Kerala HC Order: ದೇವಸ್ಥಾನದ ಪರಂಪರೆಯಲ್ಲಿ ಮುಖ್ಯ ಅರ್ಚಕರ ಅನುಮತಿ ಇಲ್ಲದೆ ಯಾವುದೇ ಬದಲಾವಣೆ ಮಾಡಲು ಸಾಧ್ಯವಿಲ್ಲ ! – ಕೇರಳ ಹೈಕೋರ್ಟ್

  • ಕೇರಳ ಉಚ್ಚ ನ್ಯಾಯಾಲಯದ ಮಹತ್ವಪೂರ್ಣ ನಿರ್ಣಯ ! 

  • ಸರಕಾರದ ದೇವಸ್ಥಾನ ಸಮಿತಿಯಿಂದ ಒಂದು ಕಾರ್ಯಕ್ರಮದ ಸಂದರ್ಭದಲ್ಲಿ ಬದಲಾವಣೆ ಮಾಡಲು ಆದೇಶ ನೀಡಲಾಗಿತ್ತು !

ತಿರುವನಂತಪುರಂ (ಕೇರಳ) – ದೇವಸ್ಥಾನದಲ್ಲಿ ಪ್ರಚಲಿತ ಧಾರ್ಮಿಕ ಪದ್ಧತಿಗಳಲ್ಲಿ ಕೇವಲ ತಾಂತ್ರಿಕರ (ಮುಖ್ಯ ಅರ್ಚಕರ) ಅನುಮತಿಯಿಂದಲೇ ಬದಲಾವಣೆ ಮಾಡಬಹುದು, ಎಂದು ಕೇರಳ ಉಚ್ಚ ನ್ಯಾಯಾಲಯವು ಮಹತ್ವ ಪೂರ್ಣ ತೀರ್ಪು ನೀಡಿದೆ. ಸರಕಾರದ ‘ಕೂಡಲಮಣಿಕ್ಯಂ ದೇವಸ್ವೊಮ್ ವ್ಯವಸ್ಥಾಪಕ ಸಮಿತಿ’ ಇಂದ ಅಮ್ಮನೂರು ಕುಟುಂಬದಲ್ಲಿನ ಸದಸ್ಯರಲ್ಲದೆ ಇತರ ಹಿಂದೂ ಕಲಾವಿದರಿಗೆ ತ್ರಿಶೂರದಲ್ಲಿನ ಇರಿಜಲಾಕುಡ ಇಲ್ಲಿಯ ದೇವಸ್ಥಾನದ ಕೂಥಂಬಲದಲ್ಲಿ (ಕಲೆಯನ್ನು ಪ್ರಸ್ತುತಪಡಿಸುವ ದೇವಸ್ಥಾನದಲ್ಲಿನ ಸ್ಥಳ) ಕೂಥು ಮತ್ತು ಕೂಡಿಯಟ್ಟಂ ನೃತ್ಯ ಮಾಡಲು ಅನುಮತಿ ನೀಡಿತ್ತು. ನ್ಯಾಯಾಲಯವು ಸಮಿತಿಯ ಈ ನಿರ್ಣಯ ರದ್ದುಪಡಿಸಿತ್ತು. ‘ಅಮ್ಮನೂರು ಕುಟುಂಬದಲ್ಲಿನ ಸದಸ್ಯರಿಗೆ ಕೂಡಲ ಮಾಣಿಕ್ಯಮ್ ದೇವಸ್ಥಾನದ ಕೂಥಂಬಲಮದಲ್ಲಿ ಕೂಥು ಮತ್ತು ಕೂಡಿಯಟ್ಟಂ ನೃತ್ಯ ಮಾಡಲು ವಂಶಪಾರಂಪಾರಿಕ ಅಧಿಕಾರವಿದೆ. ಕೂಥು ಮತ್ತು ಕೂಡಿಯಟ್ಟಂ ನಂತಹ ದೇವಸ್ಥಾನದಲ್ಲಿನ ನೃತ್ಯ, ಇದು ಧಾರ್ಮಿಕ ವಿಧಿಯಾಗಿದೆ, ಎಂದು ಉಚ್ಚ ನ್ಯಾಯಾಲಯವು ಹೇಳಿದೆ. ಹಾಗೂ ‘ದೇವಸ್ವೊಮ್ ವ್ಯವಸ್ಥಾಪಕ ಸಮಿತಿ ತಾಂತ್ರಿಕರ ಅನುಮತಿ ಇಲ್ಲದೆ ಕಲಾವಿದರ ನಿಲುವಿನಲ್ಲಿ ಬದಲಾವಣೆ ಮಾಡುವ ನಿರ್ಣಯ ತೆಗೆದುಕೊಳ್ಳಲು ಸಾಧ್ಯವಿಲ್ಲ’. ಹೀಗೂ ಕೂಡ ನ್ಯಾಯಾಲಯವು ಸ್ಪಷ್ಟಪಡಿಸಿದೆ. ಅಮ್ಮನೂರ ಪರಮೇಶ್ವರನ ಚಕಯಾರ ಇವರು ದಾಖಲಿಸಿರುವ ಅರ್ಜಿಯ ಕುರಿತು ಈ ಆದೇಶ ನೀಡಲಾಗಿದೆ. ಈ ಅರ್ಜಿಯಲ್ಲಿ ಅಮ್ಮಾನೂರ್ ಕುಟುಂಬದವರಲ್ಲದೆ ಹಿಂದೂ ಕಲಾವಿದರಿಗಾಗಿ ಕೂಥಂಬಲಂ ಕೂಥು ಮತ್ತು ಕೂಡಿಯಟ್ಟಂ ನೃತ್ಯ ಪ್ರಸ್ತುತಪಡಿಸಲು ಅನುಮತಿ ನೀಡುವ ನಿರ್ಣಯಕ್ಕೆ ಸವಾಲು ಹಾಕಲಾಗಿದೆ.

