‘ಸಚ್ಚಿದಾನಂದ ಪರಬ್ರಹ್ಮ ಡಾ.ಜಯಂತ ಆಠವಲೆಯವರ ಬ್ರಹ್ಮೋತ್ಸವವು ಪರಮಾನಂದದ ಅನುಭೂತಿ ನೀಡುವ ಕ್ಷಣ ! – ಪೂ. ಡಾ. ಶಿವನಾರಾಯಣ ಸೇನ, ಸಂಪಾದಕರು, ಟ್ರೂತ್

ಬ್ರಹ್ಮೋತ್ಸವ ಸಮಾರಂಭದಲ್ಲಿ ಸಾಧಕರಿಗೆ ನಮಸ್ಕಾರ ಮಾಡುತ್ತಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು

‘ಶ್ರೀ ಹರಿ ಶರಣಂ.

೧. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಬ್ರಹ್ಮೋತ್ಸವ ಸಮಾರಂಭದ ನೇರ ಪ್ರಸಾರ ನೋಡುವುದು ಇದು ನನಗೆ ಆನಂದದಾಯಕ ಮತ್ತು ಉಚ್ಚ ಮಟ್ಟದ  ಆಧ್ಯಾತ್ಮಿಕ ಸ್ತರದ ಅನುಭವವಾಗಿತ್ತು. ನಮ್ಮ ಶಾಸ್ತ್ರವು ಮುಂದಿನಂತೆ ಹೇಳುತ್ತದೆ,

ತದೇವ ರಮ್ಯಂ ರುಚಿರಂ ನವಂ ನವಂ ತದೇವ ಶಶ್ವನ್ಮನಸೊ ಮಹೋತ್ಸವಮ್ |

ತದೇವ ಶೋಕರ್ಣವಶೋಷಣಂ ನೃಣಾಂ ಯದುತ್ತಮ: ಶ್ಲೋಕಯಶೋ ನುಗೀಯತೇ | |

– ಶ್ರೀಮದ್ ಭಾಗವತ, ಸ್ಕಂಧ ೧೨, ಅಧ್ಯಾಯ ೧೨, ಶ್ಲೋಕ ೫೦

ಅರ್ಥ : ಯಾವ ವಚನದಿಂದ ಭಗವಂತನ ಪರಮ ಪವಿತ್ರ ಯಶಸ್ಸಿನ ಗಾಯನವಾಗುತ್ತದೆಯೋ, ಅದೇ ರಮಣೀಯ, ಹಿಡಿಸುವಂತಹದ್ದು ಮತ್ತು ಹೊಸದೆಂದು ತಿಳಿಯಬೇಕು. ಅದೇ ಯಾವಾಗಲೂ ಮನಸ್ಸಿಗೆ ಪರಮಾನಂದದ ಅನುಭೂತಿಯನ್ನು ನೀಡುತ್ತಿರುತ್ತದೆ ಮತ್ತು ಅದೇ ಮನುಷ್ಯನ ಎಲ್ಲ ಶೋಕಸಾಗರವನ್ನು ಬತ್ತಿಸುತ್ತದೆ.

ಪೂ. ಡಾ. ಶಿವನಾರಾಯಣ ಸೇನ

ದೈವೀ ಅವತಾರಗಳ ಲೀಲೆಗಳ ವರ್ಣನೆ ಮಾಡುವ ಕಾವ್ಯ ಮತ್ತು ಪ್ರಸಂಗ ಇವು ಅತ್ಯಂತ ಮಧುರ, ತೇಜಸ್ವಿ, ಮನಸ್ಸಿಗೆ ಆನಂದ ನೀಡುವ ಮತ್ತು ಉತ್ಸಾಹವರ್ಧಕವಾಗಿರುತ್ತವೆ. ಈ ನಿತ್ಯ ನಾವೀನ್ಯಪೂರ್ಣ ಭಾಸವಾಗುವ ಕಾವ್ಯ ಮನಸ್ಸಿಗೆ ಚಿರಂತನ ಆನಂದವನ್ನು ನೀಡುವುದರೊಂದಿಗೆ, ದುಃಖರೂಪಿ ಮಹಾಸಾಗರದ ಭಾಷ್ಪೀಕರಣವನ್ನೂ ಮಾಡುತ್ತದೆ.

