SANATAN PRABHAT EXCLUSIVE : ಜ್ಞಾನವಾಪಿ, ಭೋಜಶಾಲಾ ಮೊದಲಾದ ಪ್ರಕರಣಗಳಲ್ಲಿ ಕಕ್ಷಿದಾರನಾಗಿದ್ದ ಹಿಂದೂ ಮುಖಂಡನನ್ನು ಶಾಲೆಯು ಶಿಕ್ಷಕ ಹುದ್ದೆಯಿಂದ ತೆಗೆದರು !

  • ಲಕ್ಷ್ಮಣಪುರಿ (ಉತ್ತರ ಪ್ರದೇಶ)ಯ ‘ಸಿಟಿ ಮಾಂಟೆಸ್ಸರಿ ಸ್ಕೂಲ್'(CMS) ನ ಹಿಂದೂ ದ್ವೇಷ!

  • ಹಿಂದೂ ದೇವಾಲಯಗಳನ್ನು ಅತಿಕ್ರಮಣದಿಂದ ಮುಕ್ತಗೊಳಿಸುವಂತೆ ಮನವಿ ಸಲ್ಲಿಸಿದ್ದಕ್ಕಾಗಿ ಮತ್ತು ಹಿಂದೂಗಳ ಮತಾಂತರದ ವಿರುದ್ಧ ಕಾರ್ಯ ಮಾಡಿದ್ದಕ್ಕಾಗಿ ಶಾಲೆಯು ಕಿಡಿ ಕಾರಿತ್ತು !

  • ವಿಶ್ವದ ಅತಿದೊಡ್ಡ ಶಾಲೆ ಎಂಬ ಹೆಗ್ಗಳಿಕೆ !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಖ್ಯಾತ CMS (ಸಿಟಿ ಮಾಂಟೆಸ್ಸರಿ ಶಾಲೆ) ಶಿಕ್ಷಕ ಮತ್ತು ಪ್ರಖರ ಹಿಂದುತ್ವನಿಷ್ಠ ಶ್ರೀ. ಕುಲದೀಪ ತಿವಾರಿ ಇವರನ್ನು ಶಾಲೆಯಿಂದ ವಜಾ ಮಾಡಿರುವ ಘಟನೆ ಇತ್ತೀಚೆಗೆ ಬೆಳಕಿಗೆ ಬಂದಿದೆ. ತಿವಾರಿ ಅವರು ಭೋಜಶಾಲಾ, ಜ್ಞಾನವಾಪಿ, ಮಥುರಾ ಮೊದಲಾದ ಪ್ರಕರಣಗಳಲ್ಲಿ ಹಿಂದೂ ಕಕ್ಷಿದಾರರಾಗಿದ್ದರಿಂದ ಅದೇ ರೀತಿ ಇಸ್ಲಾಮೀ ಅತಿಕ್ರಮಣದ ವಿರುದ್ಧ ಅವರು ನಿರಂತರ ಧ್ವನಿ ಎತ್ತಿದ್ದರಿಂದ ಅವರ ವಿರುದ್ಧ ಈ ತೀವ್ರ ಕ್ರಮ ಕೈಗೊಳ್ಳಲಾಗಿದೆ. ವಿಶೇಷವೆಂದರೆ ಈ ಶಾಲೆಯು ‘ವಿಶ್ವದ ಅತಿ ದೊಡ್ಡ ಶಾಲೆ’ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ‘ಸನಾತನ ಪ್ರಭಾತ’ದ ಪ್ರತಿನಿಧಿಯು ಶಾಲೆಯ ಪ್ರಾಂಶುಪಾಲರಾದ ಜಯಶ್ರೀ ಕೃಷ್ಣನ್ ಅವರನ್ನು ಸಂಪರ್ಕಿಸಿದಾಗ ಅವರು ಸಭೆ ನಡೆಯುತ್ತಿದೆ ಎಂದು ಹೇಳಿ ಮಾತನಾಡಲು ನಿರಾಕರಿಸಿದರು. ಮತ್ತೆ ಅವರನ್ನು ಸಂಪರ್ಕಿಸಿದಾಗ ಅವರು ಫೋನ್ ಸ್ವೀಕರಿಸಲಿಲ್ಲ.

ಶ್ರೀ. ಕುಲದೀಪ್ ತಿವಾರಿ

ಆಘಾತಕಾರಿ ಘಟನಾಕ್ರಮ ಹೀಗಿದೆ!

