ಈ ವಿದ್ಯಾಪೀಠದಲ್ಲಿ ಒಂದೇ ಸಮಯದಲ್ಲಿ ಜಗತ್ತಿನಾದ್ಯಂತದ ೧೦ ಸಾವಿರ ವಿದ್ಯಾರ್ಥಿಗಳಿಗೆ ‘೧ ಸಾವಿರದ ೫೦೦ ಶಿಕ್ಷಕರು ಕಲಿಸುತ್ತಿದ್ದರು, ಅದರಲ್ಲಿ ವಿದ್ಯಾರ್ಥಿಗಳ ನಿವಾಸ ಮತ್ತು ಭೋಜನ ವ್ಯವಸ್ಥೆಯು ಉಚಿತವಾಗಿತ್ತು, ಯಾವ ವಿದ್ಯಾಪೀಠದಲ್ಲಿ ಧರ್ಮ, ತತ್ತ್ವಜ್ಞಾನ, ತರ್ಕಶಾಸ್ತ್ರ, ಚಿತ್ರಕಲೆ, ವಾಸ್ತುಶಾಸ್ತ್ರ, ಧಾತುಶಾಸ್ತ್ರ, ಅರ್ಥಶಾಸ್ತ್ರ ಸಹಿತ ಆಯುರ್ವೇದದ ಅತ್ಯಂತ ಆಳವಾದ ಜ್ಞಾನವನ್ನು ನೀಡಲಾಗುತ್ತಿತ್ತೊ, ಅಂತಹ ವಿದ್ಯಾಪೀಠವು ಪರಕೀಯ ದಾಳಿಕೋರ ಅಲ್ಲಾಉದ್ದೀನ ಖಿಲ್ಜಿಯ ಆಕ್ರಮಣಕ್ಕೆ ತುತ್ತಾಗಿ ಲುಪ್ತವಾಗಿತ್ತು. ಈ ನಾಲಂದಾ ವಿದ್ಯಾಪೀಠವನ್ನು ೮೨೫ ವರ್ಷಗಳ ನಂತರ ಮತ್ತೊಮ್ಮೆ ಪ್ರಧಾನಿ ನರೇಂದ್ರ ಮೋದಿಯವರ ಹಸ್ತಗಳಿಂದ ಜೂನ್ ೧೯ ರಂದು ಪ್ರಾರಂಭಿಸಲಾಯಿತು. ವಾಸ್ತವದಲ್ಲಿ, ಪ್ರಾಚೀನ ಕಾಲದಲ್ಲಿ ಅಖಂಡ ಭಾರತದ ಮೂಲೆ ಮೂಲೆಗಳಲ್ಲಿ ಶಿಕ್ಷಣದ ಅಸಂಖ್ಯ ಕೇಂದ್ರಗಳು ನೆಲೆಸಿದ್ದವು. ಇಷ್ಟು ಮಾತ್ರವಲ್ಲ ಎಷ್ಟೋ ಸಣ್ಣ-ಸಣ್ಣ ವಿದ್ಯಾಕೇಂದ್ರ ಗಳಿದ್ದವು, ಅವುಗಳ ಗಣನೆಯೆ ಇರಲಿಲ್ಲ. ಇವುಗಳಲ್ಲಿನ ಹೆಚ್ಚಿನ ವಿದ್ಯಾಕೇಂದ್ರಗಳನ್ನು ಅಸುರೀ ವೃತ್ತಿಯ ಅಂದಿನ ಮುಸಲ್ಮಾನ ಆಕ್ರಮಣಕಾರರು ಧ್ವಂಸ ಮಾಡಿದರು. ಜ್ಞಾನಕೇಂದ್ರಗಳ ಈ ಅಪಾರ ಹಾನಿಯ ದುಷ್ಪರಿಣಾಮವನ್ನು ಕೇವಲ ಭಾರತ ಮಾತ್ರವಲ್ಲ, ಇಡೀ ಜಗತ್ತು ಇಂದು ಹೆಜ್ಜೆ ಹೆಜ್ಜೆಗೂ ಅನುಭವಿಸುತ್ತಿದೆ. ಹೇಗೆ ಪರಕೀಯ ಆಕ್ರಮಣಕಾರರ ಗುರುತುಗಳನ್ನು ಅಳಿಸಿ ಅಯೋಧ್ಯೆಯಲ್ಲಿ ಭವ್ಯ ಶ್ರೀರಾಮಮಂದಿರ ಎದ್ದು ನಿಂತಿತೊ, ಅದೇ ರೀತಿ ಭಾರತೀಯ ಸಂಸ್ಕೃತಿಯ ಒಂದು ರತ್ನವಾಗಿರುವ ನಾಲಂದಾ ವಿದ್ಯಾಪೀಠ ಆರಂಭವಾಗುವುದೆಂದರೆ ಇದು ಗೌರವಶಾಲಿ ಇತಿಹಾಸವನ್ನು ಸುವರ್ಣಾಕ್ಷರಗಳಲ್ಲಿ ಬರೆಯುವ ಕ್ಷಣವಾಗಿದೆ !
