Statement by Farooq Abdullah: ಭಾರತ ತಾಳ್ಮೆ ಕಳೆದುಕೊಂಡರೆ ಯುದ್ಧ ಶತಸಿದ್ಧ ! – J&K ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲ

ಕಟುವಾದಲ್ಲಿನ ದಾಳಿಯ ನಂತರ ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರುಕ್ ಅಬ್ದುಲ್ಲ ಇವರ ಹೇಳಿಕೆ

ಶ್ರೀನಗರ (ಜಮ್ಮು-ಕಾಶ್ಮೀರ್) – ಕಳೆದ ಕೆಲವು ದಿನಗಳಲ್ಲಿ ನಿರಂತರವಾಗಿ ನಡೆಯುತ್ತಿರುವ ಜಿಹಾದಿ ಭಯೋತ್ಪಾದಕ ದಾಳಿಯ ನಂತರ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನ ಅಧ್ಯಕ್ಷ ಡಾ. ಫಾರೂಕ್ ಅಬ್ದುಲ್ಲ ಇವರು ಹೇಳಿಕೆ ನೀಡಿದ್ದಾರೆ. ಅವರು, ಜಗತ್ತಿನಲ್ಲಿನ ಯಾವುದೇ ದೇಶ ಭಯೋತ್ಪಾದನೆ ಸ್ವೀಕರಿಸಲು ಸಿದ್ಧವಿಲ್ಲ. ಭಾರತವು ತಾಳ್ಮೆ ಕಳೆದುಕೊಂಡರೆ ಯುದ್ಧವಾಗಬಹುದು. ಇದೆ ಭಯೋತ್ಪಾದನೆ ಪಾಕಿಸ್ತಾನವನ್ನು ನಾಶ ಮಾಡಬಹುದು ಮತ್ತು ಯುದ್ಧದಿಂದ ಎರಡು ದೇಶದಲ್ಲಿ ಕೇವಲ ವಿನಾಶವೇ ಆಗುವುದು. ದಯವಿಟ್ಟು ಭಯೋತ್ಪಾದನೆ ನಿಲ್ಲಿಸಿ ! ಎಂದು ಹೇಳಿದ್ದಾರೆ.

೧. ಇನ್ನೊಂದು ಕಡೆ ಲೋಕಸಭೆಯಲ್ಲಿನ ವಿರೋಧ ಪಕ್ಷದ ನಾಯಕ ಕಾಂಗ್ರೆಸ್ಸಿನ ಸಾಂಸದ ರಾಹುಲ್ ಗಾಂಧಿ ಇವರು, ನಮ್ಮ ಸೈನ್ಯದ ಮೇಲಿನ ಇಂತಹ ಹೇಡಿತನದ ದಾಳಿಗಳು ಖಂಡನೀಯವಾಗಿದೆ. ತಿಂಗಳಲ್ಲಿ ನಡೆದಿರುವ ೫ ನೇ ಭಯೋತ್ಪಾದಕ ದಾಳಿ ಈ ದೇಶದ ಸುರಕ್ಷೆಗೆ ಮತ್ತು ನಮ್ಮ ಸೈನಿಕರ ಜೀವಕ್ಕೆ ದೊಡ್ಡ ಅಪಾಯವಿದೆ. ಈಗ ನಡೆಯುತ್ತಿರುವ ಭಯೋತ್ಪಾದಕ ದಾಳಿಯ ಕುರಿತು ದೃಢವಾದ ಕೃತಿಯಿಂದಲೇ ಪರಿಹಾರ ಸಿಗುವುದು ಎಂದು ಹೇಳಿದರು.

೨. ಕೇಂದ್ರ ಸಚಿವ ಗಿರಿರಾಜ ಸಿಂಹ ಇವರು, ”ಯುಪಿಎ ಸರಕಾರ ಇರುವಾಗ ತೆಲಂಗಾಣದಿಂದ ಒಡಿಸ್ಸಾದವರೆಗೆ ದೇಶಾದ್ಯಂತ ಅಲ್ಲಲ್ಲಿ ಬಾಂಬ್ ಸ್ಫೋಟ ನಡೆಯುತ್ತಿತ್ತು ಆದರೆ ಇಂದು ಇಲಿಗಳು ಹೇಗೆ ಬಿಲದಲ್ಲಿ ಸೇರಿಕೊಳ್ಳುತ್ತವೆ. ಅಂತಹ ಭಯೋತ್ಪಾದಕರು ಬಿಲದಲ್ಲಿ ಸೇರುತ್ತಿದ್ದಾರೆ. ಕಾಶ್ಮೀರದಲ್ಲಿ ಕೂಡ ಅದೇ ಆಗುತ್ತಿದೆ. ಕಾಂಗ್ರೆಸ್ ಕಾಶ್ಮೀರದ ಸೈನ್ಯದ ಮತ್ತು ಅರೆ ಸೈನಿಕ ಪಡೆಯ ಮತ್ತು ಸೈನ್ಯದ ಮನೋಬಲ ಕುಸಿಯಲು ಬಿಡಬಾರದು ಎಂದು ಹೇಳಿದರು.

೩. ರಕ್ಷಣಾ ತಜ್ಞ ಪ್ರಫುಲ್ಲ ಬಕ್ಷಿ ಇವರು, ಸಂಪೂರ್ಣ ಜಮ್ಮು ಕಾಶ್ಮೀರದಲ್ಲಿ ‘ಸ್ಲೀಪರ್ ಸೆಲ್’ (ಭಯೋತ್ಪಾದಕರಿಗೆ ಸಹಾಯ ಮಾಡುವ ಸಾಮಾನ್ಯ ಜನರ ರಹಸ್ಯ ಗುಂಪುಗಳು) ಇವೆ. ಅವರು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆ. ಭಯೋತ್ಪಾದಕರಿಗೆ ವಾಸಿಸಲು ಸ್ಥಳ ನೀಡುವರು ಯಾರು ಮತ್ತು ಅವರಿಗೆ ಶಸ್ತ್ರಾಸ್ತ್ರಗಳು ಯಾರು ನೀಡುತ್ತಿದ್ದಾರೆ? ಎಂದು ಕೇಳಿದ್ದಾರೆ.

ಸಂಪಾದಕೀಯ ನಿಲುವು

ಯಾವಾಗಲೂ ಪಾಕಿಸ್ತಾನದ ಭಾಷೆ ಮಾತನಾಡುವ ಫಾರೂಕ್ ಅಬ್ದುಲ್ಲ ಇವರ ಇಂತಹ ಹೇಳಿಕೆಯಿಂದ ಬರುವ ವಿಧಾನಸಭೆಯ ಚುನಾವಣೆ ಗಮನದಲ್ಲಿಟ್ಟುಕೊಂಡು ಅವರು ಹೇಗೆ ಮಾತನಾಡುತ್ತಿರಬಹುದು !