ವಿವಾಹೇತರ ಸಂಬಂಧ ಹೊಂದಿದ್ದ ದಂಪತಿಗೆ ತೃಣಮೂಲ ಕಾಂಗ್ರೆಸ್ ಪದಾಧಿಕಾರಿಯಿಂದ ನಡು ರಸ್ತೆಯಲ್ಲಿ ಕೋಲಿನಿಂದ ಅಮಾನುಷ ರೀತಿಯಲ್ಲಿ ಹಲ್ಲೆ!

ಮತಾಂಧ ಮುಸ್ಲಿಮರಿಂದ ಶರಿಯತ್ ಕಾನೂನಿನ ಪ್ರಕಾರ ಕ್ರಮ !

ಕೋಲಕಾತಾ (ಬಂಗಾಳ) – ಬಂಗಾಳದ ದಕ್ಷಿಣ ದಿನಾಜ್‌ಪುರದ ಚೋಪ್ರಾ ಬ್ಲಾಕ್ ಪ್ರದೇಶದಲ್ಲಿ ಓರ್ವ ಮುಸ್ಲಿಂ ವಿವಾಹಿತ ಪುರುಷ ಮತ್ತು ಮಹಿಳೆಯ ಮೇಲೆ ನಡು ರಸ್ತೆಯಲ್ಲಿ ಹಗಲಿನಲ್ಲೇ ಕೋಲಿನಿಂದ ಹಲ್ಲೆ ನಡೆಸಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ಬಳಿಕ ವಿವಾದ ನಿರ್ಮಾಣವಾಗಿದೆ. ವಿವಾಹೇತರ ಸಂಬಂಧದ ಕಾರಣದಿಂದ ದಂಪತಿಗಳ ಮೇಲೆ ಹಲ್ಲೆ ನಡೆಸಲಾಗಿದೆಯೆಂದು ಹೇಳಲಾಗುತ್ತಿದೆ. ಹಲ್ಲೆ ನಡೆಸಿದ್ದ ತಾಜಮೂಲ ಇಸ್ಲಾಮ್ ಉರ್ಫ ಜೆಸಿಬಿ ಇವನನ್ನು ಬಂಧಿಸಲಾಗಿದೆ. ತಾಜಮೂಲ ಇಸ್ಲಾಮ ತೃಣಮೂಲ ಕಾಂಗ್ರೆಸ್ ಸ್ಥಳೀಯ ಪದಾಧಿಕಾರಿಯಾಗಿದ್ದಾನೆಂದು ಹೇಳಲಾಗಿದೆ. ಈ ಘಟನೆಯ ವೇಳೆ ಅಲ್ಲಿ ದೊಡ್ಡ ಗುಂಪು ಕೂಡಿತ್ತು. ಅದರಲ್ಲಿ ಒಂದಿಬ್ಬರು ತಾಜಮೂಲನನ್ನು ತಡೆಯಲು ಪ್ರಯತ್ನಿಸಿದ್ದರು; ಆದರೆ ಅವನು ಥಳಿಸುವುದನ್ನು ನಿಲ್ಲಿಸಲಿಲ್ಲ. ಈ ಘಟನೆಯನ್ನು ಖಂಡಿಸಿದ ಬಿಜೆಪಿ, ಕಮ್ಯುನಿಸ್ಟ ಮತ್ತು ಕಾಂಗ್ರೆಸ್ ಪಕ್ಷವು ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದೆ. ವಿಚಿತ್ರವೆಂದರೆ, ಥಳಿತಕ್ಕೊಳಗಾದ ಈ ದಂಪತಿಗಳು ಹಲ್ಲೆಯ 3 ದಿನಗಳ ಬಳಿಕವೂ ದೂರು ದಾಖಲಿಸಿರಲಿಲ್ಲ. ಈ ಘಟನೆಯ ವೀಡಿಯೊ ಪ್ರಸಾರವಾದ ನಂತರ, ವಿವಾದ ನಿರ್ಮಾಣವಾಗಿದ್ದರಿಂದ ಪೊಲೀಸರು ಅಪರಾಧ ದಾಖಲಿಸಿ, ಇಸ್ಲಾಂನನ್ನು ಬಂಧಿಸಿದರು.

