ಪ್ರಯಾಗರಾಜ ಇಲ್ಲಿಯ ಭೂವಿವಾದದಿಂದ ‘ಅಪನಾ ದಲ್ ‘ ಪಕ್ಷದ ನಾಯಕನ ಹತ್ಯೆ!

ಪ್ರಯಾಗರಾಜ (ಉತ್ತರಪ್ರದೇಶ) – ಇಲ್ಲಿ ಅಪನಾ ದಲ್ (ಎಸ್) ಪಕ್ಷದ ನಾಯಕ ಇಂದ್ರಜಿತ್ ಅಲಿಯಾಸ್ ಮೋನು ಪಟೇಲ್ (ವಯಸ್ಸು ೨೪ ವರ್ಷ) ಇವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಬೆಳಗ್ಗೆ ಅವರು ಮನೆಯಿಂದ ಹೊರಗೆ ಬರುತ್ತಲೇ ನೆರೆ ಮನೆಯಲ್ಲಿ ವಾಸಿಸುವ ಸರ್ವೇಶ (ವಯಸ್ಸು ೨೮ ವರ್ಷ) ಇವನು ಅವರ ತಲೆಗೆ ಗುಂಡು ಹಾರಿಸಿದ್ದಾನೆ. ಪಟೇಲ್ ಉಚ್ಚ ನ್ಯಾಯಾಲಯದ ನ್ಯಾಯವಾದಿಯೂ ಆಗಿದ್ದರು. ಪೊಲೀಸರು ಸರ್ವೇಶನನ್ನು ಬಂಧಿಸಿದ್ದಾರೆ. ಸರ್ವೇಶನು, ನನ್ನ ಕುಟುಂಬದಲ್ಲಿನ ಹಿರಿಯರು ಇಂದ್ರಜಿತನ ಕುಟುಂಬಕ್ಕೆ ಭೂಮಿ ದಾನವಾಗಿ ನೀಡಿದ್ದರು. ಈಗ ನಾವು ಕೆಲವು ಭೂಮಿ ಹಿಂತಿರುಗಿ ಕೇಳುತ್ತಿದ್ದೆವು; ಆದರೆ ಇಂದ್ರಜಿತ್ ಅದನ್ನು ನೀಡುತ್ತಿರಲಿಲ್ಲ, ಎಂದು ಹೇಳಿದನು.