ನವದೆಹಲಿ – ‘ವಿಚ್ಛೇದಿತ ಮುಸ್ಲಿಂ ಮಹಿಳೆಗೆ ತನ್ನ ಪತಿಯಿಂದ ಜೀವನಾಂಶ ಪಡೆಯುವ ಹಕ್ಕಿದೆ, ಅದಕ್ಕಾಗಿ ಆಕೆ ಅರ್ಜಿ ಸಲ್ಲಿಸಬಹುದು’, ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಮುಸಲ್ಮಾನ ಯುವಕನ ಅರ್ಜಿಯನ್ನು ವಜಾಗೊಳಿಸಿದ ಸುಪ್ರೀಂ ಕೋರ್ಟ್, ಮುಸಲ್ಮಾನ ಮಹಿಳೆಯರ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ಜಾತ್ಯತೀತ ಕಾನೂನನ್ನು ಅತಿಕ್ರಮಿಸುವುದಿಲ್ಲ ಎಂದು ಹೇಳಿದೆ. ಭಾರತೀಯ ದಂಡ ಸಂಹಿತೆಯ ಕಲಂ 125 ವಿವಾಹಿತ ಮಹಿಳೆಯರಿಗೆ ಮಾತ್ರವಲ್ಲದೆ, ಎಲ್ಲಾ ಮಹಿಳೆಯರಿಗೆ ಅನ್ವಯಿಸುತ್ತದೆ ಎಂಬ ತೀರ್ಮಾನದೊಂದಿಗೆ ನಾವು ಅರ್ಜಿಯನ್ನು ವಜಾಗೊಳಿಸುತ್ತೇವೆ ಎಂದಿದೆ.
ಸಂಪಾದಕೀಯ ನಿಲುವುಇದನ್ನು ಮತ್ತೆ ಮತ್ತೆ ಏಕೆ ಹೇಳಬೇಕು ? ಶಹಬಾನೋ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯವು ಇದೇ ರೀತಿಯ ತೀರ್ಪು ನೀಡಿತ್ತು. ಕೇಂದ್ರ ಸರಕಾರವು ಈ ಬಗ್ಗೆ ಗಮನಹರಿಸಿ ಕಾನೂನಿನಲ್ಲಿ ಅಥವಾ ಸಂವಿಧಾನದಲ್ಲಿ ಅಡೆತಡೆಗಳಿದ್ದರೆ ಅದನ್ನು ನಿವಾರಿಸಬೇಕು! |