ಮೌಂಟ್ ಎವರೆಸ್ಟ್‌ ಪರ್ವತದಿಂದ 11 ಟನ್ ಕಸದ ರಾಶಿ ತೆಗೆಯಲಾಯಿತು !

ಇನ್ನು ಶೇ.40ರಿಂದ 50ರಷ್ಟು ತ್ಯಾಜ್ಯ ಬಾಕಿ !

ನವದೆಹಲಿ – ಮೌಂಟ್ ಎವರೆಸ್ಟ್ ಪರ್ವತಾರೋಹಿಗಳಿಂದ ಪರ್ವತದ ಕೆಳಭಾಗದಲ್ಲಿನ ವಿಡಿಯೋ ಒಂದು ಹೊರಬಿದ್ದಿದೆ. ಈ ವಿಡಿಯೋದಲ್ಲಿ ಪರ್ವತಾರೋಹಿಗಳು, ಅವರ ಡೇರೆಗಳು ಮತ್ತು ಅವರು ಎಸೆದಿರುವ ಕಸದ ರಾಶಿಯನ್ನು ಕಾಣಬಹುದು. ನೇಪಾಳದ ಶೆರ್ಪಾಗಳು ಮೌಂಟ್ ಎವರೆಸ್ಟ್ ಪರ್ವತದಲ್ಲಿ ಪರ್ವತಾರೋಹಿಗಳು ಎಸೆದಿರುವ ಕಸವನ್ನು ತೆಗೆಯುವ ಕೆಲಸ ಮಾಡುತ್ತಿದ್ದಾರೆ. ನೇಪಾಳ ಸರ್ಕಾರವು ಈ ವರ್ಷ ಏಪ್ರಿಲ್ 11 ರಿಂದ ಸ್ವಚ್ಛತಾ ಅಭಿಯಾನವನ್ನು ಪ್ರಾರಂಭಿಸಿದೆ. ಅಂದಿನಿಂದ ಇಲ್ಲಿಯವರೆಗೆ 11 ಟನ್ ಕಸವನ್ನು ಸ್ವಚ್ಛತಾ ಕಾರ್ಮಿಕರ ತಂಡ ತೆಗೆದಿದ್ದು, 4 ಮೃತ ದೇಹಗಳು ಮತ್ತು ಮನುಷ್ಯನ ಒಂದು ಅಸ್ಥಿಪಂಜರವನ್ನು ಸಹ ತೆಗೆಯಲಾಗಿದೆ. ಜಗತ್ತಿನ ಏತಿ ಎತ್ತರದ ಈ ಪ್ರದೇಶದಲ್ಲಿ ಇನ್ನೂ 40 ರಿಂದ 50 ಟನ್‌ಗಳಷ್ಟು ತ್ಯಾಜ್ಯವಿರಬಹುದು ಎಂದು ಶೆರ್ಪಾ ಹೇಳಿದ್ದಾರೆ. ಈ ತ್ಯಾಜ್ಯವನ್ನು ತೆಗೆಯಲು ಹಲವು ವರ್ಷಗಳು ಬೇಕಾಗಬಹುದು ಎಂದು ಅವರು ತಿಳಿಸಿದ್ದಾರೆ!

ಸಂಪಾದಕೀಯ ನಿಲುವು

ರಸ್ತೆ, ಬೀದಿ ಅಷ್ಟೇ ಅಲ್ಲ ಜಗತ್ತಿನ ಅತಿ ಎತ್ತರದ ಪರ್ವತದ ಮೇಲೆ ಹೋಗಿ ಕಸ ಹಾಕುವ ಮೂಲಕ ಮನುಷ್ಯರು ಸ್ವಂತದ ಮನೋವೃತ್ತಿ ತೋರಿಸಿದ್ದಾರೆ. ಪ್ರಕೃತಿಯನ್ನು ಕೆಡಿಸುವ ಮನುಷ್ಯನಿಗೆ ಪ್ರಕೃತಿಯೇ ಪ್ರತ್ಯುತ್ತರ ನೀಡುವುದು ಎಂಬುದನ್ನು ಅವನು ಗಮನದಲ್ಲಿಡಬೇಕು!