ಬಿಜೆಪಿ ವಕ್ತಾರ ಮಾಧವ್ ಭಂಡಾರಿ ಅವರಿಗೆ ‘ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಸನ್ಮಾನ

ಶ್ರೀ. ಮಾಧವ್ ಭಂಡಾರಿ (ಬಲಭಾಗ) ಅವರ ಸತ್ಕಾರ ಮಾಡುತ್ತಿರುವಾಗ, ಶ್ರೀ. ಸುನಿಲ್ ಘನವಟ

ವಿದ್ಯಾಧಿರಾಜ್ ಸಭಾಂಗಣ – ಬಿಜೆಪಿಯ ಮಹಾರಾಷ್ಟ್ರ ರಾಜ್ಯ ವಕ್ತಾರ ಶ್ರೀ. ಮಾಧವ್ ಭಂಡಾರಿ ಅವರು ಜೂನ್ 28 ರಂದು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ರಾಜ್ಯ ಸಂಘಟಕರಾದ ಶ್ರೀ. ಸುನೀಲ್ ಘನವಟ ಇವರು ಶಾಲು ಹೊದಿಸಿ, ಶ್ರೀಫಲ ನೀಡಿ ಗೌರವಿಸಿದರು. ಸ್ವಾಗತಕ್ಕೆ ಉತ್ತರಿಸಿದ ಶ್ರೀ. ಭಂಡಾರಿ ಇವರು, ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ಹಿಂದುತ್ವನಿಷ್ಠರು ಹೆಚ್ಚಿನ ಸಂಖ್ಯೆಯಲ್ಲಿದ್ದು, ಹಿಂದೂ ರಾಷ್ಟ್ರ ಸ್ಥಾಪನೆಯ ಬಗ್ಗೆ ಚಿಂತನೆ ನಡೆಸುತ್ತಿದ್ದಾರೆ’. ಇದನ್ನು ನೋಡಿ ಸಂತೋಷವಾಯಿತು. ಇದರಲ್ಲಿ ನಾವೆಲ್ಲರೂ ಪ್ರಗತಿ ಸಾಧಿಸುವುದರಲ್ಲಿ ಸಂದೇಹವಿಲ್ಲ.” ಎಂದು ಹೇಳಿದರು.