ರಾಷ್ಟ್ರವನ್ನು ನಾಶಮಾಡಲು ನೋಡುತ್ತಿರುವ ಶಕ್ತಿಗಳ ವಿರುದ್ಧ ಗಮನವನ್ನು ಕೇಂದ್ರಿಕರಿಸಿ ! – ವಿನೋದ ಕುಮಾರ, ಸಂಪಾದಕರು, ‘ಸ್ಟ್ರಿಂಗ್ ರಿವೀಲ್ಸ್’, ಕರ್ನಾಟಕ

ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ನಾಲ್ಕನೇ ದಿನ (ಜೂನ್ 27) –  ಬೋಧಪ್ರದ ಸತ್ರ

OTT ಮತ್ತು ಹಿಂದಿ ಚಲನಚಿತ್ರೋದ್ಯಮ

ಭಾರತವನ್ನು ನಾಶ ಮಾಡುವುದೇ ಕಾಂಗ್ರೆಸ್‌ನ ಕೆಲಸವಾಗಿದೆ. ವಿಶ್ವದಲ್ಲಿ ಭಾರತವನ್ನು ಅಪಖ್ಯಾತಿಗೊಳಿಸುವುದು ಅವರ ಸಂಚಾಗಿದೆ. ಸುಳ್ಳು ಕಥೆಗಳನ್ನು ತಯಾರಿಸುವ ಮೂಲಕ ಭಾರತವನ್ನು ಒಡೆಯುವ ಬಗ್ಗೆ ಮಾತನಾಡುತ್ತಿದ್ದಾರೆ. ಇದಕ್ಕಾಗಿ, ಈ ಜನರು ಸಾಮಾಜಿಕ ಪ್ರಸಾರಮಾಧ್ಯಮವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡರು. ರಾಷ್ಟ್ರವನ್ನು ನಾಶಮಾಡಲು ಬಯಸುವ ಶಕ್ತಿಗಳ ವಿರುದ್ಧ ಗುರಿಯನ್ನು ಕೇಂದ್ರಿಕರಿಸುವ ಆವಶ್ಯಕತೆ ಇದೆ, ಎಂದು ‘ಸ್ಟ್ರಿಂಗ್ ರೆವೆಲ್ಸ್’ ನ ಸಂಪಾದಕರಾದ ಶ್ರೀ. ವಿನೋದ ಕುಮಾರ ಇವರು ಹೇಳಿದರು.

ಶ್ರೀ. ವಿನೋದ ಕುಮಾರ ಇವರು ಮಾತು ಮುಂದುವರೆಸುತ್ತಾ, ಭಾರತ ಸರ್ಕಾರವು ‘ಸಿಎಎ’, ‘ಎನ್‌ಆರ್‌ಸಿ’ ಮತ್ತು ‘ಅಗ್ನಿಪಥ್’ ಯೋಜನೆಗಳನ್ನು ಜಾರಿಗೆ ತಂದಾಗ, ಈ ಜನರು ದೇಶದಲ್ಲಿ ಗಲಭೆಗಳನ್ನು ಸೃಷ್ಟಿಸಿದರು. ಭಾರತದಲ್ಲಿ ಅವ್ಯವಸ್ಥೆ ಸೃಷ್ಟಿಸುವುದು ಅಂತಾರಾಷ್ಟ್ರೀಯ ಪಿತೂರಿಯ ಭಾಗವಾಗಿದೆ. ದೇಶದ ನೀತಿಗಳ ವಿರುದ್ಧ ದೇಶವಿರೋಧಿ ಶಕ್ತಿಗಳು ಬೀದಿಗಿಳಿದು ಗಲಭೆ ನಡೆಸುತ್ತಿವೆ. ಈ ಶಕ್ತಿಗಳನ್ನು ಎದುರಿಸಲು ರಾಷ್ಟ್ರನಿಷ್ಠರು ಕಡಿಮೆ ಬೀಳುತ್ತಿದ್ದಾರೆ. ಜಾರ್ಜ್ ಸೊರೊಸ್ ಅವರಂತಹವರು ಸುಳ್ಳು ಕಥೆಗಳನ್ನು ಸೃಷ್ಟಿಸುವ ಮೂಲಕ ಚುನಾವಣಾ ಫಲಿತಾಂಶವನ್ನು ಬುಡಮೇಲೆ ಮಾಡಿದರು. ಹಿಂದೂಗಳು ತಮ್ಮ ಧ್ವನಿ ಎತ್ತಲು ಪ್ರಯತ್ನಿಸಬೇಕು. ಇದಕ್ಕಾಗಿ ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.