ಕೇರಳದಲ್ಲಿ ಸಾಮ್ಯವಾದಿಗಳ ಪ್ರವೇಶದ ನಂತರ ಹಿಂದೂಗಳ ಶೋಷಣೆ ಆರಂಭವಾಯಿತು ! – ನ್ಯಾಯವಾದಿ ಕೃಷ್ಣರಾಜ ಆರ್. ಎರ್ನಾಕುಲಮ್, ಕೇರಳ

ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಐದನೇ ದಿನ (೨೮ ಜೂನ್) : ಉದ್ಭೋಧನ ಸತ್ರ

ದೇವಸ್ಥಾನಗಳನ್ನು ರಕ್ಷಿಸಲು ನ್ಯಾಯಾಂಗದ ಪ್ರಯತ್ನ

ನ್ಯಾಯವಾದಿ ಕೃಷ್ಣರಾಜ ಆರ್. ಎರ್ನಾಕುಲಮ್

ವಿದ್ಯಾಧಿರಾಜ ಸಭಾಂಗಣ – ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದಲ್ಲಿ ಭಾಗವಹಿಸುವುದು ಇದು ನನ್ನ ತುಂಬಾ ಮಹತ್ವದ ಕ್ಷಣವಾಗಿದೆ. ನಾನು ಓರ್ವ ಸ್ವಾಭಿಮಾನಿ ಹಿಂದು ಆಗಿದ್ದೇನೆ. ಈ ಸ್ವಾಭಿಮಾನಿ ಹಿಂದೂಗಳ ಸಮ್ಮೇಳನ ಧರ್ಮಾಭಿಮಾನಿ ಹಿಂದೂಗಳಿಗೆ ಪ್ರೇರಣಾದಾಯಕವಾಗಿದೆ. ಕೇರಳದಲ್ಲಿ ಹಿಂದೂಗಳಿಗೆ ಲವ್ ಜಿಹಾದ್‌ನಂತಹ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತಿದೆ. ಕೇರಳದ ಯಾವುದೇ ಹಿಂದುತ್ವನಿಷ್ಠ ಸಂಘಟನೆ ಅವರಿಗೆ ಸಹಾಯ ಮಾಡುವುದಿಲ್ಲ. ಕೇರಳದಲ್ಲಿ ಸಾಮ್ಯವಾದಿಗಳ(ಕಮ್ಯುನಿಸಮ್‌ನ) ಪ್ರವೇಶದಿಂದ ಹಿಂದೂಗಳ ಶೋಷಣೆ ಆರಂಭವಾಯಿತು, ಎಂಬ ಮಾಹಿತಿಯನ್ನು ಎರ್ನಾಕುಲಮ್, ಕೇರಳದ ನ್ಯಾಯವಾದಿ ಕೃಷ್ಣರಾಜ ಆರ್, ಇವರು ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದಲ್ಲಿ ನೀಡಿದರು.

ರಾಜ್ಯ ಸರಕಾರ, ಕೇಂದ್ರ ಸರಕಾರ ಮತ್ತು ನ್ಯಾಯಾಂಗವು ಸಣ್ಣ ಸಣ್ಣ ದೇವಸ್ಥಾನಗಳಿಗೆ ರಕ್ಷಣೆ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯವು ತೀರ್ಪು ನೀಡಿದೆ. ಈ ತೀರ್ಪಿನ ಆಧಾರದಲ್ಲಿ ನಾನು ದೇವಸ್ಥಾನಗಳ ರಕ್ಷಣೆಗಾಗಿ ನ್ಯಾಯಾಂಗ ಹೋರಾಟ ಆರಂಭಿಸಿದ್ದೇನೆ. ದೇವಸ್ಥಾನಗಳ ಸಂಪತ್ತನ್ನು ರಕ್ಷಿಸುವುದು, ಭಕ್ತರ ಕರ್ತವ್ಯವಾಗಿದೆ ಮತ್ತು ಅದು ಅವರ ಹಕ್ಕೂ ಆಗಿದೆ. ರಾಜ್ಯದಲ್ಲಿ ಹಿಂದುವಿರೋಧಿ ಸರಕಾರವು ಶಬರಿಮಲೈ ಪ್ರಕರಣಕ್ಕೆ ಬೇರೆಯೇ ಆದ ತಿರುವು ನೀಡಿತು. ಸರ್ವೋಚ್ಚ ನ್ಯಾಯಾಲಯವು ಈ ಪ್ರಕರಣದಲ್ಲಿ ನಿರ್ಣಯ ಣಿಡಿತು ಸರಕಾರವು ಅದರ ದುರುಪಯೋಗ ಮಾಡಿತು. ಕೇರಳದ ಮುಸ್ಲಿಂ ಬಹುಸಂಖ್ಯಾತ ಮಲ್ಲಪುರಮ್ ಜಿಲ್ಲೆಯಲ್ಲಿ ಅತ್ಯಧಿಕ ದೇವಸ್ಥಾನಗಳನ್ನು ಜಿಹಾದಿ ಟಿಪ್ಪು ಸುತ್ತಾನ್ ಧ್ವಂಸ ಮಾಡಿದನು. ಹಿಂದು ಸಂಘಟನೆಗಳು ದೇವಸ್ಥಾನಗಳ ರಕ್ಷಣೆಗಾಗಿ ಸರಕಾರದ ಮೇಲೆ ಒತ್ತಡ ತರಬೇಕು.