ಶ್ರೀ. ಕುಲದೀಪ್ ತಿವಾರಿ ಅವರು ಲಕ್ಷ್ಮಣಪುರಿ ಜಿಲ್ಲಾ ಅಧಿಕಾರಿಗೆ ಪತ್ರ ಬರೆದು ತಮ್ಮ ವಿರುದ್ಧ ಅನ್ಯಾಯದ ಕ್ರಮದ ಬಗ್ಗೆ ದೂರು ನೀಡಿದ್ದಾರೆ. ದೂರಿನ ಪ್ರತಿಯು ‘ಸನಾತನ ಪ್ರಭಾತ’ದ ಬಳಿ ಲಭ್ಯವಿದ್ದು ಅದರ ಪ್ರಮುಖ ಅಂಶಗಳು ಈ ಕೆಳಗಿನಂತಿವೆ:

1. ಶ್ರೀ. ತಿವಾರಿ ಅವರು 2009 ರಿಂದ ಅಂದರೆ ಕಳೆದ 15 ವರ್ಷಗಳಿಂದ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

2. ಸ್ವತಃ ಧರ್ಮನಿಷ್ಠ ಹಿಂದೂ ಆಗಿದ್ದರಿಂದ ಅವರು ಪ್ರತಿದಿನ ಶಾಲೆಗೆ ಹೋಗುವ ತಿಲಕವನ್ನು ಹಚ್ಚುತ್ತಿದ್ದರು. ಇದರೊಂದಿಗೆ ಜುಟ್ಟನ್ನೂ ಇಟ್ಟುಕೊಂಡಿದ್ದಾರೆ. ಶಾಲೆಯ ಪ್ರಿನ್ಸಿಪಾಲ್ ಜಯಶ್ರೀ ಕೃಷ್ಣನ್ ಮತ್ತು ಉಪಪ್ರಾಂಶುಪಾಲೆ ರೀಟಾ ಫ್ಲೆಮಿಂಗ್ ಯಾವಾಗಲೂ ಈ ಕೃತಿಗೆ ವಿರೋಧಿಸಿದರು ಮತ್ತು ಅವರನ್ನು ಕೆಲಸದಿಂದ ತೆಗೆದುಹಾಕುವ ಬೆದರಿಕೆ ಹಾಕುತ್ತಿದ್ದರು. ಅಲ್ಲದೇ ಆಗಾಗ ಅವರಿಗೆ ಕಚೇರಿಗೆ ಕರೆಸಿಕೊಂಡು ನಿಂದಿಸಿದ್ದಾರೆ. ಆದರೂ ಅವರು ಈ ವಿರೋಧವನ್ನು ಎಂದಿಗೂ ಬಾಗಲಿಲ್ಲ. ಈ ಬಗ್ಗೆ ‘ಸನಾತನ ಪ್ರಭಾತ್’ ಪ್ರತಿನಿಧಿಯವರು ತಿವಾರಿ ಅವರನ್ನು ಕೇಳಿದಾಗ ಅವರು, ಶಾಲೆಯಲ್ಲಿ ಇತರ ಕೆಲವು ಶಿಕ್ಷಕರು ಸಹ ನನ್ನಂತೆ ಧರ್ಮಾಚರಣೆಯನ್ನು ಮಾಡುತ್ತಿದ್ದರು, ಆದರೆ ಶಾಲೆಯ ಆಡಳಿತ ಮಂಡಳಿಯು ಅವರಿಗೆ ಕ್ರಮ ಕೈಗೊಳ್ಳುವುದಾಗಿ ಬೆದರಿಕೆ ಹಾಕಿದ್ದರಿಂದ ಅವರು ಧರ್ಮಾಚರಣೆವನ್ನು ಮಾಡುವುದನ್ನು ನಿಲ್ಲಿಸಿದರು. ಇತರ ಶಾಲೆಗಳಿಗೆ ಹೋಲಿಸಿದರೆ ಈ ಶಾಲೆಯು ಶಿಕ್ಷಕರಿಗೆ ಉತ್ತಮ ವೇತನವನ್ನು ನೀಡುತ್ತದೆ, ಆದ್ದರಿಂದ ಉತ್ತಮ ಜೀವನೋಪಾಯವನ್ನು ಬಿಟ್ಟುಕೊಡಲು ಯಾರೂ ಯೋಚಿಸುವುದಿಲ್ಲ. (ಈ ಘಟನೆಯು ಶ್ರೀ. ಕುಲದೀಪ ತಿವಾರಿ ಇವರ ಧರ್ಮಕ್ಕಾಗಿ ಯಾವುದೇ ಹಂತದಲ್ಲೂ ತ್ಯಾಗ ಮಾಡುವ ಸಿದ್ಧತೆ ತೋರಿಸುತ್ತದೆ. ಅಂತಹ ಹಿಂದೂಗಳೇ ಹಿಂದೂ ಧರ್ಮದ ನಿಜವಾದ ಶಕ್ತಿಯಾಗಿದೆ. ‘ಧರ್ಮೋ ರಕ್ಷತಿ ರಕ್ಷಿತ್:’ ಪ್ರಕಾರ ದೇವರು ಅವರನ್ನು ಖಂಡಿತವಾಗಿ ರಕ್ಷಿಸುತ್ತಾನೆ ಎಂದು ಹಿಂದೂಗಳು ನೆನಪಿನಲ್ಲಿಟ್ಟುಕೊಳ್ಳಬೇಕು! – ಸಂಪಾದಕರು)

