Wrong Depiction Of Hindu Saints: ಹಿಂದೂದ್ವೇಷಿ ‘ಮಹಾರಾಜ’ ಚಲನಚಿತ್ರಕ್ಕೆ ಪ್ರಸಿದ್ಧಿ ಸಿಗಲು ಇಸ್ಲಾಮಿಕ್ ದೇಶಗಳ ಮೊರೆ ಹೋದ ‘ನೆಟ್‌ಫ್ಲಿಕ್ಸ್’ !

ಮುಂಬಯಿ – ‘ಮಹಾರಾಜ’ ಈ ಚಲನಚಿತ್ರವು ಒಂದು ದೊಡ್ಡ ಸಾಮಾಜಿಕ ಸಮಸ್ಯೆಯನ್ನು ಬಯಲಿಗೆಳೆಯುವ ಚಲನಚಿತ್ರವಾಗಿದೆ, ಅದನ್ನು ತೋರಿಸಲು ಮತ್ತು ಹಿಂದೂದ್ವೇಷಿ ನಟ ಅಮೀರ್ ಖಾನನ ಹಿರಿಯ ಪುತ್ರ ಜುನೈದ್ ಖಾನ್ ಅವರ ಹೆಸರು ಜಗತ್ತಿನಾದ್ಯಂತ ತಲುಪಲು ‘ನೆಟ್‌ಫ್ಲಿಕ್ಸ್’ ಈ `ಓಟಿಟಿ’ ಮೇಲೆ ಪ್ರಸಾರ ಮಾಡುವ ಸಂಸ್ಥೆಗೆ ಭಾರತದಲ್ಲಿ 2 ಅಕ್ಕಪಕ್ಕದ ಮುಸ್ಲಿಂ ದೇಶಗಳ ವಿಶೇಷ ಸಹಾಯ ದೊರಕಿದೆ, ಎನ್ನುವ ಮಾಹಿತಿಯನ್ನು `ಅಮರ ಉಜಾಲಾ’ ದ ಸಂಕೇತಸ್ಥಳದ ಮೇಲೆ ಪ್ರಸಾರವಾಗಿದೆ. ‘ಮಹಾರಾಜ’ ಚಲನಚಿತ್ರಕ್ಕೆ ಜಾಗತಿಕ ಶ್ರೇಯಾಂಕಕ್ಕೆ ತರಲು, ‘ನೆಟ್‌ಫ್ಲಿಕ್ಸ್’ ಪಾಕಿಸ್ತಾನ ಮತ್ತು ಬಾಂಗ್ಲಾದೇಶಗಳ ಸಾಮಾಜಿಕ ಮಾಧ್ಯಮಗಳ ಮೇಲೆ ಅದನ್ನು ವ್ಯಾಪಕವಾಗಿ ಪ್ರಸಾರ ಮಾಡಿದೆ. ಈ ಚಲನಚಿತ್ರ ಅತ್ಯಧಿಕವಾಗಿ ವೀಕ್ಷಿಸಲಾಗುತ್ತಿರುವ 14 ದೇಶಗಳಲ್ಲಿ ಮುಸ್ಲಿಮರ ಜನಸಂಖ್ಯೆ ಅಧಿಕವಾಗಿದೆ. `ಮಹಾರಾಜ’ ಈ ಚಲನಚಿತ್ರದಲ್ಲಿ ಹಿಂದೂ ಸಂತರನ್ನು ಖಳನಾಯಕನ ಪಾತ್ರದಲ್ಲಿ ತೋರಿಸಲಾಗಿದೆ. ಇದರಿಂದ ಈ ಚಲನಚಿತ್ರಕ್ಕೆ ಭಾರತದ ಹಿಂದುತ್ವನಿಷ್ಠರು ದೊಡ್ಡ ಪ್ರಮಾಣದಲ್ಲಿ ವಿರೋಧಿಸಿದ್ದರು.

‘ಮಹಾರಾಜ’ ಈ ಚಲನಚಿತ್ರದ ಮೇಲೆ ಗುಜರಾತ ಉಚ್ಚನ್ಯಾಯಾಲಯ ವಿಧಿಸಿದ್ದ ನಿಷೇದವನ್ನು ರದ್ದುಗೊಳಿಸಿದ ನಂತರ ಜೂನ್ 21 ರಂದು ಈ ಚಲನಚಿತ್ರ ಪ್ರದರ್ಶನಗೊಂಡಿತ್ತು. ಈ ಚಲನಚಿತ್ರಕ್ಕೆ ಭಾರತೀಯ ಮಾಧ್ಯಮಗಳಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತವಲ್ಲದೆ, ಈ ಚಲನಚಿತ್ರವು ಪ್ರಸ್ತುತ ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ನಲ್ಲಿ ಮೊದಲ ಸ್ಥಾನದಲ್ಲಿದೆ. ಬಹರೇನ, ಕುವೈತ್, ಮಲೇಷ್ಯಾ, ಓಮನ್, ಕತಾರ್, ಸೌದಿ ಅರೇಬಿಯಾ, ಶ್ರೀಲಂಕಾ, ಥೈಲ್ಯಾಂಡ್, ಸಿಂಗಾಪುರ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ವ್ಯಾಪಕವಾಗಿ ವೀಕ್ಷಿಸಲಾಗುತ್ತಿದೆ. ಅಮೀರ್ ಖಾನನ ಪುತ್ರ ಜುನೈದ್ ಗೆ ಜನಪ್ರಿಯ ಗೊಳಿಸಲು ಈ ಸಂಪೂರ್ಣ ತಂತ್ರವನ್ನು ಬಹಳ ಚಿಂತನಶೀಲವಾಗಿ ತಯಾರಿಸಲಾಗಿದೆ ಎಂದು ಹೇಳಲಾಗುತ್ತದೆ.

ಸಂಪಾದಕೀಯ ನಿಲುವು

  • ಹಿಂದೂ ಧರ್ಮ, ಧರ್ಮಗ್ರಂಥಗಳು ಮತ್ತು ದೇವರುಗಳನ್ನು ಅವಮಾನಿಸುವ ಚಲನಚಿತ್ರಗಳನ್ನು ನಿರ್ಮಿಸುವುದು ಮತ್ತು ಅದನ್ನು ಪ್ರಸಾರ ಮಾಡುವುದರ ಹಿಂದೆ ಅಂತರರಾಷ್ಟ್ರೀಯ ಷಡ್ಯಂತ್ರ ಇದೆ ಎಂದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.

  • ‘ನೆಟ್‌ಫ್ಲಿಕ್ಸ್‌’ನಂತಹ ಸಂಸ್ಥೆಗಳನ್ನು ಸರಿದಾರಿಗೆ ತರಲು ಭಾರತ ಸರಕಾರ ಯಾವ ಕ್ರಮಗಳನ್ನು ತೆಗೆದುಕೊಳ್ಳಲಿದೆ ?