ಪ್ರತಿಯೊಂದು ರಾಜ್ಯದಲ್ಲಿಯೂ ಹಿಂದೂ ಚಿಂತಕರ ಸಂಘಟನೆಯಾಗುವುದು ಆವಶ್ಯಕ. – ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ನಾಲ್ಕನೇ ದಿನ (ಜೂನ್ 27)

ಕರ್ನಾಟಕದಲ್ಲಿ ಓರ್ವ ಹಿಂದೂ ಡಾಕ್ಟರ ಯುವತಿ ಮತ್ತು ಹಮಾಲ ಮುಸ್ಲಿಂ ಯುವಕನ ಅಂತರ್ಧರ್ಮೀಯ ವಿವಾಹದ ಮಾಹಿತಿಯು ವಿವಾಹ ನೋಂದಣಿ ಕಚೇರಿಯಿಂದ ಪತ್ರಿಕೆಗಳಲ್ಲಿ ಪ್ರಸಾರವಾಗಿತ್ತು. ಈ ವಿಷಯದ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ 2 ಗಂಟೆಯೊಳಗೆ ಮುಸ್ಲಿಂ ವ್ಯಕ್ತಿಯೊಬ್ಬ ಈ ವಿಷಯದಲ್ಲಿ ಕ್ರಮ ಕೈಕೊಳ್ಳುವಂತೆ ಪೊಲೀಸರಿಗೆ ಕರೆನೀಡಿದನು. ಕೆಲವು ಮುಸಲ್ಮಾನ ನ್ಯಾಯವಾದಿಗಳು ಈ ವಿಷಯದಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ವಿವಾಹ ನೊಂದಣಿ ಕಾರ್ಯಾಲಯದಿಂದ ಮಾಡಲಾಗುವ ಪ್ರಸಾರವನ್ನು ಮಾಡಬಾರದೆಂದು ಕೋರಿದರು. ಒಂದು ಸಂದೇಶದಿಂದ ಕೇವಲ 2 ದಿನಗಳಲ್ಲಿಯೇ ಮುಸಲ್ಮಾನರು ಇದಕ್ಕಾಗಿ ಒಂದುಗೂಡಿದರು. ಹಿಂದೂಗಳೂ ಈ ರೀತಿ ಸಂಪರ್ಕವ್ಯವಸ್ಥೆಯನ್ನು ನಿರ್ಮಾಣ ಮಾಡುವುದು ಆವಶ್ಯಕವಾಗಿದೆ. ಇದಕ್ಕಾಗಿ ಹಿಂದೂ ಚಿಂತಕರ ಸಂಘಟನೆ ಆವಶ್ಯಕವಾಗಿದೆ. ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ವಿವಿಧ ರಾಜ್ಯಗಳಲ್ಲಿ ಹಿಂದೂ ಚಿಂತಕರ ಸಂಘಟನೆ ಮಾಡಲಾಗುತ್ತಿದೆ. ಇದರಿಂದ ಹಿಂದೂಗಳ ಒತ್ತಡದ ಗುಂಪು ನಿರ್ಮಾಣವಾಗುವುದು, ಹಾಗೆಯೇ ಹಿಂದೂ ಧರ್ಮದ ಮೇಲಿನ ಸೈದ್ಧಾಂತಿಕ ದಾಳಿಗೆ ಸೂಕ್ತವಾಗಿ ಪ್ರತ್ಯುತ್ತರ ನೀಡಲು ಸಾಧ್ಯವಾಗುವುದು.