ನಾಲಂದಾದ ದೈದಿಪ್ಯಮಾನ ಇತಿಹಾಸ !
ಇಂದು ವಿದೇಶದಲ್ಲಿ ಆಕ್ಸ್‌ಫೋರ್ಡ್ ಹಾಗೂ ಕೇಂಬ್ರಿಡ್ಜ್ ವಿದ್ಯಾಪೀಠಗಳನ್ನು ಸರ್ವೋತ್ಕೃಷ್ಟವೆಂದು ಹೇಳಲಾಗುತ್ತದೆ; ಆದರೆ ಕೆಲವು ಶತಮಾನಗಳ ಹಿಂದಿನ ಚಿತ್ರಣ ಬೇರೆಯೇ ಆಗಿತ್ತು. ಭಾರತ ದಲ್ಲಿನ ಇಂತಹ ಅನೇಕ ವಿದ್ಯಾಪೀಠಗಳು ಜಗತ್ಪ್ರಸಿದ್ಧವಾಗಿದ್ದವು. ಅವುಗಳಲ್ಲಿ ನಾಲಂದಾ ವಿದ್ಯಾಪೀಠವು ಒಂದಾಗಿತ್ತು ! ೪ ನೇ ಶತಮಾನದ ನಡುವೆ ಮಗಧದ ಮಹಾರಾಜ ಶಕಾದಿತ್ಯ ಇವರು ತಮ್ಮ ಅವಧಿಯಲ್ಲಿ ನಾಲಂದಾದಲ್ಲಿನ ಸ್ಥಳವನ್ನು ವಿದ್ಯಾಪೀಠದ ರೂಪದಲ್ಲಿ ವಿಕಾಸಗೊಳಿಸಿದರು. ಈ ವಿದ್ಯಾಪೀಠದ ಪ್ರಾರಂಭದ ಹೆಸರು ‘ನಲವಿಹಾರ’ ಆಗಿತ್ತು. ನಾಲಂದಾ ವಿದ್ಯಾಪೀಠವು ಅನೇಕ ಕಟ್ಟಡಗಳ ದೊಡ್ಡ ಒಂದು ಸಮೂಹ ಆಗಿತ್ತು. ‘ರತ್ನಸಾಗರ’, ‘ರತ್ನೋದಧೀ’ ‘ರತ್ನರಂಜಕ’ ಇತ್ಯಾದಿ ಹೆಸರಿನ ಕಟ್ಟಡಗಳು ಇಲ್ಲಿದ್ದವು ಹಾಗೂ ‘ಮಾನ ಮಂದಿರ’ ಇದು ಎಲ್ಲಕ್ಕಿಂತ ಎತ್ತರದ ಆಡಳಿತದ ಭವನವಾಗಿತ್ತು. ಈ ವಿದ್ಯಾಪೀಠದಲ್ಲಿ ಪ್ರವೇಶಕ್ಕಾಗಿ ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತಿತ್ತು, ಹೀಗಿತ್ತು