ಬಿಜೆಪಿಯಿಂದ ಟೀಕೆ

ಕೇಂದ್ರದ ರಾಜ್ಯ ಸಚಿವ ಹಾಗೂ ಬಿಜೆಪಿ ಪ್ರದೇಶಾಧ್ಯಕ್ಷ ಸುಕಾಂತ ಮುಜುಂದಾರ ಮಾತನಾಡಿ, ಬಂಗಾಳದಲ್ಲಿ ತಾಲಿಬಾನ್ ಆಡಳಿತ ಶುರುವಾಗಿದೆ ಎಂದು ಹೇಳಿದ್ದಾರೆ. ಥಳಿಸಿದ ವ್ಯಕ್ತಿ ತೃಣಮೂಲ ಕಾಂಗ್ರೆಸ್ ಶಾಸಕನ ಬೆಂಬಲಿಗನಾಗಿದ್ದಾನೆ. ಈ ಪ್ರಕರಣದಲ್ಲಿ ಸರ್ಕಾರ ಮತ್ತು ಪೊಲೀಸರ ಯಾವುದೇ ಪ್ರಯತ್ನ ಕಂಡುಬರುತ್ತಿಲ್ಲ. ಮುಜುಂದಾರ ಅವರು, “ಶಾಸಕ ರಹಮಾನ್, ಇಸ್ಲಾಮಿಕ್ ರಾಷ್ಟ್ರದ ಯಾವುದೋ ಕಾನೂನಿನ ಪ್ರಕಾರ ಈ ರೀತಿ ಶಿಕ್ಷೆ ನೀಡುವ ಅವಕಾಶಗಳಿವೆ’’ ಎಂದು ಹೇಳಿದ್ದು ಗಂಭೀರ ಚಿಂತೆಯ ವಿಷಯವಾಗಿದೆ ಎಂದು ಟೀಕಿಸಿದರು.

ತಾಜ್‌ಮೂಲ್ ಇವನ ನಿಲುವಿನ ಬಗ್ಗೆ ತನಿಖೆ ಮಾಡುತ್ತೇವೆ! – ತೃಣಮೂಲ ಕಾಂಗ್ರೆಸ್

ತೃಣಮೂಲ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷ ಕನ್ಹಯ್ಯಾಲಾಲ್ ಅಗರ್‌ವಾಲ್ ಅವರು ಪಕ್ಷದ ಮೇಲಾಗುತ್ತಿರುವ ಟೀಕೆಯ ಬಗ್ಗೆ ಮಾತನಾಡಿ ಥಳಿತಕ್ಕೊಳಗಾದ ಮಹಿಳೆ ಮತ್ತು ಪುರುಷರ ನಡುವೆ ವಿವಾಹೇತರ ಸಂಬಂಧವಿತ್ತು. ಇದು ಆ ಪ್ರದೇಶದ ಜನರಿಗೆ ಒಪ್ಪಿಗೆಯಿರಲಿಲ್ಲ. ಆದ್ದರಿಂದ ಅಲ್ಲಿ ಸಭೆಯನ್ನು ನಡೆಸಲಾಗಿತ್ತು; ಆದರೆ ತಾಜಮೂಲನು ಮಾಡಿದ್ದನ್ನು ನಾವು ಬೆಂಬಲಿಸುವುದಿಲ್ಲ. ನಾವು ಅವನ ನಿಲುವಿನ ಬಗ್ಗೆ ತನಿಖೆ ನಡೆಸಲಿದ್ದೇವೆ ಎಂದು ಹೇಳಿದ್ದಾರೆ.

ಇಂತಹ ಕೃತ್ಯಗಳ ವಿರುದ್ಧ ಇಸ್ಲಾಮಿಕ್ ರಾಷ್ಟ್ರದಲ್ಲಿ ಕಾನೂನಿದೆ ! – ತೃಣಮೂಲ ಕಾಂಗ್ರೆಸ್ ಶಾಸಕ ಹಮೀದುಲ್ ರೆಹಮಾನ್