ಶ್ರೀ. ತಿವಾರಿ ಇವರು ಸಲ್ಲಿಸಿದ ದೂರು

3. ದೂರಿನಲ್ಲಿ, ತಿವಾರಿ ಧಾರ್‌ನಲ್ಲಿರುವ ಭೋಜಶಾಲಾ, ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ಮತ್ತು ವಾರಣಾಸಿಯ ಜ್ಞಾನವಾಪಿ ಪ್ರಕರಣದ ಹಿಂದೂ ಕಕ್ಷಿದಾರರಾಗಿದ್ದಾರೆ. ಇವರು ಸ್ಥಾಪಿಸಿದ ‘ಜನ್ ಉದ್ಘೋಷ್ ಸೇವಾ ಸಂಸ್ಥಾನ’ ಸಂಸ್ಥೆಯ ಮೂಲಕ ಹಲವು ರಾಷ್ಟ್ರೀಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕೆಲವು ತಿಂಗಳ ಹಿಂದೆ ಬಿಡುಗಡೆಯಾದ ‘ಆದಿಪುರುಷ’ ಚಿತ್ರದಲ್ಲಿ ‘ಶ್ರೀರಾಮಚರಿತಮಾನಸ’ವನ್ನು ಅನುಚಿತವಾಗಿ ಚಿತ್ರಿಸಿರುವುದನ್ನು ವಿರೋಧಿಸಿ ಅವರು ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ನ್ಯಾಯಾಲಯವೂ ಅದನ್ನು ಆಲಿಸಿತ್ತು. ಇದರೊಂದಿಗೆ ಶರಿಯತ್ ಕಾಯ್ದೆಯ ಸಂವಿಧಾನಕ್ಕೆ ವಿರುದ್ಧವಾಗಿದೆ ಎಂದು ಹೇಳಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯಲ್ಲಿ ತಿವಾರಿ ಒಬ್ಬರು ಕಕ್ಷಿದಾರರಾಗಿದ್ದಾರೆ. ಅವರ ಸಂಘಟನೆಯು ಹಿಂದೂಗಳ ಮತಾಂತರವನ್ನು ತಡೆಯಲು ಜಾಗೃತಿ ಕಾರ್ಯಕ್ರಮಗಳನ್ನು ನಡೆಸುತ್ತದೆ. ಇದರಿಂದಾಗಿ ಶಾಲಾ ಆಡಳಿತ ಮಂಡಳಿ ಅವರ ಮೇಲೆ ಕಣ್ಣಿಟ್ಟಿತ್ತು.

4. 29 ಅಕ್ಟೋಬರ್ 2023 ರಂದು, ತಿವಾರಿ ಅವರ ಸಂಸ್ಥೆಯು ಲಕ್ಷ್ಮಣಪುರಿಯಲ್ಲಿ ಕಾಶಿ-ಮಥುರಾ-ಭೋಜಶಾಲಾ ಕುರಿತು ಜಾಗೃತಿ ಮೂಡಿಸಲು ಭವ್ಯವಾದ ಆಧ್ಯಾತ್ಮಿಕ ಮತ್ತು ಸಾಂಸ್ಕೃತಿಕ ರಾಷ್ಟ್ರೀಯ ಪ್ರದರ್ಶನವನ್ನು ಆಯೋಜಿಸಿತು. ಅದನ್ನು ರಾಷ್ಟ್ರಮಟ್ಟದ ಹಲವು ಗಣ್ಯರು ಭೇಟಿ ಮಾಡಿ ಹಿಂದೂಗಳ ಸಮಸ್ಯೆಗಳ ಬಗ್ಗೆ ಭಾಷಣ ಮಾಡಿದರು. ಈ ಪ್ರದರ್ಶನದ ನಂತರ ತಿವಾರಿಗೆ ಶಾಲೆಯ ಪ್ರಾಂಶುಪಾಲರು ‘ರಾಜೀನಾಮೆ ಪತ್ರ ಕೊಡಿ ಇಲ್ಲವಾದಲ್ಲಿ ನಾವೇ ಕೆಲಸದಿಂದ ತೆಗೆದು ಹಾಕುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

