ಅಯೋಧ್ಯೆ – ಅಯೋಧ್ಯೆಯಲ್ಲಿ ರಾಮ ಮಂದಿರದ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗಿದೆ. ದೇವಸ್ಥಾನದ ಅರ್ಚಕರ ಉಡುಗೆ ಬದಲಾಗಿದೆ. ಅರ್ಚಕರ ನಿಲುವಂಗಿಯ ಬಣ್ಣ ಈಗ ಕೇಸರಿಯಿಂದ ಹಳದಿ ಬಣ್ಣಕ್ಕೆ ಬದಲಾಗಿದೆ. ಇದಲ್ಲದೇ ದೇವಸ್ಥಾನದ ಒಳಗೆ ಮೊಬೈಲ್ ಕೊಂಡೊಯ್ಯುವುದನ್ನು ನಿಷೇಧಿಸಲಾಗಿದೆ.
ರಾಮಮಂದಿರ ಟ್ರಸ್ಟ್ ಬೋರ್ಡ್‌ನ ಅಧಿಕಾರಿಗಳ ಪ್ರಕಾರ, ರಾಮಲಲ್ಲಾನ ದೇವಾಲಯದ ಗರ್ಭಗುಡಿಯಲ್ಲಿ ಅರ್ಚಕರು ಇದುವರೆಗೆ ಕೇಸರಿ ವಸ್ತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಅವರು ಕೇಸರಿ ಪೇಟ, ಕೇಸರಿ ಕುರ್ತಾ ಮತ್ತು ಪೀತಾಂಬರವನ್ನು ಧರಿಸಿದ್ದರು; ಆದರೆ ಈಗ ಅರ್ಚಕರು ಹಳದಿ ಕುರ್ತಾ, ಹಳದಿ ಪೇಟ, ಹಳದಿ ಪೀತಾಂಬರ ಧರಿಸುತ್ತಿದ್ದಾರೆ. ಜುಲೈ 1 ರಿಂದ ಈ ನಿಯಮವನ್ನು ಜಾರಿಗೆ ತರಲಾಗಿದೆ. ಅರ್ಚಕರಿಗೆ ಹಳದಿ ಪೇಟ ಧರಿಸುವುದರ ತರಬೇತಿ ನೀಡಲಾಗಿದೆ. ರಾಮಮಂದಿರದಲ್ಲಿ ಪುರೋಹಿತರ ತಂಡದಲ್ಲಿ ಮುಖ್ಯ ಅರ್ಚಕ ಸಹಿತ ನಾಲ್ವರು ಸಹಾಯಕ ಅರ್ಚಕರನ್ನು ಒಳಗೊಂಡಿದ್ದು, ಒಬ್ಬ ಪ್ರಧಾನ ಅರ್ಚಕ ಸಹಿತ 4 ಪ್ರಶಿಕ್ಷಣಾರ್ಥಿಗಳನ್ನು ಒಳಗೊಂಡಿರುತ್ತದೆ. ಈ ಪುರೋಹಿತರ ಪ್ರತಿ ತಂಡವು ಬೆಳಿಗ್ಗೆ 3.30 ರಿಂದ ರಾತ್ರಿ 11 ರವರೆಗೆ ಐದು ಗಂಟೆಗಳ ಪಾಳಿಯಲ್ಲಿ ಸೇವೆ ಸಲ್ಲಿಸಲಿದೆ.