ತೃಣಮೂಲ ಕಾಂಗ್ರೆಸ್ ಶಾಸಕ ಹಮೀದುಲ್ ರಹಮಾನ್ ಅವರು ಮಾತನಾಡಿ, ವಿಡಿಯೋದಲ್ಲಿ ಕಾಣುವಂತೆ ಆರೋಪಿಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ಅವನ ಬಳಿ ಪಕ್ಷದ ಯಾವುದೇ ಹುದ್ದೆಯಿಲ್ಲ. ಚೋಪ್ರಾದಲ್ಲಿರುವ ಪ್ರತಿಯೊಬ್ಬನೂ ತೃಣಮೂಲ ಕಾಂಗ್ರೆಸ್ಸಿನ ಕಾರ್ಯಕರ್ತರೇ ಆಗಿದ್ದಾರೆ. ನಾವು ಈ ಘಟನೆಯನ್ನು ನಿಷೇಧಿಸುತ್ತೇವೆ; ಆದರೆ ಆ ಮಹಿಳೆಯೂ ತಪ್ಪು ಮಾಡಿದ್ದಾಳೆ. ಅವಳು ತನ್ನ ಗಂಡ, ಮಗ ಮತ್ತು ಮಗಳನ್ನು ಬಿಟ್ಟು ನಡೆತೆಗೆಟ್ಟವಳಾಗಿದ್ದಾಳೆ. ಇಂತಹ ಕೃತ್ಯವಿರುದ್ಧ ಮುಸಲ್ಮಾನ ರಾಷ್ಟ್ರದಲ್ಲಿ ಕೆಲವು ನಿಯಮ ಮತ್ತು ನ್ಯಾಯ ಪದ್ಧತಿಯಿದೆ. ಆದರೂ ಇದು ಸ್ವಲ್ಪ ಜಾಸ್ತಿಯೇ ಆಗಿದ್ದು ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಪಷ್ಟನೆ ನೀಡಿದರು.

ತೃಣಮೂಲದ ಗೂಂಡಾಗಳು ಸ್ವತಃ ವಿಚಾರಣೆ ನಡೆಸಿ ಶಿಕ್ಷೆ ನೀಡುತ್ತಿದ್ದಾರೆ ! –ಕಮ್ಯುನಿಸ್ಟ್ ಪಕ್ಷ

ಕಮ್ಯುನಿಸ್ಟ್ ಪಕ್ಷದ ರಾಜ್ಯ ಸಚಿವ ಮತ್ತು ಮಾಜಿ ಸಂಸದ ಮಹಮ್ಮದ್ ಸಲೀಂ ಅವರು ಈ ವಿಡಿಯೋವನ್ನು ಶೇರ್ ಮಾಡಿ, ಇದು ಕಾಂಗರೂ ನ್ಯಾಯಾಲಯಕ್ಕಿಂತಲೂ (ನ್ಯಾಯಾಲಯವನ್ನು ಟೀಕಿಸಲು ಬಳಸುವ ಪದ) ಕೆಟ್ಟದ್ದಾಗಿದೆ. ಜೆಸಿಬಿ ಎಂದು ಕರೆಯಲ್ಪಡುವ ತೃಣಮೂಲ ಕಾಂಗ್ರೆಸ್ ಗೂಂಡಾ ಸ್ವತಃ ಅಲ್ಲಿನ ಪ್ರಕರಣವನ್ನುಆಲಿಸುತ್ತಾನೆ ಮತ್ತು ಶಿಕ್ಷೆ ನೀಡುತ್ತಾನೆ. ವಿಡಿಯೋ ಚಿತ್ರೀಕರಣ ಮಾಡಿದ ವ್ಯಕ್ತಿಯನ್ನು ಈಗ ಮನೆಯಿಂದ ಹೊರಗೆ ಹಾಕಲಾಗಿದೆ. ಚೋಪ್ರಾದಲ್ಲಿ ಅಲ್ಲಿನ ಪೊಲೀಸರ ರಕ್ಷಣೆಯಲ್ಲಿ ತೃಣಮೂಲದ ಇಂತಹ ಆಡಳಿತವಿದೆ. ತಾಜಮೂಲ ಸ್ಥಳೀಯ ಎಡಪಕ್ಷದ ನಾಯಕ ಮನ್ಸೂರ್ ಆಲಂ ಅವರ ಹತ್ಯೆಯ ಪ್ರಕರಣದ ಆರೋಪಿ ಕೂಡ ಆಗಿದ್ದಾನೆ.

ಸಂಪಾದಕೀಯ ನಿಲುವು

ಬಂಗಾಳದಲ್ಲಿ ಶರಿಯತ್ ಜಾರಿಯಾಗಲಿದೆ, ಎನ್ನುವುದು ಇದರಿಂದ ಸ್ಪಷ್ಟವಾಗುತ್ತದೆ! ಹಿಂದೂಗಳು ಈ ಬಗ್ಗೆ ಗಂಭೀರತೆಯಿಂದಿದ್ದು ಅಲ್ಲಿಯ ಹಿಂದೂಗಳ ರಕ್ಷಣೆಗೆ ಸಂಘಟಿತರಾಗಿ ಕ್ರಿಯಾಶೀಲರಾಗುವುದು ಆವಶ್ಯಕವಾಗಿದೆ.