ನವ ದೆಹಲಿ – ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (‘ಇಗ್ನೂ’) ಭಗವದ್ಗೀತೆಯ ಹೊಸ ಪದವಿ ಪಠ್ಯಕ್ರಮವನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು 2024-2025ರ ಶೈಕ್ಷಣಿಕ ಅವಧಿಗೆ `ಇಗ್ನೂ’ನಿಂದ ಭಗವದ್ಗೀತೆ ಅಭ್ಯಾಸದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದಾಗಿದೆ. ಈ ಅಭ್ಯಾಸಕ್ರಮ ಜುಲೈ 2024 ರಿಂದ `ಓಪನ ಅಂಡ ಡಿಸ್ಟನ್ಸ ಲರ್ನಿಂಗ’ ಪ್ರಣಾಲಿಕೆಯ ಕೆಳಗೆ ಕಾರ್ಯನಿರ್ವಹಿಸಲಿದೆ. `ಇಗ್ನೂ’ ತನ್ನ ಅಧಿಕೃತ ವೆಬ್‌ಸೈಟ್ ignou.ac.in ನಲ್ಲಿ ಅಧಿಸೂಚನೆಯನ್ನು ಪ್ರಕಟಿಸಿ, ಈ ವಿಷಯದ ಬಗ್ಗೆ ಮಾಹಿತಿಯನ್ನು ನೀಡಿದೆ.
ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯವು ಭಗವದ್ಗೀತೆಯ ಎಂ.ಎ. ಈ ಸ್ನಾತಕೋತ್ತರ ಅಭ್ಯಾಸಕ್ರಮ ಪ್ರಾರಂಭ ಮಾಡಿದೆ. ಈ ಕಾರ್ಯಕ್ರಮದ ಪೂರ್ಣ ಹೆಸರು ‘ಎಂ.ಎ. ಭಗವದ್ಗೀತೆ ಸ್ಟಡೀಸ’ ಎಂದಾಗಿದೆ. ಪ್ರಾ. ದೇವೇಶ ಕುಮಾರ ಮಿಶ್ರಾ ಅವರು ಅನೇಕ ವಿಶ್ವವಿದ್ಯಾಲಯಗಳ ಉಪಕುಲಪತಿ ಮತ್ತು ಶಿಕ್ಷಕರ ಮಾರ್ಗದರ್ಶನದಲ್ಲಿ ಈ ಅಭ್ಯಾಸ ಕ್ರಮಗಳನ್ನು ರಚಿಸಿದ್ದಾರೆ ಮತ್ತು ಅಭಿವೃದ್ಧಿಪಡಿಸಿದ್ದಾರೆ. ಈ ಅಭ್ಯಾಸಕ್ರಮದ ಕಾಲಾವಧಿ 2 ವರ್ಷಗಳು ಇರಲಿದೆ. ಸಧ್ಯ ಈ ಅಭ್ಯಾಸಕ್ರಮವು ಹಿಂದಿ ಮಾಧ್ಯಮದಲ್ಲಿ ಲಭ್ಯವಿದೆ; ಆದರೆ ಮುಂಬರುವ ಕೆಲವು ವರ್ಷಗಳಲ್ಲಿ ಇಂಗ್ಲಿಷ್ ನಲ್ಲಿಯೂ ಕಲಿಸಲಿದ್ದಾರೆ.
ಸಂಪಾದಕೀಯ ನಿಲುವುವಿದ್ಯಾಪೀಠದ ಶ್ಲಾಘನೀಯ ಉಪಕ್ರಮ! |