ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನ (ಜೂನ್ 25)ಸತ್ರ : ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ಮಾಡಿದ ಪ್ರಯತ್ನಗಳು |
ವಿದ್ಯಾಧಿರಾಜ ಸಭಾಂಗಣ – ಹಿಂದೆ ಹಿಂದೂ ಧರ್ಮವು ಅಫ್ಘಾನಿಸ್ತಾನದ ತನಕ ಹರಡಿತ್ತು. ಯಾರು ಹಿಂದೂ ಧರ್ಮವನ್ನು ಉಳಿಸಲು ಪ್ರಯತ್ನಿಸಿದರೋ ಆ ಪೂರ್ವಜರನ್ನು ನಾವು ಮರೆತಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲು ಹಿಂದೂಗಳು ಸಂಘಟಿತರಾಗಿ ಹಿಂದೂ ರಾಷ್ಟ್ರವನ್ನು ಸ್ಥಾಪಿಸುವುದು ಆವಶ್ಯಕವಾಗಿದೆ. ಎಂದು 108 ನೀಲಕಂಠ ಶಿವಾಚಾರ್ಯಜಿ ಮಹಾರಾಜ ಅವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇ ದಿನದಂದು ಪ್ರತಿಪಾದಿಸಿದರು.
ಪ.ಪೂ. ಡಾ. ಅಠವಲೆಯವರು ಸನಾತನ ಸಂಸ್ಥೆಯನ್ನು ಹಿಂದೂ ರಾಷ್ಟ್ರ ಸ್ಥಾಪನೆ ತನಕ ತಂದಿದ್ದಾರೆ ! – 108 ನೀಲಕಂಠ ಶಿವಾಚಾರ್ಯಜಿ ಮಹಾರಾಜ
ಹಿಂದೂಗಳು ದಾನ, ಪೂಜೆ, ಜಪ ಮತ್ತು ಧ್ಯಾನವನ್ನು ಮರೆತಿದ್ದಾರೆ. ಇವೆಲ್ಲವನ್ನೂ ಸನಾತನ ಸಂಸ್ಥೆಯ ಸಂಸ್ಥಾಪಕರಾದ ಪ.ಪೂ. ಡಾ. ಆಠವಲೆ ಇವರು ಆಚರಣೆಗೆ ತಂದರು. ಅವರು ಅನೇಕ ಯುವಕರು ಮತ್ತು ಹಿರಿಯರನ್ನು ಒಟ್ಟುಗೂಡಿಸಿದರು ಮತ್ತು ಸನಾತನ ಸಂಸ್ಥೆಗೆ ಜ್ಞಾನ ಮತ್ತು ಕರ್ಮವನ್ನು ಸೇರಿಸಿ 25 ವರ್ಷಗಳಲ್ಲಿ ಹಿಂದೂ ರಾಷ್ಟ್ರದ ಸ್ಥಾಪನೆಯ ತನಕ ತಂದಿರಿಸಿದ್ದಾರೆ.
108 ನೀಲಕಂಠ ಶಿವಾಚಾರ್ಯಜಿ ಮಹಾರಾಜ ಅವರು ತಮ್ಮ ಮಾತನ್ನು ಮುಂದುವರೆಸಿ, ”ಇತರರ ಅಭಿಪ್ರಾಯಗಳನ್ನು ನಂಬಿ ಹಿಂದೂಗಳು ವಿವಿಧ ಜಾತಿ, ಸಂಪ್ರದಾಯ, ಸಂಘಟನೆ, ಪಕ್ಷಗಳಲ್ಲಿ ವಿಭಜಿಸಲ್ಪಟ್ಟಿದ್ದಾರೆ. ನಾವೆಲ್ಲರೂ ಒಂದೇ ಆಗಿದ್ದೇವೆ’, ಎಂಬ ಮಂತ್ರವನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಸಂಘಟಿತರಾಗಬೇಕು. ಹಿಂದೂಗಳನ್ನು ವಿಭಜಿಸಲು ನಿರಂತರವಾಗಿ ಷಡ್ಯಂತ್ರಗಳನ್ನು ಮಾಡಲಾಗುತ್ತಿದೆ. ಹಿಂದೂಗಳು ಈ ಪಿತೂರಿಯನ್ನು ಗುರುತಿಸಬೇಕು ಮತ್ತು ಹಿಂದೂ ರಾಷ್ಟ್ರಕ್ಕಾಗಿ ಪ್ರಯತ್ನಿಸಬೇಕು. ಇದರೊಂದಿಗೆ ನಮ್ಮ ದೇಶದಲ್ಲಿ ನಾನಾ ಸಂಪ್ರದಾಯಗಳಿವೆ. ಆ ಎಲ್ಲ ಸಂಪ್ರದಾಯಗಳು ‘ನಾವು ಕೇವಲ ಹಿಂದೂಗಳಾಗಿದ್ದೇವೆ’, ಎಂಬುದನ್ನು ಗಮನದಲ್ಲಿಟ್ಟುಕೊಂಡು ಸಂಘಟಿತರಾಗಬೇಕು. ನಾವೆಲ್ಲರೂ ಶಿವನಿಂದ ನಿರ್ಮಾಣವಾಗಿದ್ದೇವೆ. ಆದ್ದರಿಂದ ನಮ್ಮೆಲ್ಲರ ಕುಲ ಒಂದೇ ಆಗಿದೆ.” ಎಂದು ಹೇಳಿದರು.