ಶಾಂತಿಯು ಯುದ್ಧದಿಂದಲ್ಲ, ಆದರೆ ಚರ್ಚೆಯಿಂದ ಸಿಗುತ್ತದೆ! – ಪ್ರಧಾನಿ ಮೋದಿ

ರಷ್ಯಾ ಅಧ್ಯಕ್ಷ ಪುಟಿನ್ ಗೆ ಪ್ರಧಾನಿ ಮೋದಿ ಸಲಹೆ!

ಮಾಸ್ಕೋ (ರಷ್ಯಾ) – ಯುದ್ಧಭೂಮಿಯಲ್ಲಿ ಪರಿಹಾರಗಳನ್ನು ಕಂಡುಹಿಡಿಯಲಾಗುವುದಿಲ್ಲ. ಶಾಂತಿಗಾಗಿ ಮಾತುಕತೆ ನಡೆಸುವುದು ಬಹಳ ಮುಖ್ಯ. ಭಾರತ ಯಾವಾಗಲೂ ಶಾಂತಿಯ ಕಡೆಗಿದೆ; ಏಕೆಂದರೆ ಯುದ್ಧವೇ ಪರಿಹಾರವಲ್ಲ. ನಾನು ಶಾಂತಿಗಾಗಿ ಆಶಿಸುತ್ತೇನೆ. ಶಾಂತಿಗಾಗಿ ಸಹಕರಿಸಲು ನಾನು ಸಿದ್ಧನಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರ ಭೇಟಿಯ ವೇಳೆ ಉಕ್ರೇನ್ ವಿರುದ್ಧದ ಯುದ್ಧದ ಕುರಿತು ಸಲಹೆ ನೀಡಿದ್ದಾರೆ. ಈ ಬಗ್ಗೆ ಪುಟಿನ್ ಮೋದಿಯವರನ್ನು ಸನ್ಮಾನಿಸಿ ಧನ್ಯವಾದ ಸಲ್ಲಿಸಿದರು. ಪ್ರಧಾನಿಯವರು 2 ದಿನಗಳ ರಷ್ಯಾ ಪ್ರವಾಸದಲ್ಲಿರುವಾಗ ಪುಟಿನ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಆ ಸಮಯದಲ್ಲಿ ಅವರು ಮಾತನಾಡುತ್ತಿದ್ದರು. ಇದಕ್ಕೂ ಮುನ್ನ ಪುಟಿನ್ ಅವರು ಪ್ರಧಾನಿ ಮೋದಿ ಅವರ ಖಾಸಗಿ ನಿವಾಸದಲ್ಲಿ ಆತಿಥ್ಯ ನೀಡಿದರು. ಇಲ್ಲಿ ಜುಲೈ 8ರ ರಾತ್ರಿ ಮೋದಿ ಅವರನ್ನು ಭೋಜನಕ್ಕೆ ಆಹ್ವಾನಿಸಲಾಗಿತ್ತು.

ಪ್ರಧಾನಿ ಮೋದಿಯವರು ಸಭೆಯಲ್ಲಿ, ಯುದ್ಧ, ಘರ್ಷಣೆ, ಭಯೋತ್ಪಾದಕ ದಾಳಿಗಳಾಗಲಿ, ಪ್ರಾಣಹಾನಿಯಾದಾಗ ಮಾನವೀಯತೆಯ ಮೇಲೆ ನಂಬಿಕೆಯಿಡುವ ಪ್ರತಿಯೊಬ್ಬರೂ ದುಃಖಿತರಾಗುತ್ತಾರೆ. ಅಮಾಯಕ ಮಕ್ಕಳು ಬಲಿಯಾದಾಗ ಹೃದಯ ವಿದ್ರಾವಕವಾಗುತ್ತದೆ. ಭಾರತವು ಕಳೆದ 40 ರಿಂದ 50 ವರ್ಷಗಳಿಂದ ಭಯೋತ್ಪಾದನೆಯನ್ನು ಎದುರಿಸುತ್ತಿದೆ. 40 ವರ್ಷಗಳಿಂದ ನಾವು ಭಯೋತ್ಪಾದನೆ ಎಷ್ಟು ಭಯಾನಕ ಮತ್ತು ಹೇಯವಾದುದೆಂದು ಎದುರಿಸುತ್ತಿದ್ದೇವೆ. ಮಾಸ್ಕೋ ಮತ್ತು ಡಾಗೆಸ್ತಾನ್‌ನಲ್ಲಿ ನಡೆದ ಭಯೋತ್ಪಾದಕ ಘಟನೆಗಳ ನೋವನ್ನು ನಾವು ಅನುಭವಿಸಬಹುದು. ಅವನ ನೋವು ಎಷ್ಟು ಆಳವಾಗಿರಬೇಕು ಎಂದು ನಾನು ಊಹಿಸಬಲ್ಲೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ.

ರಷ್ಯಾದಲ್ಲಿ ಭಾರತ 2 ಹೊಸ ರಾಯಭಾರ ಕಚೇರಿಗಳನ್ನು ತೆರೆಯಲಿದೆ

ಪ್ರಧಾನಿ ಮೋದಿ ಇವರು ರಷ್ಯಾದಲ್ಲಿ 2 ಹೊಸ ರಾಯಭಾರ ಕಚೇರಿಗಳನ್ನು ತೆರೆಯುವುದಾಗಿ ಘೋಷಿಸಿದರು. ರಷ್ಯಾದ ಕಜಾನ್ ಮತ್ತು ಯೆಕಟೆರಿನ್‌ಬರ್ಗ್‌ನಲ್ಲಿ ಭಾರತೀಯ ರಾಯಭಾರಿ ಕಚೇರಿಯನ್ನು ತೆರೆಯಲಾಗುವುದು ಎಂದು ಪ್ರಧಾನಿ ಮೋದಿ ತಿಳಿಸಿದರು. ಮಾಸ್ಕೋದಲ್ಲಿ ಭಾರತೀಯ ಸಮುದಾಯವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಈ ಘೋಷಣೆ ಮಾಡಿದರು.

ಸಂಪಾದಕೀಯ ನಿಲುವು

ಭಾರತ ಕಳೆದ 75 ವರ್ಷಗಳಿಂದ ಪಾಕಿಸ್ತಾನದೊಂದಿಗೆ ಮಾತುಕತೆ ನಡೆಸುತ್ತಿತ್ತು; ಆದರೆ ಭಾರತಕ್ಕೆ ಎಂದಿಗೂ ಶಾಂತಿ ಸಿಗಲೇ ಇಲ್ಲ, ಇದು ಕೂಡ ಸತ್ಯ!