೨. ಬ್ರಹ್ಮೋತ್ಸವದ ದಿನದಿಂದ ನಾನು ನನ್ನಲ್ಲಿರುವ ಎಲ್ಲಾ ಕೆಟ್ಟ ಹವ್ಯಾಸಗಳನ್ನು ಬಿಡುವ ಸಂಕಲ್ಪವನ್ನು ಮಾಡಿದ್ದೇನೆ.

೩. ಈ ಸಮಾರಂಭದಲ್ಲಿ ಗುರುದೇವರು ಮತ್ತು ‘ಅವರ ಸಾವಿರಾರು ಸಾಧಕ ಭಕ್ತರೊಂದಿಗೆ ದರ್ಶನವನ್ನು ಪಡೆಯುವುದು, ಇದು ನನಗೆ ಆನಂದದಾಯಕ ಮತ್ತು ಉತ್ಸಾಹವರ್ಧಕ ಅನುಭವ ವಾಗಿತ್ತು. ‘ಈ ಸಾಧಕಭಕ್ತರ ಕಾಲುಗಳ ಧೂಳು ಕೂಡ ಬಹಳ ಪವಿತ್ರವಾಗಿದೆ ಎಂದು ನನಗೆ ಅನಿಸುತ್ತದೆ. ನಾಮಸ್ಮರಣೆ ಮತ್ತು ಸ್ತೋತ್ರಗಳನ್ನು ಹೇಳುತ್ತಾ ಸಾಗುವ ದಿವ್ಯಮೆರವಣಿಗೆಯ ದೃಶ್ಯದಿಂದ ನನ್ನ ಮನಸ್ಸಿನ ಮೇಲೆ ಒಂದು ವಿಭಿನ್ನವಾದ ಅಚ್ಚನ್ನು ಮೂಡಿಸಿದೆ.

೪. ಈ ಸಮಯದಲ್ಲಿ ಗುರುದೇವರು ಪ್ರಾರಂಭಿಸಿದ ಅಸಂಖ್ಯಾತ ಉಪಕ್ರಮಗಳ ವರದಿಯ ಸಂಕ್ಷಿಪ್ತ ಸಾರಾಂಶವನ್ನು ತೆಗೆದುಕೊಳ್ಳಲಾಯಿತು. ನಮ್ಮ ಶಾಸ್ತ್ರಧರ್ಮ ಪ್ರಚಾರ ಸಭೆಯ ಸಂಸ್ಥಾಪಕರಾದ ಗೌರವಾನ್ವಿತ ಸತ್ಯಪುರುಷ ಶ್ರೀಮತ್ ಉಪೇಂದ್ರಮೋಹನ ಸೇನಗುಪ್ತಾ ಅವರು ತಮ್ಮ ಜೀವಿತಾವಧಿಯಲ್ಲಿ ಸಮಾಜ ಸುಧಾರಣೆಗಾಗಿ ನಿರಂತರವಾಗಿ ಪ್ರಯತ್ನವನ್ನು ಮಾಡಿದರು. ಪ.ಪೂ. ಡಾ. ಆಠವಲೆಯವರು ಮಾಡುತ್ತಿರುವ ಈ ದೈವೀ ಪ್ರಯತ್ನಗಳನ್ನು ನೋಡಿ ಶ್ರೀಮತ್ ಉಪೇಂದ್ರಮೋಹನರ ಆತ್ಮಕ್ಕೆ ಅತೀವ ಆನಂದವಾಗಿರಬಹುದು ಎಂದು ನನಗೆ ಅನಿಸುತ್ತದೆ.

೫. ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರ ಉಪಸ್ಥಿತಿಯಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ  ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರು ಮಾಡಿದ ಚಂಡಿಯಾಗ ನೋಡಲು ಸಿಕ್ಕಿರುವುದು, ಇದು ಕೂಡ ಒಂದು ಅಪರೂಪದ  ಸಂದರ್ಭವಾಗಿತ್ತು.

೬. ಚಂಡಿಯಾಗ ಪ್ರಾರಂಭವಾಗುವ ಮೊದಲು ಪರಾತ್ಪರ ಗುರು ಡಾ. ಆಠವಲೆಯವರ ದೈವೀ ಬಾಲಕರೊಂದಿಗಿನ ಈ  ಹಿಂದಿನ  ಭೇಟಿಯ (ಸತ್ಸಂಗದ) ಧ್ವನಿ-ಚಿತ್ರಮುದ್ರಿಕೆಯನ್ನು ತೋರಿಸ ಲಾಯಿತು. ಅದನ್ನು ನೋಡಿ ‘ಈ ಬಾಲಕರ ಆಚರಣೆ ಅತ್ಯಂತ ನಮ್ರ ಮತ್ತು ವಿಚಾರ ಪವಿತ್ರವಾಗಿವೆ, ಎಂಬುದು ನನ್ನ ಗಮನಕ್ಕೆ ಬಂದಿತು.

