ಹಿಂದೂಗಳಿಲ್ಲದೆ ಭಾರತ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಮತ್ತು ಭಾರತವಿಲ್ಲದೆ ಹಿಂದೂಗಳು ಸುರಕ್ಷಿತವಾಗಿಲ್ಲ ! – ಕರ್ನಲ್ ಆರ್.ಎಸ್.ಎನ್. ಸಿಂಗ್, ರಕ್ಷಣಾ ತಜ್ಞ

ವೈಶ್ವಿಕ ಹಿಂದೂ ರಾಷ್ಟ್ರ ಉತ್ಸವದ ನಾಲ್ಕನೇ ದಿನ (ಜೂನ್ 27) – ಬೋಧಪ್ರದ ಸತ್ರ

ಹಿಂದೂ ರಾಷ್ಟ್ರಕ್ಕಾಗಿ ಸೈದ್ಧಾಂತಿಕ ಚಳುವಳಿ

ಕರ್ನಲ್ ಆರ್.ಎಸ್.ಎನ್. ಸಿಂಗ್

ವಿದ್ಯಾಧಿರಾಜ್ ಸಭಾಂಗಣ – ಸನಾತನದ ಸಮರ್ಪಣೆಯಿಂದಾಗಿ ಅಖಿಲ ಭಾರತ ಹಿಂದೂ ರಾಷ್ಟ್ರ ಅಧಿವೇಶನ ನಡೆಯುತ್ತಿದ್ದು, ಈ ಅಧಿವೇಶನದಿಂದ ಇಂದಿಗೂ ರಾಷ್ಟ್ರ ಉಳಿದುಕೊಂಡಿದೆ. ಈ ಸಮರ್ಪಣೆಯಿಂದಾಗಿ ಬಿಜೆಪಿ ಈ ವರ್ಷ ಲೋಕಸಭೆಯಲ್ಲಿ 240 ಸ್ಥಾನಗಳನ್ನು ಗೆದ್ದಿದೆ. ಹಿಂದೂಗಳಿಲ್ಲದೆ ಭಾರತ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಮತ್ತು ಭಾರತವಿಲ್ಲದೆ ಹಿಂದೂಗಳು ಸುರಕ್ಷಿತವಾಗಿಲ್ಲ.

ಲೋಕಸಭೆ ಚುನಾವಣೆ 2024 ಒಂದು ಯುದ್ಧವಾಗಿತ್ತು. ಈ ಯುದ್ಧದಲ್ಲಿ ನಾವು ರಕ್ತದಲ್ಲಿ ಮಿಂದಿದ್ದೇವೆ; ಆದರೆ ಅಂತಿಮವಾಗಿ ಗೆಲುವು ನಮ್ಮದೇ ಎಂದು ರಕ್ಷಣಾ ತಜ್ಞ ಕರ್ನಲ್ ಆರ್.ಎಸ್.ಎನ್. ಸಿಂಗ್ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ನಾಲ್ಕನೇ ದಿನದಂದು ‘ರಾಷ್ಟ್ರದ ಮೇಲಾಗುವ ಆಘಾತ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.