|
ನವದೆಹಲಿ – ತೃಣಮೂಲ ಕಾಂಗ್ರೆಸ್ ಸಂಸದ ಸಾಕೇತ್ ಗೋಖಲೆ ಅವರಿಗೆ ದೆಹಲಿ ಉಚ್ಚ ನ್ಯಾಯಾಲಯವು ಮಾನನಷ್ಟ ಮೊಕದ್ದಮೆಯಲ್ಲಿ ಕೇಂದ್ರ ಸಚಿವ ಹರ್ದೀಪ ಸಿಂಗ ಪುರಿ ಅವರ ಪತ್ನಿ ಲಕ್ಷ್ಮಿ ಪುರಿ (ವಿಶ್ವಸಂಸ್ಥೆಯ ಮಾಜಿ ಸಹಾಯಕ ಪ್ರಧಾನ ಕಾರ್ಯದರ್ಶಿ) ಅವರಿಗೆ 50 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶಿಸಿದೆ. ಇದರೊಂದಿಗೆ ಒಂದು ಆಂಗ್ಲ ಪತ್ರಿಕೆಯಲ್ಲಿ ಕ್ಷಮಾಪಣೆ ಪತ್ರ ಮುದ್ರಿಸಿ ಅದನ್ನು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರಸಾರ ಮಾಡುವಂತೆ ಮತ್ತು ಈ ಕ್ಷಮಾಯಾಚನೆ ಪತ್ರವನ್ನು ಮುಂದಿನ 6 ತಿಂಗಳವರೆಗೆ ಪ್ರಸಾರ ಮಾಡುವಂತೆ ಆದೇಶಿಸಲಾಗಿದೆ.
ಸಾಕೇತ್ ಗೋಖಲೆ ಅವರು 13 ಮತ್ತು 23 ಜೂನ್ 2021 ರಂದು ಲಕ್ಷ್ಮಿ ಪುರಿ ಮತ್ತು ಅವರ ಪತಿ ಹರ್ದೀಪ್ ಸಿಂಗ್ ಪುರಿ ವಿರುದ್ಧ ಸುಳ್ಳು ಮತ್ತು ಮಾನಹಾನಿಯ ಆರೋಪಗಳನ್ನು ಮಾಡಿದ್ದರು. ಹಾಗೆಯೇ ‘ಅವರು ಬ್ಲಾಕ್ ಮನಿಯಿಂದ ಜಿನೀವಾ (ಸ್ವಿಟ್ಜರ್ಲೆಂಡ್)ನಲ್ಲಿ ಮನೆ ಖರೀದಿಸಿದ್ದಾರೆ’, ಎಂದೂ ಆರೋಪ ಮಾಡಿದ್ದರು.