5. ಮಾರ್ಚ್ 2024 ರಲ್ಲಿ, ಮಧ್ಯಪ್ರದೇಶದ ಧಾರ್‌ನಲ್ಲಿ ಭೋಜಶಾಲೆಯ ಸಮೀಕ್ಷೆಯನ್ನು ನ್ಯಾಯಾಲಯದ ಆದೇಶದ ಮೇರೆಗೆ ಪ್ರಾರಂಭಿಸಲಾಯಿತು. ಆ ವೇಳೆ ತಿವಾರಿ ಅಲ್ಲಿ ಹಾಜರಿದ್ದು, ಈ ನಿಟ್ಟಿನಲ್ಲಿ ಮಾಧ್ಯಮಗಳ ಮುಂದೆ ಬಂದು ಹಿಂದೂಗಳ ನಿಲುವನ್ನು ಮಂಡಿಸಿದರು. ಇದರ ನಂತರ, ಶಾಲೆಯ ಆಡಳಿತವು ತಿವಾರಿ ಸ್ವಜನಪಕ್ಷಪಾತ ಎಂದು ಆರೋಪಿಸಿ ಅವರನ್ನು ಕೆಲಸದಿಂದ ವಜಾಗೊಳಿಸಿತು. ಅವರು 1 ಜುಲೈ 2024 ರಂದು ಶಾಲೆಯಿಂದ ತಮ್ಮ ಅಧಿಕೃತ ಪತ್ರವನ್ನು ಪಡೆದರು. ಇದರಿಂದ ತಿವಾರಿ ಅವರು ಜುಲೈ 4 ರಂದು ಲಕ್ಷ್ಮಣಪುರಿ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಲಕ್ಷ್ಮಣಪುರಿ ಜಿಲ್ಲಾಧಿಕಾರಿ ಸೂರ್ಯಪಾಲ್ ಗಂಗವಾರ್ ಇವರು ಈ ಪ್ರಕರಣದಲ್ಲಿ ಯಾವುದೇ ಕ್ರಮ ಕೈಗೊಂಡಿದ್ದಾರೆಯೇ, ಎಂಬುದಕ್ಕಾಗಿ ಅವರನ್ನು ಸಂಪರ್ಕಿಸಿದಾಗ, ಅವರು ತಮ್ಮ ಆಪ್ತ ಕಾರ್ಯದರ್ಶಿ ಅಶುತೋಷ್ ಅವರೊಂದಿಗೆ ಮಾತನಾಡಲು ಸಾಧ್ಯವಾಯಿತು, ಆದರೆ ಗಂಗವಾರ್ ಅವರೊಂದಿಗೆ ಚರ್ಚಿಸಲು ಸಾಧ್ಯವಾಗಲಿಲ್ಲ.

ಮುಸ್ಲಿಮ್ ಶಿಕ್ಷಕರೇ ಇರುವ ಮತ್ತು ಬಹಾಯಿ ಧರ್ಮವನ್ನು ಪ್ರಚಾರ ಮಾಡುವ ‘ಸಿಟಿ ಮಾಂಟೆಸ್ಸರಿ ಸ್ಕೂಲ್’

