ಅಮೇರಿಕಾದ ‘ಮಾಯನ್’, ‘ಅಜಟೆಕ್’ ಮತ್ತು ‘ಇಂಕಾಸ್’ ಸಂಸ್ಕೃತಿಗಳು ಸನಾತನ ಧರ್ಮದೊಂದಿಗೆ ಸಂಬಂಧಿಸಿದ್ದವು ! – ಪ್ರವೀಣ್ ಕುಮಾರ್ ಶರ್ಮಾ, ವೈದಿಕ ಉಪನ್ಯಾಸಕ ಮತ್ತು ಅಂತಾರಾಷ್ಟ್ರೀಯ ಹಿಂದೂ ಸಂಶೋಧಕರು, ತೆಲಂಗಾಣ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನ (ಜೂನ್ 28)

ದೇವಸ್ಥಾನ ಸಂಸ್ಕೃತಿಯ ರಕ್ಷಣೆಯ ಪ್ರಯತ್ನಗಳು

ಪ್ರವೀಣ್ ಕುಮಾರ್ ಶರ್ಮಾ

ಸನಾತನ ಧರ್ಮವು ವೈಶ್ವಿಕ ಧರ್ಮವಾಗಿದೆ. ಅದು ಭಾರತಕ್ಕೆ ಮಾತ್ರ ಸೀಮಿತವಾಗಿರಲಿಲ್ಲ. ಸನಾತನ ಧರ್ಮವು ಸಂಪೂರ್ಣ ಪೃಥ್ವಿಯ ಮೇಲೆ ಹರಡಿಕೊಂಡಿತ್ತು. ಹಿಂದಿನ ಅಮೇರಿಕಾದ ‘ಮಾಯನ್’, ‘ಅಜಟೆಕ್’ ಮತ್ತು ‘ಇಂಕಾಸ್’ ಸಂಸ್ಕೃತಿಗಳು ಸನಾತನ ಧರ್ಮದೊಂದಿಗೆ ಸಂಬಂಧ ಹೊಂದಿದ್ದವು. ಹಿಂದೂಗಳ ಅಪಾರ ಸಹಿಷ್ಣುತೆಯಿಂದಾಗಿ ಆ ಸಂಸ್ಕೃತಿಗಳು ಎಲ್ಲೆಡೆ ಉಳಿಯಲು ಸಾಧ್ಯವಾಗಲಿಲ್ಲ. ನಂತರ ಉಂಟಾದ ಪಂಥಗಳ ಜನರು ಕತ್ತಿಯ ಬಲದೊಂದಿಗೆ ವಿಶ್ವದ ಮೇಲೆ ಪ್ರಭುತ್ವವನ್ನು ಹೊಂದಿದರು ಮತ್ತು ಸನಾತನ ಧರ್ಮಕ್ಕೆ ಬಹಳ ಹಾನಿ ಮಾಡಿತು. ಮಧ್ಯಪೂರ್ವ ದೇಶಗಳಿಂದ ಆಕ್ರಮಣಕಾರರು ಭಾರತವನ್ನು ಆಕ್ರಮಿಸಿದರು. ಇಲ್ಲಿನ ಸಂಸ್ಕೃತಿಗೆ ಹಾನಿ ಮಾಡಿದರು. ಅವರು ನಮ್ಮ ಗ್ರಂಥಗಳನ್ನು ನಾಶಮಾಡಿದರು; ಆದರೆ ನಮ್ಮ ಸಂಸ್ಕೃತಿಯನ್ನು ನಾಶಮಾಡಲು ಸಾಧ್ಯವಾಗಲಿಲ್ಲ, ಎಂದು ತೆಲಂಗಾಣದ ವೈದಿಕ ಉಪನ್ಯಾಸಕ ಮತ್ತು ಅಂತಾರಾಷ್ಟ್ರೀಯ ಹಿಂದೂ ಸಂಶೋಧಕರಾದ ಪ್ರವೀಣ ಕುಮಾರ್ ಶರ್ಮಾ ಹೇಳಿದರು.

ಅವರು ಮಾತು ಮುಂದುವರೆಸಿ, ವೇದವು ಜಾಗತಿಕ ಸಂವಿಧಾನವಾಗಿದೆ. ಪರಮಾಣುಗಳಲ್ಲಿ ಸನಾತನ ಧರ್ಮವಿದೆ. ವಸುಧೈವ ಕುಟುಂಬಕಮ್ ಮತ್ತು ‘ಸರ್ವೇ ಭವನ್ತು ಸುಖಿನಃ’ (ಅರ್ಥ: ಎಲ್ಲಾ ಜೀವಿಗಳು ಸುಖಿಯಾಗಿರಲಿ), ಇವು ನಮ್ಮ ಕಲಿಕೆಯಾಗಿವೆ. ಹಿಂದೆ ವಿಶ್ವದಾದ್ಯಂತ ಭಗವಾನ್ ರಾಮ, ಗರುಡ ಅವರ ಪೂಜೆ ನಡೆಯುತ್ತಿತ್ತು. ಎಲ್ಲೆಡೆ ಯಜ್ಞ ಸಂಸ್ಕೃತಿ ಇತ್ತು. ಸನಾತನ ಧರ್ಮದಲ್ಲಿ ಎಲ್ಲಾ ಜ್ಞಾನವು ಅಡಕವಾಗಿದೆ. ಸನಾತನ ಧರ್ಮವು ಪ್ರಕೃತಿಯಾಗಿದೆ. ಅದು ಅನಾದಿ ಅನಂತವಾಗಿದೆ. ಆಪತ್ಕಾಲದಲ್ಲಿ ಕೇವಲ ಸನಾತನ ಧರ್ಮವೇ ನಮ್ಮ ರಕ್ಷಣೆಯನ್ನು ಮಾಡಲಿದೆ ಎಂದು ಹೇಳಿದರು.