ಕಾಶಿಯಲ್ಲಿರುವ 1 ಸಾವಿರ ಹಿಂದೂ ಮತ್ತು ಜೈನ ಮಂದಿರಗಳು ಮತ್ತು ಗುರುದ್ವಾರಗಳ ಜೀರ್ಣೋದ್ದಾರ !

ಪ್ರವಾಸಿಗರಿಗೆ ದೇವಸ್ಥಾನಗಳು ಮತ್ತು ಗುರುದ್ವಾರಗಳ ಬಗ್ಗೆ ಆನ್‌ಲೈನ್ ಮಾಹಿತಿ ಲಭ್ಯವಾಗಲಿದೆ

ವಾರಣಾಸಿ (ಉತ್ತರ ಪ್ರದೇಶ) – ಕಾಶಿಯಲ್ಲಿ ಸುಮಾರು 1 ಸಾವಿರ ಧಾರ್ಮಿಕ ಸ್ಥಳಗಳ ಜೀರ್ಣೋದ್ಧಾರದ ಕಾರ್ಯ ಪ್ರಗತಿಯಲ್ಲಿದೆ. ಇದರಲ್ಲಿ ಹಿಂದೂ ದೇವಸ್ಥಾನಗಳಲ್ಲದೆ, ಜೈನ ಮತ್ತು ಬೌದ್ಧ ಮಂದಿರಗಳು ಮತ್ತು ಗುರುದ್ವಾರಗಳನ್ನು ಒಳಗೊಂಡಿದೆ. ಪ್ರವಾಸಿಗರಿಗೆ ಜಿಲ್ಲೆಯ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ನೀಡುವ ಉದ್ದೇಶದಿಂದ ಜೀರ್ಣೋದ್ಧಾರದ ಪ್ರಯತ್ನಗಳು ನಡೆಯುತ್ತಿವೆ. ಜೀರ್ಣೋದ್ಧಾರ ಮಾಡುವುದರೊಂದಿಗೆ ಅವುಗಳಿಗೆ ಸಂಬಂಧಿಸಿದ ಮಾಹಿತಿ ಆನ್‌ಲೈನ್‌ನಲ್ಲಿ ಲಭ್ಯವಾಗಲಿದೆ. ಈ ಎಲ್ಲಾ ಧಾರ್ಮಿಕ ಸ್ಥಳಗಳು ‘QR ಕೋಡ್’ (‘ಕ್ವಿಕ್ ರೆಸ್ಪಾನ್ಸ್ ಕೋಡ್’ ಅಂದರೆ ಬಾರ್‌ಕೋಡ್‌ಗೆ ಹೋಲುವ ಸಂಕೇತ ಭಾಷೆ) ವ್ಯವಸ್ಥೆಯನ್ನು ಹೊಂದಿದ್ದು, ಇದರಿಂದ ಪ್ರವಾಸಿಗರು ವಿವರವಾದ ಮಾಹಿತಿಯನ್ನು ಪಡೆಯಬಹುದು. ಮೊದಲ ಹಂತದಲ್ಲಿ 300 ಧಾರ್ಮಿಕ ಸ್ಥಳಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.

1. ಪ್ರವಾಸೋದ್ಯಮ ಉಪನಿರ್ದೇಶಕ ಆರ್.ಕೆ. ರಾವತ ನೀಡಿರುವ ಮಾಹಿತಿಯನುಸಾರ, ಕಾಶಿಯ ಧಾರ್ಮಿಕ ಸ್ಥಳಗಳು ಹಾಗೂ ಅವುಗಳ ಪೌರಾಣಿಕ ಶ್ರದ್ಧೆಗೆ ಸಂಬಂಧಿಸಿದಂತೆ ಸಾಹಿತ್ಯ ಸಂಗ್ರಹಿಸಿ ಸಮೀಕ್ಷೆ ನಡೆಸಿ ಈ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳುಹಿಸಲಾಗಿದೆ. ಧಾರ್ಮಿಕ ಮತ್ತು ಪುರಾತತ್ವ ತಜ್ಞರಿಂದ ಮಾಹಿತಿ ಸಂಗ್ರಹಿಸುವುದು ಸೇರಿದಂತೆ 7 ತಿಂಗಳ ಕಾಲ ಪ್ರದೇಶದ ಸಮೀಕ್ಷೆ ನಡೆಸಲಾಯಿತು.

