ದೇವಾಲಯಗಳನ್ನು ಸುಂದರಗೊಳಿಸಲು, ಅವು ಪ್ರವಾಸಿ ಸ್ಥಳಗಳಲ್ಲ, ತೀರ್ಥಕ್ಷೇತ್ರಗಳಾಗಿವೆ ! – ಅನಿಲ್ ಕುಮಾರ್ ಧೀರ್, ಸಂಯೋಜಕರು, ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್’, ಒಡಿಶಾ

ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಐದನೇ ದಿನ (ಜೂನ್ 28)

ಬೋಧಪ್ರದ ಸತ್ರ – ಹಿಂದೂ ರಾಷ್ಟ್ರಕ್ಕಾಗಿ ಸೈದ್ಧಾಂತಿಕ ಚಳುವಳಿ

ಅನಿಲ್ ಕುಮಾರ್ ಧೀರ್

ರಾಮನಾಥಿ, ಗೋವಾ – ಒಡಿಶಾದ ಪ್ರಸಿದ್ಧ ಜಗನ್ನಾಥ ದೇವಾಲಯವನ್ನು ಸುಂದರಗೊಳಿಸಲು 22 ಪುರಾತನ ಮಠಗಳನ್ನು ಕೆಡವಲಾಯಿತು. ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋದೆವು, ಆದರೆ ಅಲ್ಲಿ ನಮಗೇ 1 ಲಕ್ಷ ರೂಪಾಯಿ ದಂಡ ವಿಧಿಸಲಾಯಿತು. ಸುಂದರವಾಗಿರುವ ದೇವಾಲಯಗಳು, ಅವುಗಳನ್ನು ಏಕೆ ಸುಂದರಗೊಳಿಸಬೇಕು? ಪ್ಲಾಸ್ಟಿಕ್‌ ಮರಗಳು ಮತ್ತು ಕಂಬಗಳನ್ನು ನೆಡುವುದು ಅದೇನು ಪ್ರವಾಸಿ ತಾಣವಲ್ಲ, ಅದು ತೀರ್ಥಕ್ಷೇತ್ರವಾಗಿದೆ. ಹಣ್ಣು ಮಾರಾಟ ಮಾಡುವವರು, ಹೂ ಮಾರುವವರು, ಹೊರಗೆ ಕುಳಿತುಕೊಳ್ಳುವ ಬಾಬಾಗಳು ಇವೆಲ್ಲವೂ ದೇವಾಲಯಗಳ ‘ನರನ್ಯಾಕ್ಯುಲರ್ ಸಿಸ್ಟಮ್’ (ಪರಸ್ಪರ ಅವಲಂಬಿತ ಸ್ಥಳೀಯ ವ್ಯವಸ್ಥೆ)ಯ ಭಾಗವಾಗಿದೆ. ಅವುಗಳನ್ನು ತೆಗೆದರೆ ಹೇಗೆ ? ಜಗನ್ನಾಥ ದೇವಾಲಯವು 2 ರತ್ನ ಭಂಡಾರಗಳಿವೆ, ಅದರಲ್ಲಿ ಒಂದನ್ನು ಕಳೆದ 46 ವರ್ಷಗಳಿಂದ ತೆರೆಯಲಿಲ್ಲ. ಅಲ್ಲಿ ಕುಸಿತ ಉಂಟಾಗಿದೆ. ಈಗ ಚುನಾಯಿತ ಸರ್ಕಾರದಿಂದ ರಥಯಾತ್ರೆಯ ಸಂದರ್ಭದಲ್ಲಿ ಕೇವಲ 7 ದಿನಗಳಲ್ಲಿ ಈ ಕಾಮಗಾರಿಯನ್ನು ದುರಸ್ತಿ ಮಾಡಲು ಹೇಳಿದೆ. ವಾಸ್ತವವಾಗಿ ಇದು 7 ದಿನಗಳಲ್ಲಿ ಸಾಧ್ಯವಿಲ್ಲ. ನಮ್ಮ ದೃಷ್ಟಿಯಲ್ಲಿ, ದೇವಾಲಯದ ವಾಸ್ತುಶಿಲ್ಪವನ್ನು ಕ್ರಮವಾಗಿ ಇಡುವುದು ಮುಖ್ಯ; ಹಣ ಸಿಗದಿದ್ದರೂ ಪರವಾಗಿಲ್ಲ ಎಂದು ವೈಶ್ವಿಕ ಹಿಮದೂ ರಾಷ್ಟ್ರ ಅಧಿವೇಶನದ ‘ಪುರಾತತ್ವ ಇಲಾಖೆಯಿಂದ ರಕ್ಷಿಸಲ್ಪಟ್ಟ ದೇವಾಲಯಗಳನ್ನು ಸಂರಕ್ಷಿಸಲು ಭಾರತ ಸರ್ಕಾರದಿಂದ ನಿರೀಕ್ಷೆ’ ಈ ಸತ್ರದಲ್ಲಿ ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಆ್ಯಂಡ್ ಕಲ್ಚರಲ್ ಹೆರಿಟೇಜ್’ನ ಸಂಯೋಜಕ ಶ್ರೀ. ಅನಿಲ ಕುಮಾರ ಧೀರ್ ಇವರು ಹೇಳಿದರು.