೭. ಕೆಲವು ವರ್ಷಗಳ ಹಿಂದೆ, ಸನಾತನ ಸಂಸ್ಥೆಯ ಸಂಸ್ಥಾಪಕರಾದ, ಪರಾತ್ಪರ ಗುರು ಡಾ. ಆಠವಲೆಯವರು, ‘ಧರ್ಮರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಯನ್ನು  ಮಾಡಲು ಉಚ್ಚ ಲೋಕದಿಂದ ದೈವೀ ಜೀವಗಳು ಜನಿಸುತ್ತಾರೆ, ಎಂದು  ಹೇಳಿದ್ದರು. ಅದೇ ರೀತಿ ನಮ್ಮ ಪಂಥದ ಸಂಸ್ಥಾಪಕ ಶ್ರೀಮತ್ ಶ್ರೀ ಉಪೇಂದ್ರಮೋಹನ್ ಅವರ ದಿವ್ಯ ನಿವಾಸವಿರುವ ಕೋಲಕಾತಾ ನಗರದಲ್ಲಿ ಇಂತಹ ದೈವೀ ಬಾಲಕರು ಜನಿಸುತ್ತಿದ್ದಾರೆ.

೮. ‘ಸಂತರ ನುಡಿಗಳು ಎಂದೂ ಸುಳ್ಳಾಗುವುದಿಲ್ಲ’ ಎನ್ನುವುದನ್ನು ಸಾಬೀತುಪಡಿಸುವ ಒಂದು ಪ್ರಸಂಗವನ್ನು ಹೇಳುತ್ತೇನೆ. ಒಂದು ವರ್ಷದ ಹಿಂದೆ ನಾನು ಪ.ಪೂ. ಡಾ. ಆಠವಲೆ ಅವರನ್ನು ಭೇಟಿಯಾಗಿದ್ದೆನು. ಆ ಸಮಯದಲ್ಲಿ ನನ್ನ ಮನಸ್ಸಿನ ಸಂಶಯಗಳನ್ನು ನಿವಾರಣೆ ಮಾಡುವಾಗ ಅವರು, ಭವಿಷ್ಯದಲ್ಲಿ ನಡೆಯುವ ಯುದ್ಧದಲ್ಲಿ ದೇಶವೊಂದು ತಪ್ಪಾಗಿ ತನ್ನದೇ ದೇಶದ ಮೇಲೆ ಬಾಂಬ್ ಹಾಕುವುದು, ಎಂದು ಹೇಳಿದ್ದರು. ‘ದೈವೀ ಮಾತುಗಳು ಎಂದಿಗೂ ಸುಳ್ಳಾಗಿರುವುದಿಲ್ಲ, ಎನ್ನುವ ಅನುಭೂತಿ ನನಗೆ ಬಂದಿತು. ರಶಿಯಾ ಮತ್ತು ಯುಕ್ರೇನ ನಡುವಿನ ಯುದ್ಧದ ಸಮಯದಲ್ಲಿ, ರಷ್ಯಾ ಸೈನ್ಯವು ತಪ್ಪಾಗಿ ತನ್ನದೇ ದೇಶದ ಭೂಮಿಯ ಮೇಲೆ ಬಾಂಬ್ ಮಳೆಗೆರೆಯಿತು ಮತ್ತು ಆ ಸ್ಫೋಟದಿಂದಾಗಿ, ಅವರ ದೇಶಕ್ಕೆ ಬಹಳಷ್ಟು ಹಾನಿಯಾಯಿತು. ಇದರಿಂದ ಗಮನಕ್ಕೆ ಬರುವುದೇನೆಂದರೆ, ‘ಬ್ರಹ್ಮ ವಿದ್ವತ್ತನ್ನು ಹೊಂದಿರುವವರು (ಅಂದರೆ ಬ್ರಹ್ಮನನ್ನು ತಿಳಿದವರು) ಸಹಜವಾಗಿ ಆಡಿದ ಮಾತುಗಳು ಎಂದಿಗೂ ಅಸತ್ಯ ಮತ್ತು ಅಯೋಗ್ಯವಾಗಿರುವುದಿಲ್ಲ.

