ಭಾರತದಲ್ಲಿ ಪ್ರಾಬಲ್ಯ ಸಾಧಿಸಲು ‘ಗಜ್ವಾ-ಎ-ಹಿಂದ್’ ಕಾರ್ಯನಿರತ ! – ಮೋನಿಕಾ ರೆಡ್ಡಿ, ಸಂಸ್ಥಾಪಕ ಅಧ್ಯಕ್ಷೆ, ಅಹಮ್ ಟಾಕ್ಸ್, ಭಾಗ್ಯನಗರ, ತೆಲಂಗಾಣ

ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಮೂರನೇ ದಿನ (ಜೂನ್ 26) ಉದ್ಬೋದನಾ ಸತ್ರ : ಹಿಂದೂ ಇಕೊಸಿಸ್ಟಮ್

ಮೋನಿಕಾ ರೆಡ್ಡಿ

ವಿದ್ಯಾಧಿರಾಜ ಸಭಾಂಗಣ – ಕುರಾನ್‌ನಲ್ಲಿ ‘ಗಜ್ವಾ-ಎ-ಹಿಂದ್’ ಉಲ್ಲೇಖವಿಲ್ಲ. ‘ಗಜ್ವಾ’ ಎಂದರೆ ‘ದಾಳಿ’ ಎಂದರ್ಥ. ಇಸ್ಲಾಂನಲ್ಲಿಯೂ ಅದರ ಉಲ್ಲೇಖ ಕಂಡು ಬರುವುದಿಲ್ಲ. ಆದರೂ ಇದರ ವ್ಯಾಪಕವಾಗಿ ಪ್ರಸಾರ ಮಾಡಲಾಗುತ್ತದೆ. ‘ಗಜ್ವಾ-ಎ-ಹಿಂದ್’ ಅನ್ನು ಹದೀಸ್‌ನಲ್ಲಿ ಉಲ್ಲೇಖಿಸಲಾಗಿದೆ. (ಪ್ರವಾದಿ ಮುಹಮ್ಮದ್ ಅವರ ಕಾರ್ಯವನ್ನು ಬಣ್ಣಿಸುವ ವಿವರಣೆಗಳು)

ಅಫ್ಘಾನಿಸ್ತಾನದಿಂದ ಇದು ಪ್ರಾರಂಭವಾಗುತ್ತದೆ. ಹಿಂದ ಭಾರತವನ್ನು ತಮ್ಮ ವಶಕ್ಕೆ ಪಡೆಯುವ ಉದ್ದೇಶವಾಗಿದೆ. ಇದನ್ನು ಅನೇಕ ಇಸ್ಲಾಮಿಕ್ ವೆಬ್‌ಸೈಟ್‌ಗಳಿಂದ ಪ್ರಸಾರ ಮಾಡಲಾಗುತ್ತದೆ. ಕೆಲವು ಮುಸ್ಲಿಂ ಚಿಂತಕರು ‘ಗಜ್ವಾ-ಎ-ಹಿಂದ್’ ಅನ್ನು ನಂಬುವುದಿಲ್ಲ. ‘ಗಜ್ವಾ-ಎ-ಹಿಂದ್’ ಈ ಪರಿಕಲ್ಪನೆಯು ಪಾಕಿಸ್ತಾನ ನಿರ್ಮಿಸಿದೆ ಎಂದು ಹೇಳುತ್ತಾರೆ. ‘ಗಜ್ವಾ-ಎ-ಹಿಂದ್’ ಹೆಸರಿನಲ್ಲಿ ‘ಜಿಹಾದ್’ ನಡೆಯುತ್ತಿದೆ. ‘ಗಜ್ವಾ-ಎ-ಹಿಂದ್’ ಪ್ರಕಾರ ಇಸ್ರೇಲ್ ಅನ್ನು ಸಹ ಆಡಳಿತದ ಅಡಿಯಲ್ಲಿ ತರಲಾಗುತ್ತದೆ. ‘ಗಜ್ವಾ-ಎ-ಹಿಂದ್’ನ ಗುರಿಯು ಪ್ರಪಂಚದಲ್ಲಿ ಪ್ರಾಬಲ್ಯ ಸಾಧಿಸುವುದಾಗಿದೆ. ‘ಗಜ್ವಾ-ಎ-ಹಿಂದ್’ ಮೂಲಕ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ. ಪ್ರಸ್ತುತ, 50 ಲಕ್ಷ ನುಸುಳುಕೋರರು ಒಂದು ಉದ್ದೇಶಕ್ಕಾಗಿ ಭಾರತದಲ್ಲಿ ಕೆಲಸ ಮಾಡುತ್ತಿದೆ. ಇದು ಆತಂಕಕಾರಿ ಪರಿಸ್ಥಿತಿಯಾಗಿದೆ. ‘ಗಜ್ವಾ-ಎ-ಹಿಂದ್’ ಎಂಬ ಭೂತವನ್ನು ನಿರ್ಮಿಸಲಾಗಿದೆ; ಹಿಂದೂಗಳು ಇದರ ಬಗ್ಗೆ ಕಾಳಜಿ ವಹಿಸಬೇಕು ಎಂದು ತೆಲಂಗಾಣದ ಅಹಮ್ ಟಾಕ್ಸ್‌ನ ಸಂಸ್ಥಾಪಕ ಅಧ್ಯಕ್ಷೆ ಮೋನಿಕಾ ರೆಡ್ಡಿ ಹೇಳಿದ್ದಾರೆ. ‘ಗಜ್ವಾ-ಎ-ಹಿಂದ್‌’ನಿಂದ ಭಾರತವನ್ನು ಹೇಗೆ ರಕ್ಷಿಸಬೇಕು’ ಎಂಬ ವಿಷಯದ ಕುರಿತು ಅವರು ಮಾತನಾಡುತ್ತಿದ್ದರು.