ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನದ ಎರಡನೇ ದಿನ (ಜೂನ್ 25)ಅಧಿವೇಶನ: ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ಮಾಡಿದ ಪ್ರಯತ್ನಗಳು |
ವಿದ್ಯಾಧಿರಾಜ ಸಭಾಗೃಹ – ‘ಕಥಾ ನಿರೂಪಣೆ ಸಮರ’(ಕಾಲ್ಪನಿಕ ಕಥೆಗಳನ್ನು ಹರಡುವ ಯುದ್ಧ) ಇದೇನೂ ಹೊಸದಲ್ಲ. 18 ನೇ ಶತಮಾನದಲ್ಲಿಯೂ ಭಾರತದ ಬಗ್ಗೆ ಇಂತಹ ತಪ್ಪು ಕಲ್ಪನೆಗಳನ್ನು ಇತರ ದೇಶಗಳಲ್ಲಿ ಹರಡಲಾಗಿತ್ತು. ಇಂದು ‘ವಾಟ್ಸ್ ಆಪ್’ ಜಗತ್ತಿನ ಅತಿ ದೊಡ್ಡ ‘ವಿದ್ಯಾಪೀಠ’ ಆಗಿದೆ. ಇಂದು ಜಗತ್ತಿನ ಮುಖ್ಯ ಪ್ರಸಾರ ಮಾಧ್ಯಮಗಳ ಪ್ರಾಬಲ್ಯ ಇಲ್ಲದಂತಾಗಿ, ಸಾಮಾಜಿಕ ಮಾಧ್ಯಮಗಳ ಪ್ರಾಬಲ್ಯ ಹೆಚ್ಚಾಗಿದೆ. ಎಲೋನ್ ಮಸ್ಕ್ ಇವರು ಇದರ ಬಗ್ಗೆ(ಟೆಸ್ಲಾದಂತಹ ಜಗತ್ಪ್ರಸಿದ್ಧ ಪ್ರತಿಷ್ಠಾನದ ಮಾಲೀಕರು) ಮುಂದಿನಂತೆ ಹೇಳಿದ್ದಾರೆ, ‘ಸಾಮಾನ್ಯ ಜನರೇ ಇಂದು ಕಥೆಗಳನ್ನು ನಿರೂಪಿಸಬಹುದು ಅಥವಾ ಅದರಲ್ಲಿ ಬದಲಾವಣೆ ಮಾಡಬಲ್ಲರು. ಅದು ನಿಮ್ಮ ನಮ್ಮ ಕೈಯಲ್ಲಿದೆ’. ಇಂದು ಸಾಮಾನ್ಯ ಜನರು ಹೋರಾಟ, ಘಟನೆ, ಯಾವುದೇ ಒಳ್ಳೆಯ ಕೆಟ್ಟ ಪ್ರಸಂಗದಲ್ಲಿ ಮೊದಲು ಮೊಬೈಲ ಹೊರಗೆ ತೆಗೆಯುತ್ತಾರೆ. ಇಂದು ಎಲ್ಲರೂ ಪತ್ರಕರ್ತರಾಗಿದ್ದಾರೆ. ಕಥಾನಕ ಯುದ್ಧ( ಕಥಾನಕ ಸಮರ) ಬಹಳ ಮಹತ್ವದ್ದಾಗಿದೆ. ಇಂದು ಎಲ್ಲರೂ ಸನಾತನದ ಸಾಧಕರಾಗಲು ಸಾಧ್ಯವಿಲ್ಲ; ಆದರೆ (ಧರ್ಮಕಾರ್ಯ ಮಾಡಲು) ಈ ಕಥಾನಕ ಯುದ್ಧದಲ್ಲಿ ಖಂಡಿತವಾಗಿಯೂ ಪಾಲ್ಗೊಳ್ಳಬಹುದು ಎಂದು ಬೆಂಗಳೂರಿನ `ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀ. ಸಂತೋಷ ಕೆಂಚಂಬ ಇವರು ಉದ್ಗರಿಸಿದರು. ವೈಶ್ವಿಕ ಹಿಂದೂ ಮಹೋತ್ಸವದಲ್ಲಿ ಜೂನ್ 25 ರಂದು ದಿನದ ಸತ್ರದಲ್ಲಿ `ಸಾಮಾಜಿಕ ಮಾಧ್ಯಮದ ಮೂಲಕ ಹಿಂದೂ ವಿರೋಧಿ ಪ್ರಚಾರವನ್ನು ಎದುರಿಸುವುದು ಹೇಗೆ?’ ಈ ವಿಷಯದ ಮೇಲೆ ಅವರು ಮಾತನಾಡುತ್ತಿದ್ದರು.
Narrative war – today narratives are being set by the people. If we unite, we can control the narrative. Every Hindu karyakarta should play a role in this narrative war – @santoshken Founder, RashtraDharma
Vaishvik Hindu Rashtra Mahotsav 2024 I Goa
🛑Narrative war is a very old… pic.twitter.com/Pba7EWqyA0
— Sanatan Prabhat (@SanatanPrabhat) June 25, 2024
ಸ್ವಾಮಿ ವಿವೇಕಾನಂದರು ಅಮೇರಿಕೆಗೆ ಹೋಗಿ ಭಾರತದ ಕುರಿತಾದ ಕಾಲ್ಪನಿಕ ಕಥೆಯನ್ನು ಬಯಲಿಗೆಳೆದರು!18 ನೇ ಶತಮಾನದಲ್ಲಿಯೂ ಸಂಪೂರ್ಣ ಜಗತ್ತಿನಲ್ಲಿ ಭಾರತದಲ್ಲಿ ಹಳೆಯ, ಭಾರತವನ್ನು ಹಿಂದಕ್ಕೆ ಒಯ್ಯುವ ಪೂಜೆ- ಪುನಸ್ಕಾರ ಮಾಡಲಾಗುತ್ತದೆ. ಅಲ್ಲಿ ಅಸ್ಪೃಶ್ಯತೆ ಇದೆ, ಅಲ್ಲಿ ಹೆಣ್ಣನ್ನು ಗೌರವಿಸಲಾಗುತ್ತಿಲ್ಲ’, ಈ ರೀತಿಯ ಅನೇಕ ಕಾಲ್ಪನಿಕ ಕಥೆಗಳನ್ನು ಹಬ್ಬಿಸಲಾಗಿತ್ತು. ಒಬ್ಬ ಸಂತರು ಅಮೇರಿಕಾಕ್ಕೆ ಹೋದರು ಮತ್ತು ಅವರ ನಡುವೆ ಹೋಗಿ ಅವರು ಇವೆಲ್ಲವೂ ಕಾಲ್ಪನಿಕ ಕಥೆಗಳೆಂದು ತಿಳಿಸಿ ಅದನ್ನು ವಿರೋಧಿಸಿದರು ಮತ್ತು ಅವರು ಶಕ್ತಿ ಪ್ರದರ್ಶನವನ್ನು ಮಾಡಿದರು. ಆ ಸಂತರು ಬೇರೆ ಯಾರೂ ಅಲ್ಲ, ಸ್ವಾಮಿ ವಿವೇಕಾನಂದರೇ ಆಗಿದ್ದರು. |