ಅದರ ಖ್ಯಾತಿ. ಇಲ್ಲಿ ಅನೇಕ ದುರ್ಲಭ ಹಾಗೂ ಅಪರೂಪದ ಗ್ರಂಥಗಳ ದೊಡ್ಡ ಸಂಗ್ರಹವಿತ್ತು. ಇಲ್ಲಿನ ಗ್ರಂಥಾಲಯವು ೯ ಮಾಳಿಗೆಯದ್ದಾಗಿತ್ತು ಹಾಗೂ ಅದರಲ್ಲಿ ೯ ಲಕ್ಷಕ್ಕಿಂತಲೂ ಹೆಚ್ಚು ಗ್ರಂಥಗಳಿದ್ದವು. ಅನೇಕ ವಿದೇಶೀ ಯಾತ್ರಿಕರು ಈ ವಿದ್ಯಾಪೀಠವನ್ನು ಬಾಯಿ ತುಂಬ ಹೊಗಳಿದ್ದಾರೆ. ಯಾವ ವಿದ್ಯಾಪೀಠದಲ್ಲಿನ ನಿಪುಣ ವೈದ್ಯ ಆಚಾರ್ಯ ರಾಹುಲ ಇವರು ತುರ್ಕಿ ಶಾಸಕ ಇಖ್ತಿಯಾರುದ್ದೀನ ಮಹಮ್ಮದ ಬಿನ್ ಬಖ್ತಿಯಾರ ಖಿಲ್ಜಿಯ ಗಂಭೀರ ಕಾಯಿಲೆಯನ್ನು ಗುಣಪಡಿಸಿದುದರ ಬದಲಾಗಿ ಅಲ್ಲಾಉದ್ದೀನ ಖಿಲ್ಜೀ ೧೧೯೯ ರಲ್ಲಿ ನಾಲಂದಾ ವಿದ್ಯಾಪೀಠವನ್ನು ಭಸ್ಮ ಮಾಡಿ ಋಣತೀರಿಸಿದನು. ಈ ವಿದ್ಯಾಪೀಠದಲ್ಲಿ ಎಷ್ಟು ಗ್ರಂಥಗಳಿತ್ತೆಂದರೆ, ಅಲ್ಲಾಉದ್ದೀನ ಖಿಲ್ಜೀ ಹಚ್ಚಿದ ಬೆಂಕಿ ೬ ತಿಂಗಳ ವರೆಗೆ ಧಗಧಗಿಸುತ್ತಿತ್ತು. ಖಲ್ಜೀ ಕೇವಲ ವಿದ್ಯಾಪೀಠಕ್ಕೆ ಬೆಂಕಿ ಹಚ್ಚಿದ್ದಲ್ಲ, ಅವನು ವಿದ್ಯಾಪೀಠದಲ್ಲಿನ ಎಲ್ಲ ಶಿಕ್ಷಕರನ್ನು ಹತ್ಯೆ ಮಾಡಿದನು. ಈ ಬೌದ್ಧಿಕ ಆಕ್ರಮಣದಿಂದ ಭಾರತಕ್ಕೆ ಅಪಾರ ಹಾನಿಯಾಯಿತು.
ಆಧುನಿಕ ತಂತ್ರಜ್ಞಾನದ ಬಳಕೆ !
