ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ೮೨ ನೇ ಜನ್ಮೋತ್ಸವದ ನಿಮಿತ್ತ ಕೋಟಿ ಕೋಟಿ ನಮನಗಳು !
ಪ್ರತಿ ೧ ಸಾವಿರ ವರ್ಷಗಳಲ್ಲಿ ಭಗವಾನ್ ಶ್ರೀವಿಷ್ಣುವು ಪೃಥ್ವಿಯ ಮೇಲೆ ಅವತರಿಸುವುದು
ಪ್ರತಿ ೧ ಸಾವಿರ ವರ್ಷಗಳಲ್ಲಿ ಭಗವಾನ್ ಶ್ರೀವಿಷ್ಣುವು ಪೃಥ್ವಿಯ ಮೇಲೆ ಅವತರಿಸುತ್ತಾನೆ. ಆಗ ಪೃಥ್ವಿಯ ಮೇಲಿರುವ ಜನರಿಗೆ ಅವರ ಬಗ್ಗೆ ತಿಳಿಯಲೇ ಬೇಕೆಂದಿಲ್ಲ. ಕಳೆದ ೧ ಸಾವಿರ ವರ್ಷಗಳ ನಂತರ ಭಗವಂತನು ‘ಗುರುದೇವ ಡಾ. ಆಠವಲೆ (ಪರಾತ್ಪರ ಗುರು ಡಾ. ಆಠವಲೆ) ಇವರ ರೂಪದಲ್ಲಿ ಜನ್ಮ ತಾಳಿದ್ದಾನೆ. ಗುರುದೇವರ ಜನ್ಮವು ‘ಅಯೋನಿ ಸಂಭವ ಮತ್ತು ಪ್ರಕಾಶರೂಪದಲ್ಲಿ ಆಯಿತು. ಸದ್ಯ ವೈಕುಂಠದಲ್ಲಿನ ವಿಷ್ಣು ಸಂಪೂರ್ಣ ಪೃಥ್ವಿಯೆಡೆಗೆ ಗುರುದೇವರ ಎರಡು ಕಣ್ಣುಗಳಿಂದ ನೋಡುತ್ತಿದ್ದಾರೆ.
(ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರ. ೧೪೬ (೧.೬.೨೦೨೦))
ಮಹಾವಿಷ್ಣು ಎಂದರೆ ಪರಾತ್ಪರ ಗುರು ಡಾಕ್ಟರರೇ ಎಂದು ಸಾಧಕರಿಗೆ ಮುಂದೆ ಅನುಭೂತಿ ಬರುವುದು
‘ಪ.ಪೂ. ಡಾಕ್ಟರರು ಸ್ವತಃ ಮಹಾವಿಷ್ಣುವೇ ಆಗಿದ್ದಾರೆ. ಅವರ ದೇಹವಲ್ಲ ಅವರಲ್ಲಿರುವ ಸೂಕ್ಷ್ಮ ಆತ್ಮ ಎಂದರೆ ಮಹಾವಿಷ್ಣು ಆಗಿದೆ. ಪಂಚಮಹಾಭೂತಗಳಿಂದ ಆಗಿರುವ ದೇಹದಲ್ಲಿ ಮಹಾವಿಷ್ಣುರೂಪಿ ತತ್ತ್ವ ಇರುವುದರಿಂದ ತೊಂದರೆ ಆಗುವುದು ಸಹಜ. ದೀಪದಲ್ಲಿನ ಸ್ವಯಂಪ್ರಕಾಶಿ ಜ್ಯೋತಿ ಎಂದರೆ ಮಹಾವಿಷ್ಣು, ಎಂದರೆ ಪ.ಪೂ. ಡಾಕ್ಟರ ಆಗಿದ್ದಾರೆ. ಅವರು ಯಾರು ಎಂಬ ಅನುಭೂತಿ ಸಾಧಕರಿಗೆ ಮುಂದೆ ಬರುವುದು. ಸಾಕ್ಷಾತ್ ಈಶ್ವರನೇ ಗುರುಗಳ ರೂಪದಲ್ಲಿ ಪೃಥ್ವಿಯ ಮೇಲೆ ಬಂದಿದ್ದಾರೆ. ಗುರುಗಳು ಈಶ್ವರನ ರೂಪವೇ ಆಗಿದ್ದಾರೆ ಎಂದು ಭಾವವಿದ್ದರೆ ಎಲ್ಲವೂ ಸಿಗುವುದು. ಅವರ ‘ಜಯಂತ ನಾಮದಲ್ಲಿಯೇ ಎಲ್ಲವೂ ಇದೆ. ಶಿಷ್ಯನ ಪ್ರತಿಯೊಂದು ತೊಂದರೆಗಳನ್ನು ದೂರ ಮಾಡುವವರು ನಮ್ಮ ಗುರುಗಳೇ ಆಗಿದ್ದಾರೆ. ಸನಾತನ ಸಾಧಕರು ಪ್ರಾರ್ಥನೆ ಮಾಡಿದಾಕ್ಷಣ ಗುರುಗಳು ಬರುತ್ತಾರೆ. ಗುರು ಎಂದರೆ ಪ್ರತ್ಯಕ್ಷ ಈಶ್ವರನೇ ಆಗಿದ್ದಾರೆ. ‘ಇದು ಭೂಲೋಕವಲ್ಲ ಈಶ್ವರನ ಸತ್ಯಲೋಕವಾಗಿದೆ, ಎಂಬ ಭಾವವನ್ನು ಸಾಧಕರು ಇಟ್ಟುಕೊಳ್ಳಬೇಕು. ಸಾಧಕರ ಕ್ಷಣಮಾತ್ರದ ಪ್ರಾರ್ಥನೆಯಿಂದ ಗುರುಕೃಪೆ ಅವರತ್ತ ಧಾವಿಸಿ ಬರುತ್ತದೆ. (ಸಪ್ತರ್ಷಿ ಜೀವನಾಡಿಪಟ್ಟಿ ವಾಚನ ಕ್ರಮಾಂಕ ೯೨, ೨೩.೮.೨೦೧೬, ಚೆನ್ನೈ, ತಮಿಳುನಾಡು.)