ವಿಚಾರಧಾರೆ ಯುದ್ಧದಲ್ಲಿ ಗೆಲ್ಲಲು ಹಿಂದೂತ್ವನಿಷ್ಠ ವಕೀಲರು ‘ಈಕೋಸಿಸ್ಟಂ’ನ್ನು ನಿರ್ಮಿಸಲು ಅಗತ್ಯವಿದೆ ! – ಸದ್ಗುರು ಡಾ. ಚಾರುದತ್ತ ಪಿಂಗಳೆ, ರಾಷ್ಟ್ರೀಯ ಮಾರ್ಗದರ್ಶಕ, ಹಿಂದೂ ಜನಜಾಗೃತಿ ಸಮಿತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಆರನೇ ದಿನ

ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ವಕೀಲರ ಕೊಡುಗೆ

ಸದ್ಗುರು ಡಾ. ಚಾರುದತ್ತ ಪಿಂಗಳೆ

ವಿದ್ಯಾಧಿರಾಜ ಸಭಾಂಗಣ – ಹಿಂದೂ ರಾಷ್ಟ್ರಕ್ಕಾಗಿ ನೇರ ಹೋರಾಟದಲ್ಲಿ ನಮ್ಮಂತಹ ಸಾಮಾನ್ಯ ಕಾರ್ಯಕರ್ತರು ಭಾಗಿಯಾಗಿರುತ್ತಾರೆ; ಆದರೆ ಇಂದಿಗೆ ವಿರೋಧಿಗಳು ವಿಚಾರಧಾರೆ ಯುದ್ಧವನ್ನು ಆರಂಭಿಸಿದ್ದಾರೆ. ಅದರಲ್ಲಿ ಗೆಲ್ಲಲು ವೈಚಾರಿಕ ಯೋಧರ ಅವಶ್ಯಕತೆಯಿದೆ. ಈ ವೈಚಾರಿಕ ಯೋಧರು ಭಾರತೀಯ ಕಾನೂನುಗಳ ಅಧ್ಯಯನವನ್ನು ಮಾಡಿರುವವರು ಮತ್ತು ಸಂವಿಧಾನದ ತಿದ್ದುಪಡಿಗಳ ನಿಖರ ಅರ್ಥವನ್ನು ಹೇಳಿ ಹಿಂದೂಗಳ ಪರವನ್ನು ಕಾನೂನಾತ್ಮಕವಾಗಿ ಬಲಿಷ್ಠಗೊಳಿಸುವವರು ಇರುವರು. ಧರ್ಮಸಂಸ್ಥಾಪನೆಯ ಈ ಕಾರ್ಯದಲ್ಲಿ ಕೊಡುಗೆ ನೀಡಲು ಹಿಂದೂ ವಕೀಲರು ‘ಸಾಧಕ ವಕೀಲ’ರಾಗಬೇಕು. ಅವರು ವಿರೋಧಿಗಳ ‘ಈಕೋಸಿಸ್ಟಂ’ಗೆ ಪ್ರತ್ಯುತ್ತರಕ್ಕಾಗಿ ಸಾಧಕ ವಕೀಲ ಎಂದು ಹಿಂದೂ ರಾಷ್ಟ್ರ ಮತ್ತು ಹಿಂದೂತ್ವನಿಷ್ಠ ಸಂಘಟನೆಗಳ ಹಿಂದಿನ ‘ಈಕೋಸಿಸ್ಟಂ’ನ್ನು ನಿರ್ಮಿಸಲು ಅಗತ್ಯವಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರುದತ್ತ ಪಿಂಗಳೆ ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಆರನೇ ದಿನದಂದು ಹೇಳಿದರು. ಅವರು ‘ವಕೀಲ ಸಂಘಟನೆ: ಹಿಂದೂ ಕಾರ್ಯಕರ್ತರಿಗಾಗಿ ಆಧಾರಸ್ತಂಭ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.

ಸದ್ಗುರು ಡಾ. ಚಾರುದತ್ತ ಪಿಂಗಳೆ ಇವರು ಮಾತು ಮುಂದುವರೆಸುತ್ತಾ, “ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ವಕೀಲರ ಕೊಡುಗೆ ಅತೂಲನೀಯವಾಗಿದೆ. ಲೋಕಮಾನ್ಯ ಟಿಲಕ್, ಸರ್ದಾರ್ ವಲ್ಲಭಭಾಯಿ ಪಟೇಲ್, ಸ್ವಾತಂತ್ರ್ಯ ವೀರ ಸಾವರ್ಕರ್, ಲಾಲಾ ಲಜಪತ್ ರಾಯ್, ನ್ಯಾಯಮೂರ್ತಿ ರಾನಡೆ, ದೇಶಬಂಧು ಚಿತ್ತರಂಜನ್ ದಾಸ್ ಮುಂತಾದ ಅನೇಕ ವಕೀಲರು ಆ ಕಾಲದಲ್ಲಿ ಸ್ವತಂತ್ರ ಭಾರತದ ಹೋರಾಟಕ್ಕಾಗಿ ಪ್ರಯತ್ನಿಸಿದರು ಮತ್ತು ಭಾರತಕ್ಕೆ ಸ್ವಾತಂತ್ರ್ಯವನ್ನು ದೊರಕಿಸಿದರು. ಅದೇ ರೀತಿಯಲ್ಲಿ ನಮ್ಮ ಎಲ್ಲಾ ವಕೀಲರ ಸಂಘಟನೆ ಸಕ್ರಿಯವಾಗಿದ್ದು, ಅದರಲ್ಲಿ ಎಲ್ಲರ ಸಹಭಾಗ ಸಿಕ್ಕಿದರೇ, ಮುಂದಿನ ದಿನಗಳಲ್ಲಿ ಈ ಭೂಮಿಯಲ್ಲಿ ಹಿಂದೂಗಳಿಗೆ ಹಕ್ಕುಗಳನ್ನು ದೊರಕಿಸುವ ಹಿಂದೂ ರಾಷ್ಟ್ರವನ್ನು ನಿರ್ಮಾಣ ಮಾಡಬಹುದು.” ಎಂದು ಹೇಳಿದರು.