ಕಾಂಗ್ರೆಸ್ಸಿನ ಆಡಳಿತ ಹೋಗಿ ಭಾಜಪ ಅಧಿಕಾರಕ್ಕೆ ಬಂದಾಗ ಈ ವಿದ್ಯಾಪೀಠದ ಮಹತ್ವವನ್ನು ತಿಳಿದು ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ ಇವರು ೧೯ ಸಪ್ಟೆಂಬರ ೨೦೧೪ ರಂದು ಇದರ ಅಡಿಪಾಯ ಹಾಕಿದ್ದರು. ೨೦೧೭ ರಲ್ಲಿ ಇದರ ಪ್ರತ್ಯಕ್ಷ ನಿರ್ಮಾಣ ಕಾರ್ಯ ಆರಂಭವಾಯಿತು. ಉತ್ಕೃಷ್ಟ ವಾಸ್ತುಶಾಸ್ತ್ರದ (ಸ್ಥಾಪತ್ಯಶಾಸ್ತ್ರದ) ಮಾದರಿಯಾಗಿರುವ ಶೇ. ‘ಶೂನ್ಯ’ ಕಾರ್ಬನ್ ಉತ್ಸರ್ಜನೆಯಾಗುವ ಈ ವಿದ್ಯಾಪೀಠವನ್ನು ೪೫೫ ಎಕರೆಭೂಮಿಯ ಪರಿಸರದಲ್ಲಿ ನಿರ್ಮಿಸಲಾಗಿದೆ. ಈ ನಾಲಂದಾ ವಿದ್ಯಾಪೀಠವು ಪ್ರಾಚೀನ ವಿದ್ಯಾಪೀಠದ ಅವಶೇಷಗಳ ಪರಿಸರದಲ್ಲಿಯೆ ಇದ್ದು ಅದನ್ನು ‘ಪಂಚಾಮೃತ’ ಸೂತ್ರವನ್ನು ಆಧರಿಸಿ ಸಿದ್ಧಪಡಿಸಲಾಗಿದೆ.
ಭಾರತದ ಹೊರತು ಆಸ್ಟ್ರೇಲಿಯಾ, ಬಾಂಗ್ಲಾದೇಶ, ಭೂತಾನ, ಬ್ರುನೇಯಿ, ಕಂಬೋಡಿಯಾ, ಚೀನಾ, ಇಂಡೋನೇಶಿಯಾ, ಲಾವೋಸ್, ಮಾರೀಶಸ್, ಮ್ಯಾನ್ಮಾರ, ನ್ಯೂಝಿಲೇಂಡ್, ಪೋರ್ಚ್ಯುಗಲ್, ಸಿಂಗಾಪುರ, ದಕ್ಷಿಣ ಕೊರಿಯಾ, ಶ್ರೀಲಂಕಾ, ಥಾಯಲೇಂಡ್ ಮತ್ತು ವಿಯೇಟ್ನಾಮ್ ಈ ೧೭ ದೇಶಗಳು ವಿದ್ಯಾಪೀಠದ ಸಮರ್ಥನೆಗಾಗಿ ಹೊಂದಾಣಿಕೆಯ ಒಪ್ಪಂದಪತ್ರಕ್ಕೆ ಸಹಿ ಮಾಡಿವೆ. ಅಂದರೆ ಈ ವಿದ್ಯಾಪೀಠ ವೈಶ್ವಿಕವಾಗಿದೆ, ಎಂದೇ ಹೇಳಬೇಕಾಗುತ್ತದೆ. ವಿಶೇಷವೆಂದರೆ, ೨೦೨೩ ರಲ್ಲಿ ದೆಹಲಿಯಲ್ಲಿ ನೆರವೇರಿದ ‘ಜೀ ೨೦’ ಸಮ್ಮೇಳನದಲ್ಲಿ ನಾಲಂದಾ ವಿದ್ಯಾಪಿಠದ ಭವ್ಯ ಚಿತ್ರವನ್ನು ನಿಲ್ಲಿಸಲಾಗಿತ್ತು. ಈ ವಿದ್ಯಾಪಿಠದ ಹಿನ್ನೆಲೆಯಲ್ಲಿ ‘ವಸುಧೈವ ಕುಟುಂಬಕಮ್ |’ ಎಂಬ ಮುಖ್ಯ ಸಂಕಲ್ಪನೆಯನ್ನು ತೆಗೆದುಕೊಳ್ಳಲಾಗಿತ್ತು. ಈ ವಿದ್ಯಾಪೀಠದ ಚಿತ್ರದ ಎದುರಿಗೆ ನಿಂತು ಅನೇಕ ರಾಷ್ಟ್ರಾಧ್ಯಕ್ಷರು ಛಾಯಾಚಿತ್ರ ತೆಗೆದುಕೊಂಡಿದ್ದರು. ಆದ್ದರಿಂದ ಪ್ರಧಾನಮಂತ್ರಿಗಳು ಕಳೆದ ವರ್ಷ ಅವರ ಭವಿಷ್ಯ ದಲ್ಲಿನ ಯೋಜನೆಯನ್ನು ಜಗತ್ತಿನ ಮುಂದಿಟ್ಟು ಭಾರತೀಯ ಸಂಸ್ಕೃತಿಯನ್ನು ಹೇಗೆ ಜೋಪಾನ ಮಾಡಲಾಗುತ್ತದೆ, ಎಂಬುದರ ದೃಷ್ಟಾಂತವನ್ನು ತೋರಿಸಿದ್ದರು.
