NIA Raid : ತಮಿಳುನಾಡು: ಜಿಹಾದಿ ಸಂಘಟನೆ ‘ ಹಿಜ್ಬುತ್-ತಹರೀರ್ ನ 10 ಸ್ಥಳಗಳ ಮೇಲೆ ರಾಷ್ಟ್ರೀಯ ತನಿಖಾ ತಂಡದ ದಾಳಿ

ಚೆನ್ನೈ (ತಮಿಳುನಾಡು) – ತಮಿಳುನಾಡಿನಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಜೂನ್ 30 ರಂದು ಬೆಳಗ್ಗೆ ‘ಹಿಜ್ಬುತ್ ತಹ್ರೀರ್’ ಎಂಬ ಜಿಹಾದಿ ಸಂಘಟನೆಯ 10 ವಿವಿಧ ಸ್ಥಳಗಳ ಮೇಲೆ ಹಠಾತ್ ದಾಳಿ ನಡೆಸಿತು. ಈ ಹಿಂದೆ ಈ ಪ್ರಕರಣದಲ್ಲಿ ಮಧ್ಯಪ್ರದೇಶದಲ್ಲಿಯೂ ಕೂಡ ದಾಳಿ ನಡೆಸಲಾಗಿತ್ತು. ‘ಹಿಜ್ಬುತ್-ತಹ್ರೀರ್’ಗೆ ಸಂಬಂಧಿಸಿದ ಅನೇಕ ಜನರನ್ನು ಬಂಧಿಸಲಾಗಿದೆ. ಈ ಕಟ್ಟರ್ ಮುಸ್ಲಿಮ್ ಸಂಘಟನೆಯು ಯುವಕರಿಗೆ ಮೊದಲು ಪ್ರಚೋದನಾಕಾರಿ ವಿಷಯಗಳನ್ನು ಹೇಳಿ, ನಂತರ ಅವರನ್ನು ಮಾನಸಿಕವಾಗಿ ಜಿಹಾದ್‌ಗೆ ಸಿದ್ಧಪಡಿಸುತ್ತದೆ. ಆನಂತರ ಅವರಿಗೆ ಆಯುಧಗಳ ಬಳಕೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಇತರ ಧರ್ಮದ ಯುವಕರನ್ನು ಮುಸ್ಲಿಮರನ್ನಾಗಿ ಮತಾಂತರ ಗೊಳಿಸಿ ಅವರನ್ನು ಕೂಡ ಜಿಹಾದಿಗಳಾಗಿ ಪರಿವರ್ತಿಸುತ್ತಿದೆ ಎಂದು ಈ ಸಂಘಟನೆಯ ಮೇಲೆ ಆರೋಪವಿದೆ.

ಕಳೆದ ವರ್ಷ, ಮಧ್ಯಪ್ರದೇಶದಲ್ಲಿ ಭಯೋತ್ಪಾದನಾ ನಿಗ್ರಹ ದಳ ಮತ್ತು ಎನ್ಐಎ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ‘ಹಿಜ್ಬುತ್-ತಹ್ರೀರ್’ ನೊಂದಿಗೆ ಸಂಬಂಧ ಹೊಂದಿದ್ದ 16 ಜನರನ್ನು ಬಂಧಿಸಿದ್ದರು. ಅವರಲ್ಲಿ 8 ಜನರು ಹಿಂದೆ ಹಿಂದೂಗಳಾಗಿದ್ದರು. ಅವರನ್ನು ಮತಾಂತರಗೊಳಿಸಿ ಜಿಹಾದಿಗಳಾಗಿ ಪರಿವರ್ತಿಸಲಾಗಿತ್ತು. (ಇದು ಜಾಗತಿಕ ಹಿಂದೂಗಳಿಗೆ ನಾಚಿಕೆಯ ವಿಷಯ ! ಇದುವರೆಗೆ ಯಾವ ರಾಜಕೀಯ ಪಕ್ಷದ ಅಧಿಕಾರಿಗಳು ಹಿಂದೂಗಳಿಗೆ ಧಾರ್ಮಿಕ ಶಿಕ್ಷಣವನ್ನು ನೀಡದ ಪರಿಣಾಮವೇ ಇದಾಗಿದೆ ! ಈ ಪರಿಸ್ಥಿತಿಯನ್ನು ಬದಲಾಯಿಸಲು ಹಿಂದೂಗಳಿಗೆ ಧರ್ಮಿ ಶಿಕ್ಷಣ ನೀಡುವುದು ಅವಶ್ಯಕವಾಗಿದೆ! – ಸಂಪಾದಕರು)