Indians In Russian Army : ರಷ್ಯಾದ ಸೇನೆಯಲ್ಲಿ ಸೇರಿರುವ ಭಾರತೀಯರನ್ನು ಅವರ ತಾಯ್ನಾಡಿಗೆ ಕಳುಹಿಸುವಂತೆ ಪುತಿನ್ ಘೋಷಣೆ!

ಪ್ರಧಾನಿ ಮೋದಿಯವರು ರಷ್ಯಾ ಭೇಟಿಯ ವೇಳೆ ಮಂಡಿಸಿದ ಸೂತ್ರ

ಮಾಸ್ಕೋ – ರಷ್ಯಾ-ಉಕ್ರೇನ್ ಯುದ್ಧ ಮುಂದುವರೆದಿದ್ದು, ರಷ್ಯಾದಲ್ಲಿ ಉದ್ಯೋಗ ಕೊಡಿಸುವುದಾಗಿ ಆಮಿಷ ತೋರಿಸಿ ಕೆಲವು ಭಾರತೀಯರನ್ನು ಬಲವಂತವಾಗಿ ರಷ್ಯಾದ ಸೇನೆಗೆ ಸೇರಿಸಿಕೊಳ್ಳಲಾಗಿದೆ. ಈ ಭಾರತೀಯರನ್ನು ಶೀಘ್ರದಲ್ಲಿಯೇ ಸುರಕ್ಷಿತವಾಗಿ ತಾಯ್ನಾಡಿಗೆ ಕಳುಹಿಸಲಾಗುವುದು. 22ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಮಾಸ್ಕೋಗೆ ಆಗಮಿಸಿರುವ ಪ್ರಧಾನಿ ಮೋದಿ, ರಷ್ಯಾದ ಸೇನೆಯಲ್ಲಿ ಮೋಸದಿಂದ ಸೇರಿಸಿರುವ ಭಾರತೀಯರ ವಿಷಯವನ್ನು ಅಧ್ಯಕ್ಷ ವ್ಲಾಡಿಮಿರ್ ಪುತಿನ್ ಅವರಿಗೆ ತಿಳಿಸಿದರು. ಆನಂತರ, ಪುತಿನ್ ರಷ್ಯಾದ ಸೈನ್ಯದಲ್ಲಿ ನೇಮಕಗೊಂಡ ಭಾರತೀಯರನ್ನು ವಜಾಗೊಳಿಸಿ ಅವರನ್ನು ವಾಪಸ್ ತಾಯ್ನಾಡಿಗೆ ಕಳುಹಿಸುವಂತೆ ಘೋಷಿಸಿದರು.

ಕಳೆದ ತಿಂಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧದಲ್ಲಿ ಇಬ್ಬರು ಭಾರತೀಯರು ಸಾವನ್ನಪ್ಪಿದ್ದರು. ಇದಾದ ಬಳಿಕ ಸೇನೆಗೆ ಸೇರ್ಪಡೆಗೊಂಡ ಭಾರತೀಯರನ್ನು ವಾಪಸ್ ಕಳುಹಿಸುವಂತೆ ಭಾರತ ರಷ್ಯಾವನ್ನು ಒತ್ತಾಯಿಸಿತ್ತು.