ವೈಶ್ವಿಕ ಹಿಂದು ರಾಷ್ಟ್ರ ಮಹೋತ್ಸವದ ಮೂರನೇ ದಿನ (೨೬ ಜೂನ್) : ಭಾರತೀಯ ಶಿಕ್ಷಣಪದ್ಧತಿ
ಭಾರತವು ಒಂದು ಆಧ್ಯಾತ್ಮಿಕ ದೇಶವಾಗಿದೆ. ಇಲ್ಲಿನ ಕಾರ್ಯ ಈಶ್ವರೀ ಶಕ್ತಿಯಿಂದ ನಡೆಯುತ್ತಿದೆ. ಇಲ್ಲಿ ಒಂದು ದಿವ್ಯ ಸಂಕಲ್ಪ ಕಾರ್ಯನಿರತವಾಗಿದೆ. ಭಗವಾನ ಶ್ರೀಕೃಷ್ಣನು ಯಜ್ಞದ ಮೂಲಕ ಮನುಷ್ಯನಿಗೆ ಉತ್ತಮ ಜೀವನ ಸಾಗಿಸುವ ವ್ಯವಸ್ಥೆಯನ್ನು ನೀಡಿದನು. ಭಗವಾನ ಶ್ರೀಕೃಷ್ಣನು ವೇದಗಳ ಜ್ಞಾನವನ್ನು ಭಗವದ್ಗೀತೆಯ ಮೂಲಕ ಎಲ್ಲರವರೆಗೆ ತಲುಪಿಸಿದ್ದಾನೆ. ಯಜ್ಞ, ದಾನ ಮತ್ತು ತಪಗಳ ಮಾಧ್ಯಮದಿಂದ ಮನುಷ್ಯನು ಈಶ್ವರನೊಂದಿಗೆ ಜೋಡಿಸಲ್ಪಡಬಹುದು. ಆ ಮೂಲಕ ಮನುಷ್ಯನು ಆಧ್ಯಾತ್ಮಿಕ ಉನ್ನತಿಯನ್ನು ಮಾಡಿಕೊಳ್ಳಬಹುದು; ಆದರೆ ಮನುಷ್ಯನು ಈ ಮೂಲವನ್ನು ಬಿಟ್ಟು ಜೀವಿಸತೊಡಗಿದರೆ, ಅವನು ಜೀವನದಲ್ಲಿ ದಾರಿ ತಪ್ಪಬಹುದು. ಆಧ್ಯಾತ್ಮಿಕ ಶಕ್ತಿಯ ಬಲದಿಂದ ನಡೆಯುವ ಕಾರ್ಯ ಹೆಚ್ಚು ವೇಗದಿಂದ ಬೆಳೆಯುತ್ತದೆ. ಈಶ್ವರನನ್ನು ಸ್ಮರಿಸುತ್ತಾ ಮಾಡಿದ ಕಾರ್ಯದ ಅಭ್ಯುದಯವಾಗುತ್ತದೆ ಎಂದು, ಮಧ್ಯಪ್ರದೇಶದ ಮಹೇಶ್ವರದಲ್ಲಿರುವ ಸಂವಿತ್ ಗಂಗಾಯನ ಟ್ರಸ್ಟ್, ಹರಿದ್ವಾರದ ಟ್ರಸ್ಟಿ ಸ್ವಾಮೀ ಸಮಾನಂದಗಿರಿ ಮಹಾರಾಜರು ಇಲ್ಲಿ ಉದ್ಗರಿಸಿದರು.