|
ಚೆನ್ನೈ (ತಮಿಳುನಾಡು) – ರಾಜ್ಯದ ತಂಜಾವೂರಿನಲ್ಲಿರುವ ‘ಹಿಂದೂ ಯೆಲ್ಲುಚಿ ಪುರವೈ’ ಈ ಹಿಂದುತ್ವನಿಷ್ಠ ಸಂಘಟನೆಯ ಮುಖ್ಯಸ್ಥ ಶ್ರೀ. ಪಾಲಾ ಸಂತೋಷ ಕುಮಾರ್ ಅವರನ್ನು ರಾಜ್ಯ ಸರ್ಕಾರ ಬಂಧಿಸಿದೆ ಎಂದು ತಿಳಿದುಬಂದಿದೆ. ಕುಮಾರ ಇವರು ಹಿಂದುತ್ವನಿಷ್ಠರನ್ನು ಉದ್ದೇಶಿಸಿ ಮಾತನಾಡುತ್ತಾ, ತಮಿಳುನಾಡಿನ ಡಿಎಂಕೆ ಸರ್ಕಾರವು 200 ಹಿಂದೂ ದೇವಾಲಯಗಳನ್ನು ಕೆಡವಿದ ಮಾಹಿತಿ ನೀಡಿದ್ದರು. ಇದರಿಂದ ಸರ್ಕಾರವು ಅವರನ್ನು ಅನ್ಯಾಯವಾಗಿ ಬಂಧಿಸಿದೆ. ಸರ್ಕಾರದ ಮಾನಹಾನಿ ಮಾಡಿದ ಕಾರಣ ನೀಡಿ ಅವರ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗಿದೆ. ಕುಮಾರ್ ವಿರುದ್ಧ ಅಪರಾಧ ಪ್ರಕರಣ ದಾಖಲಿಸಲಾಗಿದೆ. ಒಂದು ದಿನದ ನಂತರ ಅವರಿಗೆ ಜಾಮೀನು ನೀಡಲಾಗಿದೆ ಎಂದು ವರದಿಯಾಗಿದೆ. ‘ಸನಾತನ ಪ್ರಭಾತ’ದ ಪ್ರತಿನಿಧಿ ಪಾಲಾ ಸಂತೋಷ್ ಕುಮಾರ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ.
Tamil Nadu Government arrests Hindu activist Pala Santosh Kumar.
In the recent Vaishvik Hindu Rashtra Mahotsav at Goa, Mr Pala Santosh Kumar disclosed how the TN Government demolished around 200 temples in the State.
The Government has filed a defamation case against the… pic.twitter.com/V261piQbTg
— Sanatan Prabhat (@SanatanPrabhat) July 5, 2024