ಜಬಲಪುರ(ಮಧ್ಯಪ್ರದೇಶ) – ಜಬಲಪುರ ಜಿಲ್ಲೆಯ ಕಟಂಗಿ ಪ್ರದೇಶದ ತುಲ್ಲಾ ಬಾಬಾ ಟೇಕಡಿ ಅಲ್ಲಿ 57 ಕ್ಕೂ ಹೆಚ್ಚು ಪ್ರಾಣಿಗಳ ಅವಶೇಷಗಳು ಪತ್ತೆಯಾಗಿವೆ. ಈ ಅವಶೇಷಗಳು ಹಸುಗಳ ಅವಶೇಷಗಳಾಗಿವೆ ಎಂದು ಹಿಂದೂಗಳು ಹೇಳಿದ್ದಾರೆ. ಈ ಕೃತ್ಯವನ್ನು ವಿರೋಧಿಸಿ ಜೂನ್ 28 ರಂದು ಹಿಂದೂ ಸಂಘಟನೆಗಳು ಬೀದಿಗಿಳಿದು ಆಂದೋಲನ ನಡೆಸಿದರು. ಜಬಲಪುರ- ದಮೋಹ ನಡುವಿನ ರಸ್ತೆಯನ್ನು 4 ಗಂಟೆಗಳ ಕಾಲ ತಡೆದು ವಿರೋಧ ವ್ಯಕ್ತಪಡಿಸಿದರು. ಘಟನೆಯ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿ ದೀಪಕ ಕುಮಾರ್ ಸಕ್ಸೇನಾ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಪ್ರತಾಪ ಸಿಂಗ್ ಸ್ಥಳಕ್ಕೆ ಆಗಮಿಸಿದರು. ‘ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿ ಸಂಚಾರ ಸುಗಮಗೊಳಿಸಿದರು.
ಸಂಪಾದಕೀಯ ನಿಲುವುಮಧ್ಯಪ್ರದೇಶದಲ್ಲಿ ಬಿಜೆಪಿ ಸರಕಾರವಿರುವಾಗ ಮತ್ತು ರಾಜ್ಯದಲ್ಲಿ ಗೋಹತ್ಯೆ ನಿಷೇಧ ಇರುವಾಗ ಇಂತಹ ಘಟನೆ ನಡೆಯಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ. |