ಚಿಕಿತ್ಸಾ ಸಭೆಯಲ್ಲಿ ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ಗುಣಪಡಿಸುವ ಭರವಸೆ
ಭರತಪುರ (ರಾಜಸ್ಥಾನ) – ಇಲ್ಲಿನ ಗ್ರಾಮವೊಂದರಲ್ಲಿ ಕ್ರಿಶ್ಚಿಯನ್ನರ ಉಪಚಾರ ಸಭೆಯಲ್ಲಿ 100ಕ್ಕೂ ಹೆಚ್ಚು ಹಿಂದೂಗಳನ್ನು ಮತಾಂತರಕ್ಕೆ ಕರೆಯಲಾಗಿತ್ತು.`ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸುವ ಪ್ರತಿಯೊಬ್ಬ ವ್ಯಕ್ತಿಗೆ ಪ್ರತಿ ತಿಂಗಳಿಗೆ 10,000 ರೂಪಾಯಿ ನೀಡುತ್ತೇವೆ ಮತ್ತು ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಗುಣಪಡಿಸುತ್ತೇವೆ’ ಎಂದು ಕ್ರಿಶ್ಚಿಯನ್ ಧರ್ಮಗುರುಗಳು ಹೇಳಿಕೊಳ್ಳುತ್ತಿದ್ದರು. ಈ ಸಭೆಯಲ್ಲಿ ಕ್ರೈಸ್ತ ಧರ್ಮಪ್ರಚಾರಕರು ಹಿಂದೂ ದೇವತೆಗಳ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಉಪಯೋಗಿಸುತ್ತಿದ್ದರು. ದೇವತೆಗಳನ್ನು ಏಸುಕ್ರಿಸ್ತರ ಎದುರು ದುರ್ಬಲರೆನ್ನುವಂತೆ ಬಿಂಬಿಸುತ್ತಿದ್ದರು. ಯೇಸುವು ಎಲ್ಲರಿಗಿಂತ ದೊಡ್ಡವನು ಎಂದು ಹೇಳುತ್ತಿದ್ದರು. ಈ ಸಭೆಯಲ್ಲಿ ಕ್ರಿಶ್ಚಿಯನ್ ಧರ್ಮಪ್ರಚಾರಕರು ಮತಾಂತರಕ್ಕಾಗಿ ಕರೆದುಕೊಂಡು ಬಂದಿದ್ದ ಹಿಂದೂಗಳಿಗೆ ಅವರ ದೇವತೆಗಳ ಮೂರ್ತಿಯನ್ನು ಒಡೆದು ಬಿಸಾಡುವಂತೆ ಹೇಳಿದರು. ಈ ಮತಾಂತರ ಸಭೆಯ ವಿಷಯದ ಮಾಹಿತಿ ಸಿಕ್ಕಾಗ ಪೊಲೀಸರು ಸ್ಥಳಕ್ಕೆ ಧಾವಿಸಿದರು. ಈ ಪ್ರಕರಣದಲ್ಲಿ 28 ಜನರನ್ನು ವಶಕ್ಕೆ ಪಡೆಯಲಾಗಿದೆ ಆದರೆ ಕೆಲ ಸಮಯದ ಬಳಿಕ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಕೂಡ ಮಾಡಲಾಗಿದೆ.
1. ಮಥುರಾ ಗೇಟ್ ಪೊಲೀಸ್ ಠಾಣೆಯ ಮುಖ್ಯಸ್ಥರಾಗಿರುವ ಕರಣಸಿಂಹ ರಾಠೋಡ್ ಅವರು ಆರೋಪಿಗಳ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಈ ಘಟನೆಯ ಮುಖ್ಯ ಆರೋಪಿ ರವೀಂದ್ರ ಕುಮಾರ್ (ವಯಸ್ಸು 39) ಮತ್ತು ಅವರ ಪತ್ನಿ ರೂಬಿ(32 ವರ್ಷ) ಕ್ರಿಶ್ಚಿಯನ್ ದಂಪತಿಗಳಾಗಿದ್ದಾರೆ. (ಇಂತಹ ಮತಾಂತರಗೊಂಡ ಕ್ರಿಶ್ಚಿಯನ್ನರು ತಮ್ಮ ಹಿಂದೂ ಹೆಸರನ್ನು ಬದಲಾಯಿಸುವುದಿಲ್ಲ ಎಂಬುದನ್ನು ನೆನಪಿನಲ್ಲಿಡಿ. ಹಿಂದೂಗಳ ಜೊತೆ ಸೇರಿಕೊಂಡು ಅವರನ್ನು ಮತಾಂತರಗೊಳಿಸಲು ಸುಲಭವಾಗುತ್ತದೆ ಎಂದು ಅವರು ತಮ್ಮ ಹಿಂದೂ ಹೆಸರನ್ನು ಹಾಗೆಯೇ ಇಡುತ್ತಾರೆ- ಸಂಪಾದಕರು).