ಇತ್ತೀಚೆಗಷ್ಟೆ ‘ಎನ್.ಸಿ.ಇ.ಆರ್.ಟಿ.’ ಪರಕೀಯ ಆಕ್ರಮಕರ ಇತಿಹಾಸವನ್ನು ಕಲಿಸುವ ಅವಶ್ಯಕತೆಯಿಲ್ಲ’, ಎನ್ನುವ ನಿಲುವಿನಲ್ಲಿ ಮೊಗಲ ಸಾಮ್ರಾಜ್ಯದ ಇತಿಹಾಸವನ್ನು ಪಠ್ಯಕ್ರಮದಿಂದ ವರ್ಜಿಸಿದೆ. ಇದರಿಂದ ಅರಿವಾಗುವುದೇನೆಂದರೆ, ಭಾರತದಲ್ಲಿ ಭವ್ಯ ವಿದ್ಯಾಪೀಠ ಗಳನ್ನು ನಿರ್ಮಿಸುವ ಅವಶ್ಯಕತೆಯಿದೆ; ಆದರೆ ಅದಕ್ಕಿಂತಲೂ ಹೆಚ್ಚು ಭಾವೀ ಪೀಳಿಗೆಯನ್ನು ನೈತಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ದೃಷ್ಟಿಯಲ್ಲಿ ಸಕ್ಷಮಗೊಳಿಸುವ ಹಾಗೂ ಅವರನ್ನು ಸ್ವಯಂಪೂರ್ಣ ಗೊಳಿಸುವ ಪಠ್ಯಕ್ರಮವನ್ನು ಕಲಿಸುವುದೂ ಅತ್ಯಾವಶ್ಯವಾಗಿದೆ. ಇದೇ ಪದ್ಧತಿಯನ್ನು ಎಲ್ಲೆಡೆ ಅನ್ವಯಿಸಿದರೆ ವಿದ್ಯಾರ್ಥಿಗಳಿಗೂ ಯೋಗ್ಯ ಹಾಗೂ ಆವಶ್ಯಕವಾದ ಶಿಕ್ಷಣ ಸಿಗುವುದು !
ಭಾರತೀಯ ಸಂಸ್ಕೃತಿಯನ್ನು ಕಾಪಾಡಬೇಕು !
