Statement from Uma Bharati: ಪ್ರತಿಯೊಬ್ಬ ರಾಮಭಕ್ತನ ಮತ ನಮಗೇ ಸಿಗುತ್ತದೆ, ಎಂಬ ವಿಚಾರ ಅಯೋಗ್ಯ !

ಭಾಜಪದ ಮಾಜಿ ಸಂಸದೆ ಉಮಾಭಾರತಿಯವರ ಹೇಳಿಕೆ

ನವದೆಹಲಿ – ಪ್ರತಿಯೊಬ್ಬ ರಾಮಭಕ್ತನ ಮತ ನಮಗೇ ಸಿಗುತ್ತದೆ ಎಂದು ಭಾವಿಸುವುದು ತಪ್ಪಾಗಿದೆ. ಈ ಅಹಂಕಾರ ಇಟ್ಟುಕೊಳ್ಳಬಾರದು. ನಮಗೆ ಮತ ನೀಡದವನು ರಾಮಭಕ್ತನಲ್ಲ ಎಂದು ಭಾವಿಸುವುದೂ ತಪ್ಪು. ಮತ ನೀಡದಿರುವವರೂ ರಾಮಭಕ್ತರೇ ಆಗಿದ್ದಾರೆ ಎಂಬ ಹೇಳಿಕೆಯನ್ನು ಭಾಜಪದ ಮಾಜಿ ಸಂಸದೆ ಉಮಾಭಾರತಿಯವರು ನೀಡಿದ್ದಾರೆ. ಉತ್ತರಪ್ರದೇಶದಲ್ಲಿ ಭಾಜಪಕ್ಕೆ ಸೋಲು ಉಂಟಾಗಲು ಬೇರೆ ಕಾರಣಗಳಿವೆ. ಇದಕ್ಕೆ ನರೇಂದ್ರ ಮೋದಿ ಅಥವಾ ಯೋಗಿ ಆದಿತ್ಯನಾಥರವರನ್ನು ಹೊಣೆಯಾಗಿಸಲು ಸಾಧ್ಯವಾಗುವುದಿಲ್ಲ. ಇತ್ತೀಚೆಗೆ ನಡೆದ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 80 ಸ್ಥಾನಗಳಲ್ಲಿ ಭಾಜಪಕ್ಕೆ ಕೇವಲ 33 ಸ್ಥಾನಗಳನ್ನು ಮಾತ್ರ ಗೆಲ್ಲಲು ಸಾಧ್ಯವಾಯಿತು. ಹಿಂದಿನ ಚುನಾವಣೆಯಲ್ಲಿ ಭಾಜಪವು 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದಿತ್ತು.

ಉಮಾಭಾರತಿ ಮುಂದೆ ಮಾತನಾಡುತ್ತಾ,

1. ಇಸ್ಲಾಂ ಧರ್ಮವನ್ನು ಅನುಸರಿಸುವ ಜನರು ಸಾಮಾಜಿಕ ಮತ್ತು ಧಾರ್ಮಿಕ ವ್ಯವಸ್ಥೆ ಒಂದೇ ಎಂದು ನಂಬಿ ಸಾಮಾಜಿಕ ವ್ಯವಸ್ಥೆಯ ಪ್ರಕಾರ ಮತ ಚಲಾಯಿಸುತ್ತಾರೆ.

2. ಉತ್ತರಪ್ರದೇಶದಲ್ಲಿ ಭಾಜಪಕ್ಕೆ ಸೋಲಾಗಿದೆ, ಇದರ ಅರ್ಥ ಜನರಿಗೆ ರಾಮನ ಮೇಲಿನ ಶ್ರದ್ಧೆ ಕಡಿಮೆಯಾಗಿದೆ ಎಂದಲ್ಲ !

3. ಭಾಜಪದಲ್ಲಿ ಅಹಂಕಾರ ಬಂದಿದೆ ಎಂದು ನನಗೆ ಅನಿಸುವುದಿಲ್ಲ. ನಾವು ಸೋಲಿನ ಬಗ್ಗೆ ಚಿಂತನೆ ಮಾಡುತ್ತಿದ್ದೇವೆ.

4. 1992ರಲ್ಲಿ ಬಾಬರಿ ಧ್ವಂಸದ ನಂತರವೂ ಭಾಜಪ ಸೋಲನ್ನು ಅನುಭವಿಸಿತ್ತು. ಆದರೂ ನಾವು ಶ್ರೀರಾಮ ಮಂದಿರವನ್ನು ನಿರ್ಮಿಸಿದ್ದೇವೆ, ಏಕೆಂದರೆ ಅದು ನಮ್ಮ ಕಾರ್ಯಸೂಚಿಯಲ್ಲಿತ್ತು ಮತ್ತು ನಾವು ಅದನ್ನು ಪೂರ್ಣಗೊಳಿಸಿದ್ದೇವೆ. ನಾವು ರಾಮಮಂದಿರವನ್ನು ಎಂದಿಗೂ ಮತಗಳೊಂದಿಗೆ ಜೋಡಿಸಿಲ್ಲ. ಅದರಂತೆಯೇ ಮಥುರಾ ಮತ್ತು ಕಾಶಿಯಲ್ಲಿರುವ ದೇವಾಲಯಗಳು ವಿವಾದಿತವಾಗಿವೆ; ಆದರೆ ಆ ಪ್ರಶ್ನೆಗಳನ್ನು ನಾವು ನಮಗೆ ದೊರೆಯುವ ಮತಗಳೊಂದಿಗೆ ಜೋಡಿಸುತ್ತಿಲ್ಲ, ಎಂದು ಹೇಳಿದರು.