೧. ಉಚ್ಚ ನ್ಯಾಯಾಲಯವು, ಕೂಡಲಮನಿಕ್ಯಂ ಕಾನೂನು ೨೦೦೫ ರ ಕಲಂ ೧೦ ಅಡಿಯಲ್ಲಿ, ವ್ಯವಸ್ಥೆಪನೆ ಸಮಿತಿಯಿಂದ ಈ ಪದ್ಧತಿ ಯಾವುದೇ ತಪ್ಪಿಲ್ಲದೆ ಮುಂದುವರೆಸುವುದು ಅಪೇಕ್ಷಿತವಾಗಿದೆ. ಕಾನೂನಿನಲ್ಲಿನ ಕಲಂ ೩೫ ರಲ್ಲಿನ ವ್ಯವಸ್ಥೆಯ ಪ್ರಕಾರ ತಾಂತ್ರಿಕರ ನಿರ್ಣಯ ಅಂತಿಮವಾಗಿರುತ್ತದೆ. ಇದನ್ನು ನಿರ್ಲಕ್ಷಿಸಿ ವ್ಯವಸ್ಥಾಪಕ ಸಮಿತಿಯು ಫೆಬ್ರುವರಿ ೧೯, ೨೦೨೨ ರಂದು ನಡೆದಿರುವ ಸಭೆಯಲ್ಲಿ ಇತರ ಹಿಂದೂ ಕಲಾವಿದರಿಗೂ ಕೂಡ ಕೂಥಂಬಲಂ ಪ್ರಸ್ತುತಪಡಿಸಲು ಅನುಮತಿ ನೀಡಿತ್ತು.

೨. ಈ ಪ್ರಕರಣದಲ್ಲಿ ವ್ಯವಸ್ಥಾಪಕ ಸಮಿತಿಯು ಯುಕ್ತಿವಾದ ನಡೆಸಿದ್ದು, ಅಮ್ಮನೂರು ಕುಟುಂಬದಲ್ಲಿನ ಸದಸ್ಯರ ಕಲೆಯ ಪ್ರಸ್ತುತ ಪಡಿಸಲು ವರ್ಷದಲ್ಲಿನ ಕೆಲವು ದಿನಗಳ ವರೆಗೆ ಸೀಮಿತವಾಗಿತ್ತು. ಆದ್ದರಿಂದ ಕೂಥಂಬಲಂ ಬಹಳ ಕಾಲದವರೆಗೆ ಉಪಯೋಗಿಸದೆ ಹಾಗೆ ಇರುತ್ತದೆ. ಇದರಿಂದ ಅದರ ನಿರ್ವಹಣೆ ಆಗುವುದಿಲ್ಲ ಎಂದು ಹೇಳಿದೆ.

೩. ಇದರ ಕುರಿತು ನ್ಯಾಯಾಲಯವು, ದೇವಸ್ಥಾನದಲ್ಲಿ ಪಾಲಿಸಲಾಗುವ ಯಾವುದೇ ಧಾರ್ಮಿಕ ಅಥವಾ ಪಾರಂಪರಿ ವಿಧಿಯ ಉಲ್ಲಂಘನೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.

ಸಂಪಾದಕೀಯ ನಿಲುವು

ದೇವಸ್ಥಾನದ ಸರಕಾರಿಕರಣ ಮಾಡಿದ ನಂತರ ಧಾರ್ಮಿಕ ಪದ್ಧತಿ ಮತ್ತು ಪರಂಪರೆ ಹೇಗೆ ನಾಶ ಆಗುತ್ತದೆ ? ಇದು ಈ ಆದೇಶದಿಂದ ಗಮನಕ್ಕೆ ಬರುತ್ತದೆ ! ಈಗ ನ್ಯಾಯಾಲಯವೇ ಈ ನಿರ್ಣಯ ರದ್ದುಪಡಿಸಿದರೂ ಅನೇಕ ದೇವಸ್ಥಾನಗಳಲ್ಲಿ ಇಂತಹ ಪರಂಪರೆಗಳನ್ನು ಬದಲಾಯಿಸಿರಬಹುದು !