ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನ – ಮೂರನೇ ದಿನ (ಜೂನ್ 26): ಉದ್ಬೋದನಾ ಸತ್ರ – ಹಿಂದೂ ಇಕೊಸಿಸ್ಟಮ್
ವಿದ್ಯಾಧಿರಾಜ ಸಭಾಂಗಣ – ಜಗತ್ತಿನ 57 ಮುಸ್ಲಿಂ ರಾಷ್ಟ್ರಗಳು ತಮ್ಮ ಸಂವಹನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿವೆ. ಭಾರತದಲ್ಲಿ ಅಲ್ಪಸಂಖ್ಯಾತರ ಸಂಪರ್ಕ ವ್ಯವಸ್ಥೆ ಇದೆ. ಈ ಸಂವಹನ ವ್ಯವಸ್ಥೆಯಿಂದಾಗಿ ಮುಸ್ಲಿಮರು ಹಿಂದೂಗಳಿಗೆ ತಲೆನೋವಾಗಿ ಪರಿಣಮಿಸಿದೆ. ಹಿಂದೂಗಳೂ ಅಂತಹ ಸಂವಹನ ವ್ಯವಸ್ಥೆಯನ್ನು ರೂಪಿಸಬೇಕು. ಹಿಂದೂ ಬಹುಸಂಖ್ಯಾತ ಪ್ರದೇಶಗಳಲ್ಲಿ ಹಿಂದೂ ಮೆರವಣಿಗೆಗಳ ಮೇಲೆ ಕಟ್ಟರವಾದಿಗಳು ದಾಳಿ ನಡೆಸುತ್ತಿದ್ದಾರೆ. ಹಿಂದೂ ಧರ್ಮದ ಮೇಲೆ ದಾಳಿ ನಡೆಯುತ್ತಿದೆ. ಇದನ್ನೆಲ್ಲ ತಡೆಯಲು ಹಿಂದೂಗಳು ಸಣ್ಣ-ಸಣ್ಣ ಪ್ರದೇಶಗಳಲ್ಲಿ ಸಂವಹನ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಬೇಕು. ಇದಕ್ಕಾಗಿ ಪ್ರತಿಯೊಬ್ಬ ಹಿಂದೂ ತನ್ನ ಮನೆ ಬಾಗಿಲಿನ ಹಿಂದೆ ಆಸ್ಪತ್ರೆಗಳು, ಅಗ್ನಿಶಾಮಕ ದಳ, ಸ್ಥಳೀಯ ಪೊಲೀಸ್ ಠಾಣೆ, ಸ್ಥಳೀಯ ಹಿಂದುತ್ವನಿಷ್ಠ ಜನಪ್ರತಿನಿಧಿಗಳು, ಹಿಂದುತ್ವನಿಷ್ಠ ಸಂಘಟನೆಗಳ ಪ್ರತಿನಿಧಿಗಳ ಸಂಪರ್ಕ ಪಟ್ಟಿಯನ್ನು ಅಂಟಿಸಬೇಕು. ಹಿಂದೂಗಳು ದೈಹಿಕ, ಬೌದ್ಧಿಕ, ನ್ಯಾಯಾಂಗ ಮತ್ತು ಆರ್ಥಿಕ ‘ಇಕೊಸಿಸ್ಟಮ್’ ಹೊಂದಿರಬೇಕು. ದೇವಸ್ಥಾನಗಳು ನಮ್ಮ ಸಂಪರ್ಕದ ಕೇಂದ್ರಬಿಂದುವಾಗಬೇಕು. ದೇವಸ್ಥಾನಗಳಲ್ಲಿ ಸಂಪರ್ಕ ಸಭೆಗಳನ್ನು ಆಯೋಜಿಸಬೇಕು. ಹಿಂದೂಗಳಲ್ಲಿ ಶೌರ್ಯದ ಸಂಪ್ರದಾಯವಿದೆ. ಪ್ರತಿಯೊಬ್ಬ ಹಿಂದೂಗಳನ್ನು ತಲುಪುವ ಸಂವಹನ ವ್ಯವಸ್ಥೆಯನ್ನು ಹಿಂದೂಗಳು ರೂಪಿಸಬೇಕು, ಅದು ತುರ್ತು ಸಮಯದಲ್ಲಿ ಹಿಂದೂಗಳಿಗೆ ಸಹಾಯ ಮಾಡುತ್ತದೆ. ಹಿಂದೂ ರಾಷ್ಟ್ರ ಸ್ಥಾಪನೆಯಲ್ಲಿ ಈ ಸಂವಹನ ವ್ಯವಸ್ಥೆ ನಮಗೆ ಉಪಯುಕ್ತವಾಗಲಿದೆ, ಎಂದು ಹಿಂದೂ ಜನಜಾಗೃತಿ ಸಮಿತಿಯ ಸಂಭಾಜಿನಗರ ಜಿಲ್ಲಾ ಸಮನ್ವಯಕಿ ಕು. ಪ್ರಿಯಾಂಕಾ ಲೋಣೆ ಇವರು ‘ತುರ್ತು ಪರಿಸ್ಥಿತಿಯಲ್ಲಿ ಸಂವಹನ ವ್ಯವಸ್ಥೆ : ಕಾಲದ ಆವಶ್ಯಕತೆ’ ಈ ಕುರಿತು ಮಾತನಾಡುವಾಗ ಹೇಳಿದರು.