Kejriwal Arrested by CBI: ಅಬಕಾರಿ ನೀತಿ ಹಗರಣ: ‘ಇಡಿ’ ನಂತರ ‘ಸಿಬಿಐ’ನಿಂದ ಕೇಜ್ರಿವಾಲ್ ಬಂಧನ!

ನವದೆಹಲಿ – ದೆಹಲಿ ಸರ್ಕಾರದ ಮದ್ಯ ನೀತಿ ಹಗರಣದ ಪ್ರಕರಣದಲ್ಲಿ ದೆಹಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಸಮಸ್ಯೆಗಳು ಇನ್ನೂ ಹೆಚ್ಚಾಗಿವೆ. ಜಾರಿ ನಿರ್ದೇಶನಾಲಯದ (‘ಇಡಿ’) ಬಂಧನದಲ್ಲಿರುವ ಕೇಜ್ರಿವಾಲ್ ಅವರನ್ನು ಈಗ ಸಿಬಿಐ ಬಂಧಿಸಿದೆ.

ಕೇಜ್ರಿವಾಲ್ ಅವರ ವಕೀಲ ಚೌಧರಿ ಅವರು ಈ ಬಂಧನವನ್ನು ವಿರೋಧಿಸಿದರು ಮತ್ತು ಈ ಬಂಧನವು ಸಂವಿಧಾನದ ಕಲಂ 21 ನೇಯ (ವಿಧಿಯ) ಉಲ್ಲಂಘನೆಯಾಗಿದೆ ಎಂದು ಹೇಳಿದರು. ಕೇಜ್ರಿವಾಲ್ ಅವರನ್ನು ಸಿಬಿಐ ಬಂಧಿಸಿರುವ ವಾರ್ತೆ ನಮಗೆ ಪ್ರಸಾರ ಮಾಧ್ಯಮಗಳ ಮೂಲಕ ತಿಳಿಯಿತು. ಆದ್ದರಿಂದ ನಾವು ಕೇಜ್ರಿವಾಲ್ ಅವರ ಬಂಧನಕ್ಕಾಗಿ ಸಿಬಿಐ ಸಲ್ಲಿಸಿರುವ ಅರ್ಜಿಯನ್ನು ನಮಗೂ ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದ್ದೇವೆ ಎಂದರು.

ಕೆಲವು ದಿನಗಳ ಹಿಂದೆ, ಮದ್ಯ ನೀತಿ ಹಗರಣದ ಪ್ರಕರಣದಲ್ಲಿ ಕೇಜ್ರಿವಾಲ್‌ಗೆ ದೆಹಲಿ ಸೆಷನ್ ನ್ಯಾಯಾಲಯವು ಜಾಮೀನು ನೀಡಿತ್ತು; ಆದರೆ ಇಡಿ ಉಚ್ಚನ್ಯಾಯಾಲಯದ ಮೊರೆ ಹೋಗಿ ಅವರ ಜಾಮೀನಿನ ಮೇಲೆ ತಡೆ ಕೋರಿತ್ತು. ಇಡಿ ಮನವಿ ವಿರುದ್ಧ ಕೇಜ್ರಿವಾಲ್ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದಾಗ, ಉಚ್ಚ ನ್ಯಾಯಾಲಯವೂ ಕೂಡ ಅವರ ಮನವಿಯನ್ನು ತಿರಸ್ಕರಿಸಿತು.