2. ಈ ಪತಿ -ಪತ್ನಿ ನಗರದಲ್ಲಿ`ಚರ್ಚ್ ಫೌಂಡೇಶನ್’ ಎಂಬ ಸಂಸ್ಥೆ ನಡೆಸುತ್ತಾರೆ. ಜನರನ್ನು `ವಾಟ್ಸಅಪ್’ ಗುಂಪಿನೊಂದಿಗೆ ಜೋಡಿಸಿ ‘ಕ್ಯಾನ್ಸರ್ ನಂತಹ ಕಾಯಿಲೆಗಳನ್ನು ನಾವು ಗುಣಪಡಿಸುತ್ತೇವೆ’ ಎಂದು ಭರವಸೆ ನೀಡಿ ಅವರನ್ನು ಚಿಕಿತ್ಸಾ ಸಭೆಗೆ ಕರೆಸುತ್ತಿದ್ದರು.
3. ಪೊಲೀಸರು ರವೀಂದ್ರ ಕುಮಾರನ ಮನೆಯನ್ನು ಶೋಧಿಸಿದಾಗ 5 ಬೈಬಲ್‌ಗಳು ಮತ್ತು ಇತರ ಕ್ರಿಶ್ಚಿಯನ್ ಪ್ರಚಾರ ಸಾಹಿತ್ಯಗಳು ಸಿಕ್ಕಿವೆ. ಈ ಪ್ರಕರಣದಲ್ಲಿ ಪೊಲೀಸರು ರವೀಂದ್ರ ಕುಮಾರನ ಬ್ಯಾಂಕ್ ಖಾತೆಯ ತನಿಖೆ ನಡೆಸುತ್ತಿದ್ದು, ಹಣದ ಮೂಲ ಪತ್ತೆ ಹಚ್ಚಲಾಗುತ್ತಿದೆ.
4. ವಿಶ್ವ ಹಿಂದೂ ಪರಿಷತ್ತಿನ ಜಿಲ್ಲಾಧ್ಯಕ್ಷ ಲಖನ ಸಿಂಹ ಮಾತನಾಡಿ, ರವೀಂದ್ರ ಕುಮಾರ್ ಭರತ್ ಪುರದಲ್ಲಿ ಹಲವು ವರ್ಷಗಳಿಂದ ಧರ್ಮ ಪರಿವರ್ತನಾ ಕೇಂದ್ರ ನಡೆಸುತ್ತಿದ್ದಾನೆ. ಇದರಲ್ಲಿ ಅವನ ಪತ್ನಿ ಅವನನ್ನು ಬೆಂಬಲಿಸುತ್ತಿದ್ದಾಳೆ. ಈ ದಂಪತಿಗಳು ಪ್ರತಿಯೊಂದು ಗ್ರಾಮದ ಮನೆ-ಮನೆಗೆ ಹೋಗಿ ಜನರಿಗೆ ಕ್ರಿಶ್ಚಿಯನ್ ಧರ್ಮದ ಬಗ್ಗೆ ಹೇಳುತ್ತಿದ್ದರು ಎಂದು ಆರೋಪಿಸಿದ್ದಾರೆ.
ಹಿಂದೂ ಧರ್ಮ ಎಲ್ಲಕ್ಕಿಂತ ಕೀಳು ಧರ್ಮವಾಗಿದೆ ಎಂದು ಕ್ರಿಶ್ಚಿಯನ್ ಧರ್ಮಪ್ರಚಾರಕರಿಂದ ಸುಳ್ಳು ಪ್ರಚಾರ
ಪೊಲೀಸರು ದಾಖಲಿಸಿರುವ ದೂರಿನಲ್ಲಿ ರವೀಂದ್ರ ಕುಮಾರ್ ಸಭೆಯಲ್ಲಿ ಉಪಸ್ಥಿತರಿರುವ ಹಿಂದೂ ದೇವತೆಗಳ ಮೂರ್ತಿ ಪೂಜಿಸುವುದನ್ನು ಬಿಟ್ಟು ಕ್ರಿಶ್ಚಿಯನ್ ಧರ್ಮವನ್ನು ಸ್ವೀಕರಿಸಲು ಹೇಳುತ್ತಿದ್ದರು. ದೇವತೆಗಳು ಯಾವುದೇ ಅವತಾರ ತಾಳಿಲ್ಲ. ಅವರು ಭಗವಾನ ಶ್ರೀಕೃಷ್ಣನ ಬಗ್ಗೆ ಅವಹೇಳನಕಾರಿ ಶಬ್ದಗಳನ್ನು ಉಪಯೋಗಿಸುತ್ತಿದ್ದರು. ಹಿಂದೂ ಧರ್ಮ ಎಲ್ಲಕ್ಕಿಂತ ಕೆಳ ದರ್ಜೆಯ ಧರ್ಮವಾಗಿದೆಯೆಂದು ವರ್ಣಿಸುತ್ತಿದ್ದರು. `ಏಸು ಎಲ್ಲರಿಗಿಂತ ದೊಡ್ಡ ದೇವರಾಗಿದ್ದಾನೆ. ಅವನ ಸೇವೆಯನ್ನು ಮಾಡಿದರೆ, ನಿಮಗೆ ಸ್ವರ್ಗ ಸಿಗುತ್ತದೆ’ ಎಂದೂ ಸಭೆಯಲ್ಲಿ ಹೇಳಲಾಗಿದೆ.
ಸಂಪಾದಕೀಯ ನಿಲುವು
|