Firhad Hakim : ಯಾರು ಇಸ್ಲಾಂನಲ್ಲಿ ಹುಟ್ಟಿಲ್ಲ ಅವರು ದುರ್ದೈವಿಗಳು ಅವರನ್ನು ಮುಸ್ಲಿಮರನ್ನಾಗಿ ಮಾಡಿ ಅಲ್ಲಾಹನನ್ನು ಸಂತೋಷಪಡಿಸಿ ! – ತೃಣಮೂಲ ಕಾಂಗ್ರೆಸ್ ಸಚಿವ ಫಿರ್ಹಾದ್ ಹಕೀಮ್

ಬಂಗಾಳದ ಮುಸ್ಲಿಮರಿಗೆ ತೃಣಮೂಲ ಕಾಂಗ್ರೆಸ್ ಸಚಿವ ಫಿರ್ಹಾದ್ ಹಕೀಮ್ ಕರೆ

ಕೋಲಕಾತಾ (ಬಂಗಾಳ) – ಇಸ್ಲಾಂನಲ್ಲಿ ಹುಟ್ಟುವುದೇ ಇರುವವರು ದುರ್ದೈವಿಗಳಾಗಿದ್ದು ನಾವು ಅವರಿಗೆ ‘ದಾವತ್’ (ಇಸ್ಲಾಂ ಸ್ವೀಕರಿಸಲು ಆಹ್ವಾನ) ನೀಡಲು ಸಾಧ್ಯವಾದರೆ ಮತ್ತು ಅವರಲ್ಲಿ ‘ಇಮಾನ್’ (ಇಸ್ಲಾಂ ಧರ್ಮದ ಭಕ್ತಿ) ಮೂಡಿಸಿದರೆ ನಾವು ಅಲ್ಲಾಹನನ್ನು ಸಂತೋಷಗೊಳಿಸಬಹುದು ಎಂದು ಕೋಲಕಾತಾ ನಗರದ ಮೇಯರ್ ಮತ್ತು ತೃಣಮೂಲ ಕಾಂಗ್ರೆಸ್ ಸರಕಾರದ ಸಚಿವ ಫಿರ್ಹಾದ್ ಹಕೀಮ್ ಜುಲೈ 3ರಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯಿಂದ ವಿವಾದ ನಿರ್ಮಾಣವಾಗಿದೆ. ಕೋಲಕತಾದ ಧೋನೋ ಧೋನ್ಯೋ ಸ್ಟೇಡಿಯಂನಲ್ಲಿ ನಡೆದ ‘ಅಖಿಲ ಭಾರತ ಕುರಾನ್ ಸ್ಪರ್ಧೆ’ ಕಾರ್ಯಕ್ರಮದಲ್ಲಿ ಹಕೀಮ್ ಮಾತನಾಡುತ್ತಿದ್ದರು.

ಫಿರ್ಹಾದ್ ಹಕೀಮ್ ಹೇಳಿದ್ದು:

1. ನಾವು ಯಾರನ್ನಾದರೂ ಇಸ್ಲಾಮಿನ ಹಾದಿಗೆ ತರಲು ಸಾಧ್ಯವಾದರೆ, ಇಸ್ಲಾಂ ಧರ್ಮವನ್ನು ಹರಡುವ ಮೂಲಕ ನಾವು ನಿಜವಾದ ಮುಸ್ಲಿಮರು ಎಂದು ಸಾಬೀತಾಗುತ್ತದೆ.

2. ಸಾವಿರಾರು ಜನ ತಲೆಯ ಮೇಲೆ ದುಂಡನೆಯ ಟೋಪಿಯನ್ನು ಹಾಕಿಕೊಂಡು ಕುಳಿತರೆ ಆಗ ಅವರೆಲ್ಲರೂ ನಮ್ಮವರು ಎಂದನಿಸುತ್ತದೆ. ಇದು ನಮ್ಮ ಏಕತೆಯನ್ನು ತೋರಿಸುತ್ತದೆ ಮತ್ತು ಯಾರೂ ನಮ್ಮನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸುತ್ತದೆ.

3. ನಾವು ಇಸ್ಲಾಂ ಧರ್ಮದಲ್ಲಿ ಹುಟ್ಟಿದ್ದೇವೆ, ಆದ್ದರಿಂದ ಪ್ರವಾದಿ ಪೈಗಂಬರ ಮತ್ತು ಅಲ್ಲಾ ನಮಗೆ ಸ್ವರ್ಗಕ್ಕೆ ದಾರಿ ಮಾಡಿಕೊಟ್ಟಿದ್ದಾರೆ. ನಾವು ಯಾವುದೇ ಪಾಪವನ್ನು ಮಾಡದಿದ್ದರೆ, ನಾವು ನೇರವಾಗಿ ಸ್ವರ್ಗಕ್ಕೆ ಹೋಗುತ್ತೇವೆ.

ಸಂಪಾದಕೀಯ ನಿಲುವು

ತೃಣಮೂಲ ಕಾಂಗ್ರೆಸ್ ಮಂತ್ರಿಗಳೇ ನೇರವಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಾರೆ ಮತ್ತು ಪಕ್ಷದ ಮುಖ್ಯಸ್ಥೆಯಾಗಿರುವ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಈ ಬಗ್ಗೆ ಏನನ್ನೂ ಹೇಳುವುದಿಲ್ಲ, ಇದರಿಂದ ತೃಣಮೂಲ ಕಾಂಗ್ರೆಸ್ ಮತ್ತೊಂದು ಮುಸ್ಲಿಂ ಲೀಗ್ ಪಕ್ಷವಾಗಿದ್ದು, ಬಂಗಾಳವನ್ನು ಇವರು ಶೀಘ್ರದಲ್ಲೇ ಬಾಂಗ್ಲಾದೇಶವನ್ನಾಗಿಸಿದರೆ ಆಶ್ಚರ್ಯಪಡಬೇಕಾಗಿಲ್ಲ!

ಇಂತಹ ಪಕ್ಷವನ್ನು ಬಂಗಾಳದ ಹಿಂದೂಗಳು ಅಧಿಕಾರಕ್ಕೆ ತರುತ್ತಿದ್ದಾರೆ ಮತ್ತು ಆತ್ಮಘಾತ ಮಾಡಿಕೊಳ್ಳುತ್ತಿದ್ದಾರೆ!

ಮುಸ್ಲಿಮೇತರರನ್ನು ಮುಸ್ಲಿಮರನ್ನಾಗಿ ಪರಿವರ್ತಿಸಲು ಯಾವ ಮಾಧ್ಯಮವನ್ನು ಬಳಸುತ್ತಾರೆ ಎಂಬುದನ್ನು ಹಕೀಮ್ ವಿವರಿಸದಿದ್ದರೂ ನಾವು 1,400 ವರ್ಷಗಳ ಇತಿಹಾಸ ಅಥವಾ 1947 ರ ವಿಭಜನೆಯ ಸಮಯದ ಇತಿಹಾಸವನ್ನು ನೋಡಿದರೆ, ಆಗ ಯಾವ ಮಾಧ್ಯಮಗಳನ್ನು ಬಳಸಿರಬಹುದು ಎಂಬುದು ಗಮನಕ್ಕೆ ಬರುತ್ತದೆ.