ಮಾಸ್ಕೋ (ರಷ್ಯಾ ) – ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ೨೨ ನೆಯ ಭಾರತ-ರಷ್ಯಾ ವಾರ್ಷಿಕ ಶೃಂಗಸಭೇಗಾಗಿ ರಷ್ಯಾ ಪ್ರವಾಸದಲ್ಲಿದ್ದಾರೆ . ಜುಲೈ ೮ ರಿಂದ ೧೦ರ ಕಾಲಾವಧಿಯಲ್ಲಿ ಅವರು ೨ ದೇಶಗಳಿಗೆ ಭೇಟಿ ನೀಡುವರು. ರಷ್ಯಾದ ನಂತರ ಅವರು ಆಸ್ಟ್ರೇಲಿಯಾದ ರಾಜಧಾನಿ ವಿಯೆನ್ನಾ ಗೆ ಭೇಟಿ ನೀಡುವರು. ಶೃಂಗ ಸಭೆಯ ಮೊದಲು ರಷ್ಯಾ, ಇಂಡೋ ರಷಿಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ ‘ ಇಂದ ೩೫ ಸಾವಿರಗಿಂತಲೂ ಹೆಚ್ಚಿನ ‘ಮೇಡ್ ಇನ್ ಇಂಡಿಯಾ ‘ ‘ಏಕೆ ೨೦೩ ಅಸಾಲ್ಟ್ ರೈಫಲ್ಸ್ ‘ ನ ಉತ್ಪಾದನೆ ಪ್ರಾರಂಭವಾಗಿದ್ದು ಅದನ್ನು ಭಾರತೀಯ ಸೈನ್ಯಕ್ಕೆ ಒಪ್ಪಿಸಲಾಗಿದೆ ಎಂದು ಘೋಷಿಸಿದೆ.
‘ಎಕೆ – ೨೦೩’ ಇದು ರಷ್ಯಾದ ಪ್ರಸಿದ್ಧ ‘ಎಕೆ – ೪೭’ ಅಸಾಲ್ಟ್ ರೈಫಲ್ಸ್ ನ ಆಧುನಿಕ ಆವೃತ್ತಿಯಾಗಿದೆ. ಎಕೆ ಲೈಫಲ್ ವಿಶ್ವಾಸಾರ್ಹತೆ, ಬಾಳಿಕೆ ಮತ್ತು ಕಾರ್ಯಾಚರಣೆಯಲ್ಲಿ ಸುಲಭತೆಗಾಗಿ ಗುರುತಿಸಲಾಗುತ್ತದೆ. ಈ ರೈಫಲ್ ೫೦೦ ರಿಂದ ೮೦೦ ಮೀಟರವರೆಗೆ ಗುಂಡು ಹಾರಿಸಬಲ್ಲದು. ಇದು ಒಂದು ನಿಮಿಷದಲ್ಲಿ ೭೦೦ ಗುಂಡು ಹಾರಿಸುವ ಸಾಮರ್ಥ್ಯ ಹೊಂದಿದೆ.