ರಸ್ತೆಯಲ್ಲಿ ಹಸುವಿನ ತಲೆ ಪತ್ತೆಯಾದ ಹಿನ್ನೆಲೆಯಲ್ಲಿ ನಗರದಲ್ಲಿ ಸಕಲ ಹಿಂದೂ ಸಮಾಜದ ಬೃಹತ್ ಮೆರವಣಿಗೆ
ರತ್ನಾಗಿರಿ – ಗೋಹತ್ಯೆ ಪ್ರಕರಣದಲ್ಲಿ ಆರೋಪಿಗಳನ್ನು ಯಾವಾಗ ಬಂಧಿಸುತ್ತಾರೆ?, ಈ ಪ್ರಮುಖ ಬೇಡಿಕೆಗಾಗಿ ಸಕಲ ಹಿಂದೂ ಸಮಾಜವು ಜುಲೈ 7 ರಂದು ರತ್ನಾಗಿರಿ ನಗರದಲ್ಲಿ ಪೊಲೀಸ್ ಕಚೇರಿ ವರೆಗೆ ಬೃಹತ್ ಮೆರವಣಿಗೆಯನ್ನು ನಡೆಸಿತು. ಈ ಮೆರವಣಿಗೆಯನ್ನು ಪೊಲೀಸರು ತಡೆದರು. ತದನಂತರ ಹಿಂದುತ್ವನಿಷ್ಠರ ಪ್ರಶ್ನೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಕುಲಕರ್ಣಿ ಅವರಿಂದ ಸಮರ್ಪಕ ಉತ್ತರ ಸಿಗದ ಹಿನ್ನೆಲೆಯಲ್ಲಿ ಕೊನೆಗೆ ಸಕಲ ಹಿಂದೂ ಸಮಾಜದವರು ರಸ್ತೆ ತಡೆ ನಡೆಸಿದರು. ‘ಎಲ್ಲಿಯವರೆಗೆ ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸುವುದಿಲ್ಲವೋ, ಅಲ್ಲಿಯವರೆಗೆ ರಸ್ತೆಯಿಂದ ಸರಿಯುವುದಿಲ್ಲ’, ಎಂಬ ನಿಲುವು ತಳೆದಿದ್ದರಿಂದ ಅಂತಿಮವಾಗಿ ಪೊಲೀಸರು ಶಂಕಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಶಂಕಿತರನ್ನು 3 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಲಾಯಿತು.
ಪದೇ ಪದೇ ನಡೆಯುತ್ತಿರುವ ಗೋಹತ್ಯೆಯಿಂದಾಗಿ ಹಿಂದೂಗಳಲ್ಲಿ ಆಕ್ರೋಶ !
ನಗರದಲ್ಲಿ ಎಂ.ಐ.ಡಿ.ಸಿ. ಪ್ರದೇಶದಲ್ಲಿ ಪತ್ತೆಯಾದ ಕರುವಿನ ತಲೆಗೆ ಹಿಂದೂ ಬಾಂಧವರು ಆಕ್ರೋಶಗೊಂಡಿದ್ದಾರೆ. ಗೋಹತ್ಯೆಯ ಹಲವು ಘಟನೆಗಳು ಆಗಾಗ ನಡೆಯುತ್ತಿದ್ದರೂ ಪೊಲೀಸ್ ಆಡಳಿತ ಇದನ್ನು ನಿರ್ಲಕ್ಷಿಸುತ್ತಿದೆ. ಈ ಹಿನ್ನೆಲೆಯಲ್ಲಿ 2 ದಿನಗಳ ಹಿಂದೆ ನಡೆದ ಘಟನೆ ಬಳಿಕ ಸಂಬಂಧಪಟ್ಟ ಆರೋಪಿಯನ್ನು ಹಿಡಿಯಲು ನಾಗರಿಕರು ಪೊಲೀಸರಿಗೆ 48 ಗಂಟೆಗಳ ಕಾಲಾವಕಾಶ ನೀಡಿದ್ದರು. ಜುಲೈ 6 ರಂದು ಈ ಗಡುವು ಮುಗಿದ ನಂತರ, ಸಕಲ ಹಿಂದೂ ಸಮಾಜದ ವತಿಯಿಂದ ಜುಲೈ 7 ರಂದು ಬೃಹತ್ ಮೆರವಣಿಗೆಯನ್ನು ಕೈಗೊಳ್ಳಲಾಯಿತು. ಈ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳು ಪಾಲ್ಗೊಂಡಿದ್ದರು.
ಪೊಲೀಸ್ ಅಧೀಕ್ಷಕರ ಎದುರಿಗೆ ತೀಕ್ಷ್ಣ ಪ್ರಶ್ನೆ !
ಮಾರುತಿ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ‘ಜೈಲ್ ರೋಡ್’ ತಲುಪುತ್ತಿದ್ದಂತೆಯೇ ಪೊಲೀಸರು ತಡೆದರು. ಪೊಲೀಸರು ಮೆರವಣಿಗೆಯನ್ನು ತಡೆದಾಗ ಮಾಜಿ ಸಂಸದ ನೀಲೇಶ್ ರಾಣೆ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಕುಲಕರ್ಣಿ ಅವರಿಗೆ ಹಿಂದೂಗಳ ಬೇಡಿಕೆಗಳನ್ನು ಮಂಡಿಸಿದರು.
ಸಂಪಾದಕೀಯ ನಿಲುವುಹಿಂದೂಗಳೇ, ನೀವು ಸಂಘಟಿತರಾದರೆ, ಏನಾಗುತ್ತದೆ ಎಂಬುದನ್ನು ಅರಿತುಕೊಳ್ಳಿರಿ ! ಗೋಹತ್ಯೆ ನಿಷೇಧ ಕಾನೂನು ಇರುವಾಗ ಅದರ ಉಪಯೋಗವಾಗಲು ಹಿಂದೂಗಳಿಗೆ ಪ್ರತಿಭಟನೆ ಮಾಡಬೇಕಾಗಬಹುದು ಇದು ಪೊಲೀಸರಿಗೆ ನಾಚಿಕೆಗೇಡು! |