ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದ ಮೂರನೇ ದಿನ (ಜೂನ್ 26) : ಉದ್ಬೋದಕ ಸತ್ರ – ಹಿಂದೂ ಇಕೊಸಿಸ್ಟಮ್
ವಿದ್ಯಾಧಿರಾಜ್ ಸಭಾಂಗಣ – ಅರ್ಬನ್ ನಕ್ಸಲೀಯರು ಮತ್ತು ಕ್ರೈಸ್ತ ಪ್ರಚಾರಕರ ಮೈತ್ರಿಯಾಗಿದೆ. ಅರ್ಬನ್ ನಕ್ಸಲೀಯರು ಹಿಂದೂ ಧರ್ಮ ಮತ್ತು ದೇಶದ ಅಭಿವೃದ್ಧಿಯನ್ನು ವಿರೋಧಿಸುತ್ತಾರೆ. ಆದ್ದರಿಂದ, ಅವರು ಹಿಂದೂ ಧರ್ಮ, ದೇಶ ಮತ್ತು ಸಂಸ್ಕೃತಿಯ ವಿರೋಧದ ಅದೃಶ್ಯ ಶತ್ರುಗಳಾಗಿವೆ. ಅರ್ಬನ್ ನಕ್ಸಲೀಯರು ‘ಚಿಂತಕರು’ ಎಂದು ಮಾಧ್ಯಮಗಳಲ್ಲಿ ಸ್ಥಾನ ನಿರ್ಮಾಣ ಮಾಡಿದ್ದಾರೆ. ಸಾಮಾಜಿಕ ಮಾಧ್ಯಮವು ಕ್ರೈಸ್ತ ಪರ ‘ಯೂಟ್ಯೂಬರ್’ಗಳಿಂದ ತುಂಬಿದೆ. ಅವರನ್ನು ತಡೆಯಲು ನಮ್ಮವರು ವಿಫಲರಾಗಿದ್ದಾರೆ. ಅವರು ಪ್ರತಿ ಜಿಲ್ಲೆಯಲ್ಲೂ ‘ಯೂಟ್ಯೂಬ್’ಗಳನ್ನು ಹೊಂದಿದ್ದಾರೆ. ಆ ಮೂಲಕ ಕೇಂದ್ರ ಸರ್ಕಾರ ಹಾಗೂ ಹಿಂದೂ ಧರ್ಮದ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ಈ ಬಲೆಯನ್ನು ನಾಶಮಾಡಲು ನಾವು ‘ಇಕೊಸಿಸ್ಟಮ್’ (ಒಂದು ಸಿದ್ಧಾಂತವನ್ನು ವ್ಯವಸ್ಥಿತವಾಗಿ ಮುಂದೆ ಸಾಗಿಸುವ ವ್ಯವಸ್ಥೆ) ಅನ್ನು ಸಹ ನಿರ್ಮಾಣ ಮಾಡಬೇಕಾಗಿದೆ. ಅದಕ್ಕಾಗಿ ಹಿಂದೂ ಸಂಘಟನೆಗಳು ಹಳ್ಳಿಗಳಲ್ಲಿ ತಮ್ಮದೇ ಆದ ವ್ಯವಸ್ಥೆಯನ್ನು ರೂಪಿಸಿ, ದೇಶದಲ್ಲಿ ಅರ್ಬನ್ ನಕ್ಸಲೀಯರು ಸೃಷ್ಟಿಸುತ್ತಿರುವ ಸುಳ್ಳು ವಾತಾವರಣವನ್ನು ಬಯಲಿಗೆಳೆಯಬೇಕು ಎಂದು ಜಾರ್ಖಂಡ್ ನ ‘ರಾಂಚಿ ಸಿಟಿಜನ್ ಫೋರಂ’ನ ಉಪಾಧ್ಯಕ್ಷ ಡಾ. ರೆಣುಕಾ ತಿವಾರಿ ಇವರು ‘ವೈಶ್ವಿಕ್ ಹಿಂದೂ ರಾಷ್ಟ್ರ ಮಹೋತ್ಸವ’ದ ಮೂರನೇ ದಿನದಂದು ಹೇಳಿದರು. ಅವರು ‘ಜಾರ್ಖಂಡ್‌ನಲ್ಲಿ ಅರ್ಬನ್ ನಕ್ಸಲಿಸಂ’ ವಿಷಯದ ಕುರಿತು ಮಾತನಾಡುತ್ತಿದ್ದರು.