ಶ್ರೀ. ಧೀರ್ ತಮ್ಮ ಮಾತನ್ನು ಮುಂದುವರೆಸಿ, ಯಾವ ಆಧಾರದ ಮೇಲೆ ನಾವು ವಿಶ್ವಗುರುವಾಗಲಿದ್ದೇವೆ ? ಮೊಹೆಂಜೋದಾಡೋ, ಹರಪ್ಪಾ ಸಂಶೋಧನೆಯ ನಂತರ ಯಾವುದೇ ಪ್ರಮುಖ ಸಂಶೋಧನೆಗಳು ನಡೆಯಲಿಲ್ಲ. ಸಂಶೋಧನೆಗೆ ಉತ್ಖನನ ಮಾಡುವ ಅಗತ್ಯವಿಲ್ಲ, ಇತರ ಪ್ರದೇಶಗಳು ನಮ್ಮ ಪ್ರಾಚೀನ ಸಂಸ್ಕೃತಿಯ ಅನೇಕ ಪುರಾವೆಗಳು ಸಿಗುತ್ತವೆ; ಆದರೆ ಅದರ ಬಗ್ಗೆ ಯಾವುದೇ ಸಂಶೋಧನೆ ಆಗುವುದಿಲ್ಲ. ಈಗ ವೈಜ್ಞಾನಿಕ ಪ್ರಗತಿಯಿಂದಾಗಿ, ಜನರ ಜೀನ್‌ಗಳು ಯಾವುದು ಎಂದು ತಿಳಿಯುತ್ತದೆ. ಅದರಿಂದ ಪುರಾತನ ಕಾಲದಿಂದಲೂ ಜನರು ಇಲ್ಲಿಂದ ಹೊರಟು ಹೋಗಿರುವುದು ಭವಿಷ್ಯದಲ್ಲಿ ಕಾಣಬಹುದಾಗಿದೆ. ಇದನ್ನು ‘ರಿವರ್ಸ್ ಇನ್ವೇಷನ್'(ವಿರುದ್ಧ ಶೋಧನೆ) ಎಂದು ಕರೆಯಲಾಗುವುದು. ಈ ಬಗ್ಗೆ ಸಂಶೋಧನೆ ಹೊರಬಿದ್ದರೆ ಮುಂದಿನ ದಿನಗಳಲ್ಲಿ ಪುನರ್ಲೇಖನ ಮಾಡುವ ಸಮಯ ಬರುವುದು.

