ರಾಂಪುರ (ಉತ್ತರ ಪ್ರದೇಶ)ದಲ್ಲಿ ಮದರಸಾದ ಮಕ್ಕಳಿಂದ ರಾಮಾಯಣ ಪಾರ್ಕ್ ನಲ್ಲಿನ ಮಾರುತಿರಾಯನ ವಿಗ್ರಹ ಧ್ವಂಸ !

ರಾಂಪುರ (ಉತ್ತರ ಪ್ರದೇಶ) – ಇಲ್ಲಿನ ರಾಮಾಯಣ ಉದ್ಯಾನವನದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಹನುಮಾನ್ ವಿಗ್ರಹವನ್ನು ಮದರಸಾದ ಮಕ್ಕಳು ಧ್ವಂಸಗೊಳಿಸಿದ್ದಾರೆ. ಈ ಘಟನೆಯ ಮಾಹಿತಿ ತಿಳಿದ ಕೂಡಲೇ ಹಿಂದುತ್ವನಿಷ್ಠ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ಆರಂಭಿಸಿದರು. ಈ ವೇಳೆ ಮುಸ್ಲಿಮರೂ ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದಾಗ ಉದ್ವಿಗ್ನ ಸ್ಥಿತಿ ನಿರ್ಮಾಣವಾಯಿತು. ಮಾಹಿತಿ ಪಡೆದ ಪೊಲೀಸರು ಮತ್ತು ಸ್ಥಳೀಯ ಶಾಸಕ ಆಕಾಶ್ ಸಕ್ಸೇನಾ ಕೂಡ ಅಲ್ಲಿಗೆ ತಲುಪಿದರು. ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಸಕ್ಸೇನಾ ಆಗ್ರಹಿಸಿದರು.

1. ಘಟನೆಗೆ ಸಂಬಂಧಿಸಿದಂತೆ ಶಾಸಕ ಆಕಾಶ್ ಸಕ್ಸೇನಾ ಮಾತನಾಡಿ, ರಾಮಾಯಣ ಉದ್ಯಾನವನದಲ್ಲಿರುವ ಶ್ರೀ ಹನುಮಂತನ ಪ್ರತಿಮೆಯನ್ನು ಧ್ವಂಸಗೊಳಿಸಿದ್ದಕ್ಕೆ ರಾಂಪುರ ಅಭಿವೃದ್ಧಿ ಪ್ರಾಧಿಕಾರವೇ ಹೊಣೆಯಾಗಿದೆ; ಏಕೆಂದರೆ ಪ್ರಾಧಿಕಾರವು 4 ವರ್ಷಗಳ ಹಿಂದೆ ಈ ಉದ್ಯಾನವನ್ನು ನಿರ್ಮಿಸಿತ್ತು. ಈ ವಿಗ್ರಹದ ಸಂರಕ್ಷಣೆಗೂ ಪ್ರಾಧಿಕಾರ ವ್ಯವಸ್ಥೆ ಮಾಡಬೇಕಿತ್ತು; ಆದರೆ ಅದು ಮಾಡಲಿಲ್ಲ. ಆದ್ದರಿಂದ ದುಷ್ಕರ್ಮಿಗಳು ಈ ಅಹಿತಕರ ಘಟನೆ ಮಾಡಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಯೊಂದಿಗೆ ಮಾತನಾಡಿ ಮೂರ್ತಿ ರಕ್ಷಣೆಗೆ ಖಠಿಣ ವ್ಯವಸ್ಥೆ ಮಾಡುವಂತೆ ಕೋರಲಾಗಿದೆ.

2. ಘಟನೆಯ ಬಗ್ಗೆ ಮಾಹಿತಿ ಪಡೆದ ನಂತರ ನಾವು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದೇವೆ ಎಂದು ಅಲಿಗಢದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಅತುಲ್ ಶ್ರೀವಾಸ್ತವ ತಿಳಿಸಿದ್ದಾರೆ. ಈ ಕುರಿತು ತನಿಖೆ ನಡೆಸಲಾಗುತ್ತಿದೆ. ದೂರು ಸ್ವೀಕರಿಸಿದ ನಂತರ ಪ್ರಕರಣ ದಾಖಲಿಸಿಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

ಮದರಸಾಗಳಿಗೆ ಸರ್ಕಾರ ನೂರಾರು ಕೋಟಿ ರೂಪಾಯಿ ಸಹಾಯಧನ ನೀಡಿ ಸಾಕಿ ಹಿಂದೂಗಳ ಮೇಲೆಯೇ ಆಘತ ಮಾಡುತ್ತಿದೆ ಎಂಬುದನ್ನು ಗಮನಿಸಿ!

ದೇಶದಲ್ಲಿನ ಮದರಸಾಗಳು ಬಂದ್ ಮಾಡಲು ಈಗ ಹಿಂದೂಗಳು ದೊಡ್ಡ ಪ್ರಮಾಣದಲ್ಲಿ ಚಳುವಳಿ ಮಾಡುವುದು ಆವಶ್ಯಕವಾಗಿದೆ !