ಪ್ರಭು ಶ್ರೀರಾಮನನ್ನು ಅವಮಾನಿಸಿದ ಆಮಿರ್ ಅಲಿ ವಿರುದ್ಧ ದೂರು ದಾಖಲು !

ಕಾವಡ ಯಾತ್ರೆಗೂ ಮುನ್ನ ಬರೇಲಿಯಲ್ಲಿ ಧಾರ್ಮಿಕ ಸಾಮರಸ್ಯ ಕದಡುವ ಪ್ರಯತ್ನ !

ಬರೇಲಿ (ಉತ್ತರ ಪ್ರದೇಶ) – ಕಾವಡ ಯಾತ್ರೆಗೂ ಮುನ್ನ ಧಾರ್ಮಿಕ ಸೌಹಾರ್ದತೆಗೆ ಭಂಗ ತರಲು ಪ್ರಯತ್ನಿಸಿದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇಲ್ಲಿ ಆಮಿರ್ ಅಲಿ ಹೆಸರಿನ ಯುವಕನು ಭಗವಾನ್ ಶ್ರೀರಾಮನನ್ನು ಅವಮಾನಿಸುವ ವೀಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರ ಮಾಡಿದ್ದಾನೆ. ಜುಲೈ 10, 2024 ರಂದು, ಹಿಂದೂ ಸಂಘಟನೆಗಳು ಆಮಿರ್ ಅಲಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿ ಕಠಿಣ ಕ್ರಮಕ್ಕೆ ಒತ್ತಾಯಿಸಿದ್ದವು. (ಹಿಂದೂಗಳು ಯಾವಾಗಲೂ ಕಾನೂನಿನ ಮೂಲಕ ನ್ಯಾಯ ಪಡೆಯಲು ಪ್ರಯತ್ನಿಸುತ್ತಾರೆ. ಹಿಂದೂಗಳನ್ನು ಹಿಂಸಾತ್ಮಕ ಎಂದು ಹೇಳುವವರಿಗೆ ಹಿಂದೂಗಳ ಈ ಸಹಿಷ್ಣುತೆ ಕಾಣಿಸುವುದಿಲ್ಲ ! – ಸಂಪಾದಕರು) ಈ ದೂರಿನ ಆಧಾರದ ಮೇಲೆ ಪೊಲೀಸರು ಆಮಿರ್ ಅಲಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಆಮಿರ್ ಅಲಿಯು ತನ್ನ ಫೇಸ್‌ಬುಕ್‌ನಲ್ಲಿ ಪ್ರಸಾರ ಮಾಡಿರುವ ಆ ವೀಡಿಯೋದಲ್ಲಿ ಭಗವಾನ್ ಶ್ರೀರಾಮನಿಗೆ ತಾಯಿಯು ನಿಂದಿಸುತ್ತಿರುವುದನ್ನು ತೋರಿಸಲಾಗಿದೆ.

ಪೊಲೀಸ್ ಉಪನಿರೀಕ್ಷಕ ಪವನ ಕುಮಾರ ಇವರು, ಆಮಿರ್ ಅಲಿ ಭಗವಾನ್ ಶ್ರೀರಾಮನನ್ನು ನಿಂದಿಸುವ ಪದಗಳನ್ನು ಬಳಸಿ ಈ ವೀಡಿಯೊವನ್ನು ಪ್ರಸಾರ ಮಾಡಿದ್ದಾನೆ, ಎಂದು ಹೇಳಿದ್ದಾರೆ. ಆಮಿರ್ ಬರೇಲಿಯ ಬಾರಾದರಿ ಪ್ರದೇಶದ ನಿವಾಸಿಯಾಗಿದ್ದಾನೆ. ಆಮಿರ್ ಅಲಿ ಫೇಸ್‌ಬುಕ್‌ನಲ್ಲಿ ಇಂತಹ ವೀಡಿಯೊಗಳನ್ನು ಪೋಸ್ಟ್ ಮಾಡುವ ಮೂಲಕ ಮೊಹರಂ ಮತ್ತು ಕಾವಡ ಯಾತ್ರೆಗೂ ಮುನ್ನ ಉದ್ವಿಗ್ನತೆಯನ್ನು ಹರಡಲು ಬಯಸಿದ್ದನು ಎಂದು ಪೊಲೀಸರು ಆರೋಪಿಸಿದ್ದಾರೆ.

ಸಂಪಾದಕೀಯ ನಿಲುವು

ಹಿಂದೂಗಳನ್ನು ಅಸಹಿಷ್ಣು ಎನ್ನುವವರು ಇಂತಹ ಸಂದರ್ಭದಲ್ಲಿ ಮೌನವಾಗಿರುತ್ತಾರೆ, ಎಂಬುದನ್ನು ಗಮನಿಸಿ !