37 ಟನ್ ತೂಕದ ಕಲ್ಲು ಒಡಿಶಾದ ಸೂರ್ಯ ಮಂದಿರದ ತುದಿಗೆ ಹೇಗೆ ಹೋಗಿದ್ದು ? ಇದಕ್ಕೆ ಉತ್ತರ ಇನ್ನೂ ಸರಿಯಾಗಿ ಸಿಕ್ಕಿಲ್ಲ. ಆ ನಿರ್ಮಾಣದಲ್ಲಿ 1 ಇಂಚು ತಪ್ಪಿದ್ದರೂ ಇಡೀ ನಿರ್ಮಾಣವೇ ತಪ್ಪಾಗುತ್ತಿತ್ತು. ಅಂತಹ ದೇವಾಲಯಗಳನ್ನು ಹೇಗೆ ನಿರ್ಮಿಸಲಾಯಿತು? ಈ ರೀತಿಯ ದೇವಾಲಯ ಸಂಸ್ಕೃತಿಯ ಬಗ್ಗೆ ಸಂಶೋಧನೆಯ ಅಗತ್ಯವಿದೆ ಎಂದು ಹೇಳಿದರು.

‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್’ ಮೂಲಕ ಶ್ರೀ. ಧೀರ್ ಇವರು ಮಾಡುತ್ತಿರುವ ಕಾರ್ಯ

1. ‘ಇಂಡಿಯನ್ ನ್ಯಾಶನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್ (INTAC) ಈ ಸಂಸ್ಥೆಗೆ ಕೇಂದ್ರ ಸರ್ಕಾರದಿಂದ 100 ಕೋಟಿ ರೂಪಾಯಿಗಳನ್ನು ನೀಡಿ ಸೆಂಟರ್ ಫಾರ್ ಎಕ್ಸಲೆನ್ಸ್ ಎಂದು ಸ್ಥಾನವನ್ನು ನಿಡಿದೆ, ಇನ್ನೂ 100 ಕೋಟಿ ರೂಪಾಯಿ ನೀಡಲಿದೆ. ಭಾರತೀಯ ಪುರಾತತ್ವ ಸಮೀಕ್ಷೆಯ ನಂತರ ‘ಇಂಡಿಯನ್ ನ್ಯಾಷನಲ್ ಟ್ರಸ್ಟ್ ಫಾರ್ ಆರ್ಟ್ ಅಂಡ್ ಕಲ್ಚರಲ್ ಹೆರಿಟೇಜ್’ ಎರಡನೇ ಸಂಸ್ಥೆಯಾಗಿದೆ.

2. ಒಡಿಶಾದಲ್ಲಿ, ಪುರಾತತ್ವ ಇಲಾಖೆಯ ಅಡಿಯಲ್ಲಿ 300 ದೇವಾಲಯಗಳನ್ನು ರಕ್ಷಿಸಲಾಗಿದೆ. 100 ವರ್ಷಗಳ ಹಿಮದಿನ ದೇವಾಲಯಗಳು ಪುರಾತತ್ವ ದ ವ್ಯಾಪ್ತಿಗೆ ಬರುತ್ತದೆ. ಒಡಿಶಾದ 17 ಜಿಲ್ಲೆಗಳಲ್ಲಿ 300 ವರ್ಷಗಳಷ್ಟು ಹಳೆಯದಾದ 6 ಸಾವಿರದ 500 ದೇವಸ್ಥಾನಗಳು ಪತ್ತೆಯಾಗಿದ್ದು, ಉಳಿದ 13 ಜಿಲ್ಲೆಗಳಲ್ಲಿ ಶೀಧಕಾರ್ಯ ನಡೆಸಿದರೆ 15 ಸಾವಿರ ದೇವಸ್ಥಾನಗಳು ಸಹಜವಾಗಿ ಸಿಗಬಹುದು.

