ಸಿಬ್ಬಂದಿಗಳಿಗೆ ಥಳಿತ
ಮೊಹಾಲಿ (ಪಂಜಾಬ) – ‘ಉಡಿಯಾನ’ ಎಂಬ ಧಾರಾವಾಹಿಯ ಚಿತ್ರೀಕರಣದ ವೇಳೆ ನಿಹಂಗ ಸಿಖ್ಖರು ಆಕ್ರಮಣ ಮಾಡಿ ತೆರೆಮರೆಯನ್ನು(ಬ್ಯಾಕ್ ಸ್ಟೇಜ್) ಧ್ವಂಸಗೊಳಿಸಿದರು ಮತ್ತು ನಿರ್ಮಾಣ ಸಿಬ್ಬಂದಿಯನ್ನು ಥಳಿಸಿದರು. ಘಟನೆಯ ನಂತರ ಆಗಮಿಸಿದ ಪೊಲೀಸರು ದಾಳಿಕೋರರನ್ನು ಪೊಲೀಸ್ ಠಾಣೆಗೆ ಕರೆದೊಯ್ದರು. ಚಿತ್ರೀಕರಣಕ್ಕಾಗಿ ನಿರ್ಮಿಸಿದ್ದ ಗುರುದ್ವಾರದ ಪ್ರತಿಕೃತಿಯನ್ನು ವಿರೋಧಿಸಿದ ನಿಹಂಗ ಸಿಖ್ಖರು ಇಂತಹ ಪ್ರತಿಕೃತಿಯಿಂದಾಗಿ ಶ್ರೀ ಗುರು ಗ್ರಂಥ ಸಾಹಿಬ್‌ಗೆ ಅವಮಾನ ಮಾಡಿದಂತಾಗುತ್ತದೆ ಎಂದು ಆರೋಪಿಸಿದರು.
1. ಸಿಖ್ ಸಂಪ್ರದಾಯದ ಪ್ರಕಾರ ವಿವಾಹದ ದೃಶ್ಯಗಳನ್ನು ಚಿತ್ರೀಕರಣ ಮಾಡುವುದಕ್ಕಾಗಿ ಒಂದು ಗುರುದ್ವಾರವನ್ನು ನಿರ್ಮಾಣ ಮಾಡಲಾಗಿತ್ತು ಹಾಗೂ ಮೂವರು ಗ್ರಂಥಿಗಳನ್ನು( ಗುರುದ್ವಾರದಲ್ಲಿನ ಪೂಜಾರಿ) ಕರೆಸಲಾಗಿತ್ತು; ಆದರೆ ನಿಹಂಗ ಸಿಖ್ಖರು ಹಠಾತ್ ಆಗಿ ಬಂದು ಧ್ವಂಸ ಮಾಡಿದರು ಮತ್ತು ಅಲ್ಲಿದ್ದವರನ್ನು ಥಳಿಸಿದರು.
2. ಪೊಲೀಸರು ಈ ಪ್ರಕರಣದ ಸರಿಯಾಗಿ ತನಿಖೆ ಮಾಡದಿದ್ದರೆ ನಾವು ಈ ವಿಷಯವನ್ನು ನಮ್ಮ ಕೈಗೆ ತೆಗೆದುಕೊಳ್ಳುತ್ತೇವೆ ಎಂದು ನಿಹಂಗ ಸಿಖ್ಖರು ಬೆದರಿಕೆ ಹಾಕಿದ್ದಾರೆ. ನಾವು ಸಂಪೂರ್ಣ ತೆರೆಮರೆಯ(ಬ್ಯಾಕಸ್ಟೇಜ) ವಿಡಿಯೋ ಮಾಡಿದ್ದೇವೆ. ಗ್ರಂಥಿಗಳಿಗೆ ತಲಾ ಒಂದು ಸಾವಿರ ರೂಪಾಯಿ ಕೊಟ್ಟು ಇಲ್ಲಿಗೆ ಕರೆತರಲಾಗಿದೆ. ಎಲ್ಲಕ್ಕಿಂತ ಬೇಸರದ ವಿಷಯವೆಂದರೆ ಸಿಖ್ಖರ ಕಣ್ಣೆದುರಿಗೇ ಅವರ ಗುರುಗಳಿಗೆ ಅಪಮಾನವಾಗುತ್ತಿತ್ತು ಎಂದು ನಿಹಂಗ ಸಿಖ್ಖರು ಪೊಲೀಸರಿಗೆ ತಿಳಿಸಿದರು.
3. ಈ ಘಟನೆಯ ಮಾಹಿತಿ ಸಿಕ್ಕ ಕೂಡಲೇ, ಪಂಜಾಬಿ ನಟ ಜರ್ನೆಲ್ ಸಿಂಗ್ ಸ್ಥಳಕ್ಕೆ ತಲುಪಿದರು. ಅವರು ಮಾತನಾಡಿ, ನಾನು ಸ್ವತಃ ಸಿಖ್ಖನಾಗಿದ್ದೇನೆ. ಇಲ್ಲಿ ಸಿಖ್ಖರ ಭಾವನೆಗೆ ಧಕ್ಕೆಯಾಗಿದೆ. ಧಾರಾವಾಹಿಯಲ್ಲಿ ಸಿಖ್ ಯುವಕರ ವಿವಾಹ ತೋರಿಸುವುದು ಯಾವುದೇ ಸಮಾಜಕ್ಕೆ ಒಳ್ಳೆಯ ಕಾರ್ಯವಾಗಿದೆ. ಅದಕ್ಕಾಗಿ ಒಂದು ವಿಧಾನ ಅಥವಾ ಮಾರ್ಗ ಇರಬೇಕು. ‘ಶಿರೋಮಣಿ ಪ್ರಬಂಧಕ್ ಸಮಿತಿ’ ಧಾರಾವಾಹಿಯಲ್ಲಿ ಶ್ರೀ ಗುರು ಗ್ರಂಥ ಸಾಹಿಬ್ ಪ್ರತಿಯನ್ನು ತೆಗೆದುಕೊಂಡು ಹೋಗುವ ಬಗ್ಗೆ ನಿಯಮಗಳನ್ನು ರಚಿಸಬೇಕು ಎಂದು ಹೇಳಿದರು.
Nihang Sikhs vandalize shooting set of a TV serial in Mohali, for alleged sacrilige of Sri Guru Granth Sahib.
Shooting staffs were beaten too.
👉 Considering these frequent cases of disrespecting the law by Nihang Sikhs, makes one ponder upon the question, is the freedom to… pic.twitter.com/TmyQkQtdSK
— Sanatan Prabhat (@SanatanPrabhat) July 11, 2024
ಸಂಪಾದಕೀಯ ನಿಲುವು
|