Fake Baba’s Banned: ಭೋಲೆ ಬಾಬಾ ಸಹಿತ 20 ಬಾಬಾಗಳನ್ನು ‘ನಕಲಿ’ ಎಂದು ಕಪ್ಪು ಪಟ್ಟಿಗೆ ಸೇರಿಸುತ್ತೇವೆ ! – ಅಖಾಡ ಪರಿಷತ್

ಪ್ರಯಾಗರಾಜ (ಉತ್ತರ ಪ್ರದೇಶ) – ಹಾತ್ರಾಸ ಘಟನೆಯಿಂದ ಪ್ರಸಿದ್ಧಿ ಪಡೆದಿರುವ ನಾರಾಯಣ ಸಾಕರ ಹರಿ ಉರ್ಫ ಭೋಲೆ ಬಾಬಾ ಅವರೊಂದಿಗೆ ಇತರೆ 20 ಬಾಬಾಗಳನ್ನು `ನಕಲಿ’ ಎಂದು ಹೇಳಿ ಅವರನ್ನು ಕಪ್ಪು ಪಟ್ಟಿಗೆ ಸೇರಿಸಲಾಗುವುದು. ಎಲ್ಲ 13 ಆಖಾಡಾದವರು ಇದನ್ನು ಒಮ್ಮತದಿಂದ ಒಪ್ಪಿದ್ದಾರೆ. ಜುಲೈ 18 ರಂದು ನಡೆಯಲಿರುವ ಕುಂಭಮೇಳದ ಆಡಳಿತ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ಆಖಾಡಾ ಪರಿಷತ್ತಿನಿಂದ ಮಂಡಿಸಲಿದ್ದಾರೆ. ಈ ಬಾಬಾರನ್ನು ಕುಂಭಮೇಳದಲ್ಲಿ ಸ್ಥಾನ ಮತ್ತು ಸೌಲಭ್ಯವನ್ನು ಒದಗಿಸಬಾರದು ಎಂದು ಆಡಳಿತ ಅಧಿಕಾರಿಗಳಿಗೆ ತಿಳಿಸಲಾಗುವುದು.

ಅಖಿಲ ಭಾರತ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ರವೀಂದ್ರ ಪುರಿ ಅವರ ಹೇಳಿಕೆಯಂತೆ, ಆಖಾಡಾ ಪರಿಷತ್ತು ನಿರಪರಾಧಿ ಜನತೆಯ ದಾರಿ ತಪ್ಪಿಸುವ ನಕಲಿ ಬಾಬಾಗಳ ಪಟ್ಟಿಯನ್ನು ಸಿದ್ಧಪಡಿಸಿದೆ. ಇಂತಹ ಕಪಟಿಗಳನ್ನು ಮಹಾಕುಂಭದಲ್ಲಿ ಅಂಗಡಿಗಳನ್ನು ಅಲಂಕರಿಸಲು ಬಿಡುವುದಿಲ್ಲ. ಇಂತಹ ನಕಲಿ ಬಾಬಾಗಳಿಗೆ ಮಹಾಕುಂಭದಲ್ಲಿ ಶಾಶ್ವತರಾಗಿರಲು ಸ್ಥಳ ಮತ್ತು ಟೆಂಟ್ ನಿರ್ಮಾಣ ಮಾಡಲು ಅವಕಾಶ ನೀಡಬಾರದು. ಈ ಬೇಡಿಕೆಗಳನ್ನು ಆಡಳಿತದ ಮುಂದಿಡಲಾಗುವುದು. ಹತ್ರಾಸ ಘಟನೆಯ ನಂತರ, ಧರ್ಮದ ಹೆಸರಿನಲ್ಲಿ ಕಪಟಿತನ ಮಾಡುವ ಬಾಬಾರ ವಿರುದ್ಧ ಆಖಾಡಾ ಪರಿಷತ್ತು ಕೂಡ ಸಕ್ರಿಯವಾಗಿದೆ ಎಂದು ಹೇಳಿದರು.