2. ಎರಡನೇ ಹಂತದಲ್ಲಿ ಕಾಶಿಯಲ್ಲಿರುವ ಅಂದಾಜು 700 ದೇವಸ್ಥಾನಗಳು ಮತ್ತು ಅವುಗಳ ಮಾಹಿತಿ ಸಂಗ್ರಹಿಸಿ ಅವುಗಳ ಜೀರ್ಣೋದ್ದಾರ ನಡೆಸಲಾಗುವುದು.

3. ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳ ಪ್ರಕಾರ, ಆಧ್ಯಾತ್ಮಿಕ ನಗರ ಕಾಶಿ ಪ್ರವಾಸಿಗರ ಆಕರ್ಷಣೆಯ ಕೇಂದ್ರವಾಗಿದೆ. ಕಾಶಿಗೆ ಪ್ರತಿದಿನ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ದೇವಸ್ಥಾನಗಳು ಮತ್ತು ಪರಂಪರೆಯ ಬಗ್ಗೆ ಮಾಹಿತಿಯ ಕೊರತೆಯಿಂದಾಗಿ ಪ್ರವಾಸಿಗರು ಎಲ್ಲೆಡೆ ಹೋಗುವುದಿಲ್ಲ. ಪ್ರವಾಸಿಗರಿಗೆ ಕಾಶಿಯ ಪುರಾತನ ಪೌರಾಣಿಕ ವೈಭವದ ಅರಿವಾಗಬೇಕು ಮತ್ತು ಜನರಿಗೆ ಸಾಧ್ಯವಾದಷ್ಟು ಅಧಿಕ ಪ್ರವಾಸಿ ಸ್ಥಳಗಳಿಗೆ ಹೋಗಲು ಸಾಧ್ಯವಾಗಬೇಕು. ಈ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ.

4. ಪ್ರವಾಸೋದ್ಯಮ ಇಲಾಖೆ ಧಾರ್ಮಿಕ ಸ್ಥಳಗಳ ಹತ್ತಿರ ಸ್ಟೀಲನ ಫಲಕವನ್ನು ಹಚ್ಚಲಾಗಿದೆ. ಅದರ ಮೇಲೆ ಆ ಸ್ಥಳದ ಸಂಕ್ಷಿಪ್ತ ಇತಿಹಾಸ ಇರಲಿದೆ. ಅದರ ಮೇಲೆ ಒಂದು ‘ಕ್ಯೂಆರ್ ಕೋಡ್’ ಇರಲಿದೆ. ಅದರಲ್ಲಿ ವಿವರವಾದ ಇತಿಹಾಸದ ಮಾಹಿತಿಯಿರಲಿದೆ.

ಸಂಪಾದಕೀಯ ನಿಲುವು

ಕಾಶಿ ಭಾರತದ ಆಧ್ಯಾತ್ಮಿಕ ಕ್ಷೇತ್ರವಾಗಿರುವುದರಿಂದ ಅದು ಆಧ್ಯಾತ್ಮಿಕ ಮಟ್ಟದಲ್ಲಿಯೂ ಅಭಿವೃದ್ಧಿ ಹೊಂದಬೇಕು. ಹಿಂದೂಗಳಿಗಾಗಿ ಕಾಶಿಯಲ್ಲಿ ಬೃಹತ್ ಧರ್ಮ ಶಿಕ್ಷಣ ಕೇಂದ್ರ ನಿರ್ಮಿಸಬೇಕು !