ಭಗವಂತನ ಅನುಸಂಧಾನದಿಂದ ನ್ಯಾಯಾಲಯ ಕಾರ್ಯವನ್ನು ನಡೆಸಬೇಕು ! – ವಕೀಲ ಕೃಷ್ಣಮೂರ್ತಿ ಪಿ., ಜಿಲ್ಲಾ ಅಧ್ಯಕ್ಷ, ವಿಶ್ವ ಹಿಂದೂ ಪರಿಷತ್, ಕೊಡಾಗು, ಕರ್ನಾಟಕ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ಆರನೇ ದಿನ (ಜೂನ್ ೨೯)

ಸತ್ರ : ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ವಕೀಲರ ಕೊಡುಗೆ

ವಕೀಲ ಕೃಷ್ಣಮೂರ್ತಿ ಪಿ

ವಿದ್ಯಾಧಿರಾಜ ಸಭಾಂಗಣ – ವಾಹನದಲ್ಲಿ ಪ್ರಯಾಣಮಾಡುತ್ತಿದ್ದಾಗ ಹಾಗೂ ನ್ಯಾಯಾಲಯದಲ್ಲೂ ನಾನು ನಾಮಜಪ ಮಾಡುತ್ತೇನೆ. ನಮ್ಮ ಮೇಲೆ ಯಾವುದೇ ಸಂಕಟ ಬಂದರೂ ಭಗವಂತನಿಗೆ ನಮ್ಮ ಕಾಳಜಿ ಆಗುವಷ್ಟು ಭಗವಂತನ ಮೇಲೆ ಶ್ರದ್ಧೆ ಇರಬೇಕು. ನಮ್ಮ ಒಡೆಯ ಭಗವಂತನಾಗಿದ್ದಾನೆ. ಭಗವಂತನ ಭಕ್ತರಿಗೆ ಚಿಂತೆ ಮಾಡುವ ಆವಶ್ಯಕತೆ ಇಲ್ಲ. ಸತತ ನಾಮಜಪ ಮಾಡುತ್ತಾ ನ್ಯಾಯಾಲಯ ಕೆಲಸ ಮಾಡಬೇಕು. ಭಗವಂತನ ನಾಮಜಪ ಮಾಡುತ್ತಾ ಕೆಲಸ ಮಾಡಿದರೆ ಭಗವಂತ ನಮಗೆ ಶಕ್ತಿ ನೀಡುತ್ತಾನೆ. ಯಾವಾಗಲೂ ಭಗವಂತನ ನಮ್ಮೊಂದಿಗೆ ಇದ್ದಾನೆ ಎಂಬ ಅನುಭೂತಿ ನಿಮಗೆ ಬರುತ್ತದೆ. ಸುಸ್ತಾಗಿರುವಾಗ ನಾನು ಭಗವಾನ ಶ್ರೀಕೃಷ್ಣನ ಸ್ಮರಣೆ ಮಾಡುತ್ತೇನೋ ಆಗ ತಂಪಾದ ಗಾಳಿ ಬರುತ್ತದೆ. ಇದರಿಂದ ಭಗವಂತ ತನ್ನ ಅಸ್ತಿತ್ವದ ಅನುಭೂತಿ ಬರುತ್ತದೆ. ಸಾಧನೆ ಮತ್ತು ಸ್ವಭಾವ ದೋಷ ನಿರ್ನೂಲನೆ ಪ್ರಕ್ರಿಯೆದಿಂದ ನಿಮ್ಮ ವ್ಯಕ್ತಿತ್ವ ವಿಕಸಿತವಾಗುತ್ತದೆ.

ಸಾಧನೆಯಿಂದಾಗಿ ನನ್ನ ಸಿಟ್ಟು ಕಡಿಮೆ ಆಯಿತು; ಆದರೆ ಕ್ಷಾತ್ರವೃತ್ತಿ ಹಾಗೇ ಇದೆ. ಕಾನೂನಿನ ಅಭ್ಯಾಸದೊಂದಿಗೆ ಸಾಧನೆಯನ್ನು ಮಾಡಿ ನ್ಯಾಯಾಲಯದಲ್ಲಿ ಹೋರಾಟ ನಡೆಸಿದರೆ ಕಾರ್ಯ ಗತಿ ಮತ್ತು ಯಶಸ್ಸು ಸಿಗುತ್ತದೆ. ನಮ್ಮೊಂದಿಗೆ ಭಗವಂತನ ಇದ್ದಾನೆ. ಭಗವಂತನಿಗೆ ಪ್ರಾರ್ಥನೆ ಮಾಡಿಯೇ ಮನೆಯಿಂದ ಹೊರಗೆ ಹೋಗಬೇಕು. ಸಾಧನೆ ಮಾಡಿದರೆ ‘ಭಗವಂತ ಯಾವಾಗಲೂ ನನ್ನೊಂದಿಗೆ ಇದ್ದಾನೆ’ ಇದರ ಅನುಭೂತಿ ಬರುತ್ತದೆ. ‘ಸಾಧಕ ವಕೀಲ’, ‘ಹಿಂದೂ ವಕೀಲ’ ಆಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಬೇಕಾಗಿದೆ. ವಕೀಲ ಕೃಷ್ಣಮೂರ್ತಿ ಇವರು ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನ ಆರನೇ ದಿನದ ಸತ್ರದಲ್ಲಿ ‘ಹಿಂದೂತ್ವನಿಷ್ಠ ಕಾರ್ಯಕರ್ತರಿಗೆ ನ್ಯಾಯಾಲಯದ ಸಹಾಯ ಮಾಡುವಾಗ ಬಂದ ಅಧ್ಯಾತ್ಮಿಕ ಅನುಭವ’, ಈ ಕುರಿತು ಅವರು ಮಾತನಾಡುತ್ತಿದ್ದರು.