ಪ್ರಧಾನಿ ಮೋದಿಯವರ ರಷ್ಯಾ ಪ್ರವಾಸ; ಅಮೇರಿಕಾದ ಎಚ್ಚರಿಕೆಯ ಪ್ರತಿಕ್ರಿಯೆ
ವಾಷಿಂಗ್ಟನ್ (ಅಮೇರಿಕಾ) – ಪ್ರಧಾನಿ ನರೇಂದ್ರ ಮೋದಿ ಅವರ ಎರಡು ದಿನಗಳ ರಷ್ಯಾ ಭೇಟಿ ಕುರಿತು ಅಮೇರಿಕಾ ಪ್ರತಿಕ್ರಿಯೆ ವ್ಯಕ್ತಪಡಿಸುವಾಗ, ‘ಭಾರತ ನಮ್ಮ ಕಾರ್ಯತಂತ್ರದ ಪಾಲುದಾರ ಆಗಿದೆ’, ಎಂದು ಹೇಳಿದೆ. ಇದರೊಂದಿಗೆ ಅಮೇರಿಕೆಯು ಉಕ್ರೇನ್ ಯುದ್ಧದ ಮೇಲೆ ಯಾವುದೇ ಪರಿಹಾರವನ್ನು ಕಂಡು ಹಿಡಿಯುವಾಗ ವಿಶ್ವಸಂಸ್ಥೆಯ ತತ್ವಗಳನ್ನು ಅನುಸರಿಸಬೇಕು ಎಂದು ಅಮೇರಿಕಾವು ಭಾರತಕ್ಕೆ ಮಾಸ್ಕೋಗೆ ನೀಡಬೇಕೆಂದು ಕರೆ ನೀಡಿದೆ.
ಮೋದಿಯವರ ಮಾಸ್ಕೋ ಪ್ರವಾಸಕ್ಕೆ ಸಂಬಂಧಿಸಿದಂತೆ ಅಮೇರಿಕಾದ ವಿದೇಶಾಂಗ ಇಲಾಖೆಯ ವಕ್ತಾರ ಮ್ಯಾಥ್ಯೂ ಮಿಲ್ಲರ್ ಇವರು ಮಾತನಾಡಿ, ಭಾರತದೊಂದಿಗೆ ಅಮೇರಿಕಾ ಮುಕ್ತ ಮತ್ತು ಪ್ರಾಮಾಣಿಕ ಸಂಬಂಧ ಹೊಂದಿದೆ. ನಮಗೆ ರಷ್ಯಾದೊಂದಿಗೆ ಇರುವ ಭಾರತದ ಸಂಬಂಧದ ವಿಷಯದಲ್ಲಿ ಚಿಂತೆಯಿದೆ ಎಂದು ಹೇಳಿದರು.(ಇದು ಚಿಂತೆಯಾಗಿರದೇ ತಲೆ ಕೆಡಿಸಿಕೊಳ್ಳುವ ಅಮೆರಿಕಾಗೆ ಇದು ತಲೆನೋವಾಗಿದೆ! ಈಗ ಭಾರತ ಅಮೆರಿಕಾಗೆ ತಲೆ ಬಾಗುವುದಿಲ್ಲ ಎಂಬುದು ಅಮೆರಿಕಕ್ಕೂ ಗೊತ್ತಿದೆ. – ಸಂಪಾದಕರು)
ಮಿಲ್ಲರ್ ಮಾತು ಮುಂದುವರೆಸಿ, `ನಾವು ಭಾರತಕ್ಕೆ, ರಷ್ಯಾದೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳುವಾಗ, ಉಕ್ರೇನನೊಂದಿಗಿನ ಸಂಘರ್ಷದ ಯಾವುದೇ ನಿರಾಕರಣೆಯಲ್ಲಿ ಜಂಟಿ ಪ್ರಯತ್ನಗಳನ್ನು ಒಳಗೊಂಡಿದೆ ಎಂದು ಸ್ಪಷ್ಟಪಡಿಸಬೇಕು. ಈ ಉಪಾಯದಿಂದ ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆ ಮತ್ತು ಸಾರ್ವಭೌಮತ್ವದ ಗೌರವವನ್ನು ಕಾಪಾಡಬಹುದು ಎಂದು ವಿನಂತಿಸಿದರು.
ಸಂಪಾದಕೀಯ ನಿಲುವುದಿಟ್ಟತನದ ಭಾರತವು ಸ್ವತಂತ್ರ ವಿದೇಶಾಂಗ ನೀತಿಯನ್ನು ಹೊಂದಿರುವುದರಿಂದ ಸ್ವಾರ್ಥಿ ಅಮೇರಿಕಾ ಈ ರೀತಿ ಎಚ್ಚರಿಕೆಯ ನಿಲುವನ್ನು ವಹಿಸುತ್ತದೆ ಎನ್ನುವುದು ಜಗಜ್ಜಾಹೀರಾಗಿದೆ ! |