ನವ ದೆಹಲಿ – ಸಂಸತ್ತಿನ ಕಲಾಪದ ಆರನೇ ದಿನದಂದು, ಅಂದರೆ ಜುಲೈ ೧ ರಂದು ಕಾಂಗ್ರೆಸ್ ನ ಸಂಸದ ರಾಹುಲ್ ಗಾಂಧಿ ಇವರು ಲೊಕಸಭೆಯ ವಿರೋಧ ಪಕ್ಷದ ನಾಯಕರಾಗಿ ಮೊದಲ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಅವರು ಹಿಂದೂಗಳನ್ನು ‘ಹಿಂಸಾತ್ಮಕ‘ ಎಂದು ಹೇಳಿದ್ದರು. ಹಾಗೆಯೇ ಅವರು ಸರಕಾರದ ಮೇಲೆ ಅಲ್ಪಸಂಖ್ಯಾತರು ‘ನೀಟ್‘ ಪರೀಕ್ಷೆ ಮತ್ತು ಅಗ್ನಿಪಥ್ ಯೋಜನೆಗಳ ಮೇಲೆ ಟೀಕಿಸಿದರು. ಲೊಕಸಭೆಯ ಸ್ಪೀಕರ್ ಅವರ ಆದೇಶದಂತೆ ರಾಹುಲ್ ಅವರ ಹೇಳಿಕೆಯ ಕೆಲವು ಭಾಗಗಳನ್ನು ಸಂಸತ್ತಿನ ಕಡತದಿಂದ ತೆಗೆಯಲಾಗಿದೆ. ಈ ವಿಷಯದ ಬಗ್ಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ ನೀಡುತ್ತಾ, ‘ನನಗೆ ಏನು ಹೇಳುವುದಿತ್ತೋ, ಅದನ್ನು ನಾನು ಹೇಳಿರುವೆ. ಅದೇ ಸತ್ಯ ಇದೆ. ನಿಮಗೆ ಏನು ತೆಗೆಯ ಬೇಕೋ, ಅದನ್ನು ತೆಗೆದು ಹಾಕಿ. ಸತ್ಯ ಯಾವಾಗಲೂ ಸತ್ಯವೇ ಇರುತ್ತದೆ’, ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಗೃಹಸಚಿವ ಅಮಿತ್ ಷಾ ಸೇರಿದಂತೆ ಬಿಜೆಪಿಯ ಅನೇಕ ನಾಯಕರು ರಾಹುಲ್ ಗಾಂಧಿಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.