ಪ್ರಾಚೀನ ಭಾರತವು ಶಿಕ್ಷಣಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಜಗತ್ಪ್ರಸಿದ್ಧವಾಗಿತ್ತು. ‘ವಿದ್ಯಾಪೀಠ’ದ ಸಂಕಲ್ಪನೆಯನ್ನು ಭಾರತವೇ ಮೊಟ್ಟಮೊದಲು ಜಗತ್ತಿಗೆ ನೀಡಿತು. ಇಂದಿನಂತೆ ಆ ಕಾಲದಲ್ಲಿ ಯುವಪೀಳಿಗೆ ಉಚ್ಚ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುತ್ತಿರಲೇ ಇಲ್ಲ, ವಿದೇಶದಿಂದಲೇ ಅಸಂಖ್ಯ ಜಿಜ್ಞಾಸುಗಳು ಜ್ಞಾನಾರ್ಜನೆಗಾಗಿ ಭಾರತೀಯ ವಿದ್ಯಾಪೀಠಗಳಿಗೆ ಬರುತ್ತಿದ್ದರು. ಕ್ರಮೇಣ ಇವೆಲ್ಲವೂ ಲುಪ್ತವಾಗಿ ವೈಭವಶಾಲಿ ಇತಿಹಾಸದ ಪರಂಪರೆಯಿರುವ ಭಾರತ ಪಾಶ್ಚಾತ್ಯ ಮೆಕಾಲೆಯ ಆಂಗ್ಲೀಕರಣದ ನಿರುಪಯುಕ್ತ ಶಿಕ್ಷಣಪದ್ಧತಿಯ ಸುಳಿಯಲ್ಲಿ ಸಿಲುಕಿತು ಮತ್ತು ಪ್ರತಿಯೊಂದು ಕ್ಷೇತ್ರದಲ್ಲಿ ಭಾರತದ ಅವನತಿ ಆಯಿತು. ನಾಲಂದಾದಂತಹ ವಿದ್ಯಾಪೀಠಗಳ ರೂಪದಲ್ಲಿ ವಿದ್ಯಾರ್ಥಿಗಳ ಮುಂದೆಯೂ ಸಕ್ಷಮ ಪರ್ಯಾಯ ಲಭಿಸಿರುವುದರಿಂದ ವಿದೇಶಕ್ಕೆ ಹೋಗುವ ಯುವಕರು ಭಾರತ ದಲ್ಲಿಯೆ ಉಳಿಯುವರು ! ಅವರ ಜ್ಞಾನವು ವಿದೇಶಿ ಕಂಪನಿಗಳ ಬದಲು ಭಾರತ ಸಕ್ಷಮವಾಗಲು ಉಪಯೋಗವಾಗುವುದು ! ಆದ್ದರಿಂದ ಭಾರತಕ್ಕೆ ಮತ್ತೊಮ್ಮೆ ವಿಶ್ವಗುರುವಾಗಲಿಕ್ಕಿದ್ದರೆ, ವಿದ್ಯಾಪೀಠದಂತೆಯೆ ಭಾರತೀಯ ಸಂಸ್ಕೃತಿಯ ಜೋಪಾನ ಹಾಗೂ ಅದರ ಪುನರುಜ್ಜೀವನಕ್ಕೆ ಒತ್ತುಕೊಡಬೇಕಾಗಿದೆ. ಮೆಕಾಲೆ ಶಿಕ್ಷಣಪದ್ಧತಿಯನ್ನು ಬದಿಗೊತ್ತಿ ಸುಸಂಸ್ಕಾರಯುಕ್ತ ಪೀಳಿಗೆಯನ್ನು ನಿರ್ಮಿಸುವ ಶಿಕ್ಷಣಪದ್ಧತಿಯನ್ನು ಅವಲಂಬಿಸಬೇಕಾಗಿದೆ. ರಾಷ್ಟ್ರಪ್ರೇಮಿ, ಸದಾಚಾರಿ ಆಗಿರುವ ಯುವ ಪೀಳಿಗೆ ಸಿದ್ಧವಾದರೆ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆ ಯಾಗಲು ತಡವಾಗಲಿಕ್ಕಿಲ್ಲ. ರಾಷ್ಟ್ರಪ್ರೇಮಿ ಹಾಗೂ ಸುಸಂಸ್ಕೃತ ಯುವ ಪೀಳಿಗೆಯನ್ನು ಸಿದ್ಧಪಡಿಸುವ ಶಿಕ್ಷಣಪದ್ಧತಿಯನ್ನು ಅವಲಂಬಿಸಿದರೆ ಭಾರತ ವಿಶ್ವಗುರು ಆಗುವುದು ಖಚಿತ !