ಅತ್ಯಂತ ಅದ್ವಿತೀಯ ಬ್ರಹ್ಮೋತ್ಸವವನ್ನು ನೋಡಿ ನಾವೆಲ್ಲರೂ ‘ಶ್ರೀ ಹರಿಯ ದೈವೀ ಇಚ್ಛೆಯಂತೆ ಅಖಿಲ ಮನುಕುಲದ ಕಲ್ಯಾಣ ಮಾಡುವ ಧರ್ಮರಾಜ್ಯದ (ಹಿಂದೂ ರಾಷ್ಟ್ರದ) ಸ್ಥಾಪನೆಗಾಗಿ ಆವಶ್ಯಕವಾಗಿರುವ ಮಾರ್ಗದರ್ಶನ ಮಾಡುವ ಲೀಲಾವಿಗ್ರಹ ಪ.ಪೂ. ಡಾ. ಜಯಂತ ಬಾಳಾಜಿ ಆಠವಲೆಯವರಿಗೆ ಆರೋಗ್ಯ ಪೂರ್ಣ ದೀರ್ಘಾಯುಷ್ಯ ಲಭಿಸಲಿ, ಎಂದು ಪ್ರಾರ್ಥಿಸುತ್ತೇನೆ.

ಜಯಂತಿ ಶಾಸ್ತ್ರಾಣಿ ದ್ರವಂತಿ ದಾಂಭಿಕಾಃ |

ಹೃಷ್ಯಂತಿ ಸಂತೊ ನಿಪತಂತಿ ನಾಸ್ತಿಕಾಃ |

ಅರ್ಥ : ಯಾವಾಗ ಶಾಸ್ತ್ರಗಳ ವಿಜಯವಾಗುತ್ತದೆಯೋ ಮತ್ತು

ಕಪಟಿಗಳು ಪಲಾಯನ ಮಾಡುತ್ತಾರೆಯೋ, ಆಗ ಸಜ್ಜನರಿಗೆ ಆನಂದವಾಗುತ್ತದೆ ಮತ್ತು ನಾಸ್ತಿಕರ ಪರಾಭವವಾಗುತ್ತದೆ.

ಸಮಾಜದಲ್ಲಿರುವ ಜನರ ನಾಸ್ತಿಕತೆ, ಕೃತಘ್ನತೆ ಮತ್ತು ಸ್ವೇಚ್ಛಾಚಾರ ವೃತ್ತಿ ಮಹಾಪುರುಷನಿಗೆ  ಕಾಣಿಸುತ್ತಿರುತ್ತದೆ.  ಇದರಿಂದ ಶ್ರೀಹರಿಯ ಹೃದಯದಲ್ಲಿ ಉದ್ಭವಿಸಿದ ದುಃಖವನ್ನು ಶ್ರೀಹರಿಯು ತನ್ನ ಅಂತರ್ಮನಸ್ಸಿನಲ್ಲಿ ಬಚ್ಚಿಟ್ಟುಕೊಳ್ಳುತ್ತಾನೆ. ‘ಪರಾತ್ಪರ ಗುರುದೇವರ ದೈವೀ ಪ್ರೀತಿಯಿಂದ ನಮ್ಮ ವಿಚಾರ ಮತ್ತು ಭಾವನೆಗಳು ಶುದ್ಧವಾಗಲಿ ಮತ್ತು ಅವರ ಕೃಪೆಯಿಂದಲೇ ದೊರಕಿರುವ ಸೇವೆಯನ್ನು ನಮಗೆ ದಾಸ್ಯಭಾವದಲ್ಲಿದ್ದು, ಆನಂದದಿಂದ ಮತ್ತು ಅನಂತ ಕಾಲದ ವರೆಗೆ ಮಾಡಲು ಸಾಧ್ಯವಾಗಲಿ, ಇದೇ ಅವರ ಚರಣಗಳಲ್ಲಿ ಪ್ರಾರ್ಥನೆ.

ಪರಾತ್ಪರ ಗುರುದೇವರ ಚರಣಕಮಲಗಳಿಗೆ ನನ್ನ ಸಾಷ್ಟಾಂಗ ನಮಸ್ಕಾರಗಳು !

– ಪೂ. ಡಾ. ಶಿವನಾರಾಯಣ ಸೇನ, ಸಂಪಾದಕರು, ವಾರಪತ್ರಿಕೆ ಟ್ರೂತ್. (ಮೇ ೨೦೨೩)