|
ನಂದ್ಯಾಲ್ (ಆಂಧ್ರಪ್ರದೇಶ) – 3ನೇ ತರಗತಿಯಲ್ಲಿ ಓದುತ್ತಿದ್ದ ಬಾಲಕಿಯ ಮೇಲೆ ಅದೇ ಶಾಲೆಯ ಮೂವರು ಅಪ್ರಾಪ್ತ ವಿದ್ಯಾರ್ಥಿಗಳು ಅತ್ಯಾಚಾರ ಎಸಗಿ ಕೊಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ವಿದ್ಯಾರ್ಥಿಗಳು ಸಾಕ್ಷ್ಯ ನಾಶಪಡಿಸಲು ಶವವನ್ನು ಕಾಲುವೆಗೆ ಎಸೆದಿದ್ದಾರೆ. ಶವ ಇನ್ನೂ ಪತ್ತೆಯಾಗಿಲ್ಲ. ಬಾಲಕಿಗೆ 8 ವರ್ಷ, 2 ಆರೋಪಿ ಮಕ್ಕಳಿಗೆ 12 ವರ್ಷ, ಮೂರನೇ ಆರೋಪಿ 13 ವರ್ಷದ ಬಾಲಕರಾಗಿದ್ದಾರೆ. ಘಟನೆಯ ವೇಳೆ ಹುಡುಗಿಯು ಪಗ್ಡಿಯಾಲದ ಉದ್ಯಾನವನದಲ್ಲಿ ಆಟವಾಡುತ್ತಿದ್ದಳು. ಆರೋಪಿ ವಿದ್ಯಾರ್ಥಿಗಳು ಆಟವಾಡುವ ನೆಪದಲ್ಲಿ ಆಕೆಯನ್ನು ನಿರ್ಜನ ಸ್ಥಳಕ್ಕೆ ಕರೆದೊಯ್ದು ಈ ಕೃತ್ಯ ಎಸಗಿದ್ದಾರೆ. ಬಾಲಕಿ ಈ ವಿಚಾರವನ್ನು ಪೋಷಕರಿಗೆ ತಿಳಿಸಬಹುದು ಎಂದು ಹೆದರಿದ ಆರೋಪಿ ಹುಡುಗರು ಆಕೆಯನ್ನು ಕೊಂದು ಶವವನ್ನು ಸಮೀಪದ ಕಾಲುವೆಗೆ ಎಸೆದಿದ್ದಾರೆ.
ಸಂಪಾದಕೀಯ ನಿಲುವುಚಿಕ್ಕ ವಯಸ್ಸಿನಲ್ಲೇ ಬಲಾತ್ಕಾರದ ಬಗ್ಗೆ ಯೋಚಿಸಿ ಆ ರೀತಿ ಮಾಡಿದ ಘಟನೆಯಿಂದ ಸಮಾಜದಲ್ಲಿ ನೈತಿಕತೆ ಉಳಿದಿದೆಯೇ ಎಂಬ ಪ್ರಶ್ನೆ ಮೂಡುತ್ತದೆ ! |