3. ಛತ್ತೀಸ್‌ಗಢದಿಂದ ಮಹಾನದಿ ಒಡಿಶಾ ಪ್ರವೇಶಿಸುತ್ತದೆ. ಅದರಲ್ಲಿ ಅರ್ಧದಷ್ಟು ಅಂದರೆ 400 ಕಿ.ಮೀ.ಎರಡೂ ದಡಗಳಲ್ಲಿ ಎತ್ತಿನ ಗಾಡಿಯಲ್ಲಿ ಸಮೀಕ್ಷೆ ನಡೆಸಿದೆವು. ಕಳೆದ 80 ವರ್ಷಗಳಿಂದ ಈ ನದಿಯಲ್ಲಿ 63 ದೇವಾಲಯಗಳು ಮುಳುಗಡೆಯಾಗಿವೆ. ‘ಕನಿಷ್ಠ 2-3 ದೇವಸ್ಥಾನಗಳನ್ನಾದರೂ ಎತ್ತಿ ಪುನರ್ ನಿರ್ಮಾಣ ಮಾಡಿ’ ಎಂದು ಬೇಡಿಕೆ ಇಟ್ಟಿದ್ದೆವು.

4. ಭಾರತೀಯ ಪುರಾತತ್ವ ಸಮೀಕ್ಷೆಯು ಹಳೆಯ ಮತ್ತು ಸಮರ್ಥ ಜನರ ಸರ್ಕಾರಿ ಸಂಸ್ಥೆಯಾಗಿದೆ. ಅವರು ಪ್ರಪಂಚದಾದ್ಯಂತ ಅನೇಕ ಕೆಲಸಗಳನ್ನು ಮಾಡಿದ್ದಾರೆ; ಆದರೆ ಪ್ರಸ್ತುತ ತಾಜ್ ಮಹಲ್, ಕುತುಬ್ ಮಿನಾರ್ ಇತ್ಯಾದಿಗಳು ನಿಧಿಯನ್ನು ಸ್ವೀಕರಿಸುತ್ತಿರುವುದರಿಂದ ಅದರತ್ತ ಗಮನವಿದೆ. ಇಂದು ಬಂಗಾಳದಲ್ಲಿ, ನಾಶವಾದ (ಉಳಿದಿರುವ) ದೇವಾಲಯಗಳ ಸಂಖ್ಯೆಯು ಹೊಸ ದೇವಾಲಯಗಳಿಗಿಂತ ಸುಮಾರು ಐದನೇ ಒಂದು ಭಾಗದಷ್ಟು ಹೆಚ್ಚಾಗಿದೆ. ಅಲ್ಲಿಗೆ ಯಾರೂ ಹೋಗದಿದ್ದರೂ ಹಳೆ ಮಸೀದಿಗಳನ್ನು ಸರಕಾರದ ಹಣದಲ್ಲಿ ನಿರ್ವಹಣೆ ಮಾಡಲಾಗುತ್ತಿದೆ. ಇಂದು ಪುರಾತನ ಹಿಂದೂ ದೇವಾಲಯಗಳನ್ನು ನೋಡಲು ಹಣ ಪಾವತಿಸಬೇಕಾಗುತ್ತದೆ. ನಮ್ಮ ಪೂರ್ವಜರ ಕೊಡುಗೆಯನ್ನು ನಾವು ಮುಂದಿನ ಪೀಳಿಗೆಗೆ ನೀಡಬೇಕು.

5. ಇಂದು ಕಳುವಾದ ಅನೇಕ ಪುರಾತನ ವಿಗ್ರಹಗಳನ್ನು ಪುನಃ ಪಡೆಯಲಾಗಿದೆ, ಜಿಲ್ಲಾಧಿಕಾರಿ, ಪೋಲೀಸ್ ಬಳಿ ಇವೆ; ಕಾರಣ ಆ ಮೂರ್ತಿಗಳು ಎಲ್ಲಿದ್ದು ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ; ಹೀಗಾಗಿ ಪ್ರತಿ ದೇವಸ್ಥಾನದಲ್ಲಿರುವ ವಿಗ್ರಹಗಳ ಎಲ್ಲ ಮಾಹಿತಿಗಳನ್ನು ದಾಖಲಿಸುವ ಕಾರ್ಯ ಆರಂಭಿಸಿದ್ದೇವೆ.