಜಾಮೀನು ನೀಡಸಲಾಗಿದೆ.