ತಿವಾರಿಯವರಿಗೆ ಈ ಬೆಳವಣಿಗೆಯ ಬಗ್ಗೆ ಚರ್ಚಿಸುತ್ತಿದ್ದಾಗ ಹಲವು ಆಘಾತಕಾರಿ ವಿಷಯಗಳು ಬೆಳಕಿಗೆ ಬಂದವು. ಶಾಲೆ ‘ಸಿಟಿ ಮಾಂಟೆಸ್ಸರಿ ಸ್ಕೂಲ್’ 12 ನೇ ತರಗತಿಯವರೆಗೆ ಶಿಕ್ಷಣವನ್ನು ಒದಗಿಸುತ್ತದೆ. ಈ ಶಾಲೆಯಲ್ಲಿ ನಗರದ 65 ಸಾವಿರಕ್ಕೂ ಹೆಚ್ಚು ಮಕ್ಕಳು ಓದುತ್ತಿದ್ದಾರೆ. ನಗರದಲ್ಲಿ ಶಾಲೆಯ 20 ರಿಂದ 25 ಶಾಖೆಗಳಿವೆ. ಇಸ್ಲಾಂನ ಶಾಖೆಯಾದ ಬಹಾಯಿ ಪಂಥಕ್ಕೆ ಮತಾಂತರಗೊಂಡ ಜಗದೀಶ್ ಅಗರವಾಲ್ ಅವರು ಈ ಶಾಲೆಯನ್ನು ಸ್ಥಾಪಿಸಿದರು. ಅವರ ಶಾಲೆಯಲ್ಲಿ ಹೆಚ್ಚಿನ ಶಿಕ್ಷಕರು ಮುಸ್ಲಿಂ ಅಥವಾ ಕ್ರೈಸ್ತರಾಗಿದ್ದಾರೆ. ಅವರ ಶಾಲೆಯಲ್ಲಿ ಇಫ್ತಾರ್ ಕೂಟ ಆಯೋಜಿಸಲಾಗುತ್ತದೆ. ಬಹಾಯಿ ಪಂಥವು ಇಸ್ಲಾಂ ಧರ್ಮದ ಒಂದು ರೂಪವಾಗಿದೆ ಮತ್ತು ಶಾಲೆಯ ಮೂಲಕ ಮತಾಂತರ ಯತ್ನದ ಆರೋಪಗಳಿವೆ. ಅವರಿಗೆ ವಿದೇಶದಿಂದ ಅಪಾರ ಪ್ರಮಾಣದಲ್ಲಿ ಹಣ ಸಿಗುತ್ತದೆ. ಶಾಲೆಯು ನ್ಯಾಯಾಲಯಗಳ ಮುಖ್ಯ ನ್ಯಾಯಮೂರ್ತಿಗಳ ಸಮ್ಮೇಳನಗಳನ್ನು ನಡೆಸುತ್ತದೆ. ಇದರಲ್ಲಿ 50 ರಿಂದ 60 ದೇಶಗಳ ನ್ಯಾಯಾಧೀಶರು ಭಾಗವಹಿಸುತ್ತಾರೆ. ಕಪ್ಪುಹಣವನ್ನು ಬಿಳಿ ಮಾಡಲು ಈ ಪ್ರಯತ್ನಗಳು ನಡೆಯುತ್ತಿವೆ ಎಂದು ತಿವಾರಿ ಅವರು ಗಂಭೀರ ಆರೋಪವನ್ನೂ ಮಾಡಿದ್ದಾರೆ. (ಸರ್ಕಾರ ಇಂತಹ ಶಾಲೆಗಳ ಬಗ್ಗೆ ತನಿಖೆ ನಡೆಸಿ ಪರವಾನಗಿ ರದ್ದುಗೊಳಿಸಬೇಕು ಎಂಬುದು ಧರ್ಮನಿಷ್ಠ ಹಿಂದೂಗಳ ಆಗ್ರಹವಾಗಿದೆ! – ಸಂಪಾದಕರು)

 

ಸಂಪಾದಕೀಯ ನಿಲುವು

ಖಾಸಗಿ ಶಾಲಾ ಶಿಕ್ಷಕರಿಗೆ ಅವರ ವೈಯಕ್ತಿಕ ಜೀವನದಲ್ಲಿ ಏನು ಮಾಡಬೇಕು ಎಂದು ಹೇಳಲು ಶಾಲೆಯ ಆಡಳಿತ ಮಂಡಳಿಗೆ ಯಾವ ಹಕ್ಕಿದೆ? ಕೇವಲ ಹಿಂದುತ್ವವನ್ನು ತಗ್ಗಿಸಲು ಇಂತಹ ಕೆಲಸಗಳನ್ನು ಮಾಡಲಾಗುತ್ತದೆ, ಎಂಬುದನ್ನು ನೆನಪಿನಲ್ಲಿಡಿ! ಹಿಂದೂಗಳು ಒಗ್ಗೂಡಿ ಇಂತಹ ಶಾಲೆಗಳ ವಿರುದ್ಧ ಧ್ವನಿ ಎತ್ತಬೇಕು!

ಹಿಂದೂ ವಿರೋಧಿ ‘ಇಕೊಸಿಸ್ಟಮ್’ (ವ್ಯವಸ್ಥೆ) ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದಕ್ಕೆ ಇದು ಜೀವಂತ ಉದಾಹರಣೆಯಾಗಿದೆ. ಹಿಂದೂಗಳ ನಾಶಕ್ಕಾಗಿ ರೂಪಿಸಲಾಗುವ ಸಂಚನ್ನು ಧ್ವಂಸಗೊಳಿಸಲು ಹಿಂದೂ ಸಂಘಟನೆ ಅತ್ಯವಶ್ಯಕ, ಎಂಬುದು ಅರಿಯಿರಿ !